Advertisement

ಸರ್ವಿಸ್‌ ಚಾರ್ಜ್‌ ಪಾವತಿ ಗ್ರಾಹಕರ ಆಯ್ಕೆ

03:45 AM Apr 22, 2017 | Team Udayavani |

ನವದೆಹಲಿ: ಇನ್ನು ಮುಂದೆ ನೀವು ಹೋಟೆಲ್‌ ಅಥವಾ ರೆಸ್ಟೋರೆಂಟ್‌ಗೆ ಹೋದಾಗ ನೀಡುವ ಬಿಲ್‌ನಲ್ಲಿ “ಸರ್ವಿಸ್‌ ಚಾರ್ಜ್‌’ ಸೇರಿದ್ದರೆ ಅದನ್ನು ಪಾವತಿ ಮಾಡುವುದು ಅಥವಾ ಮಾಡದಿರುವುದು ನಿಮ್ಮ ಆಯ್ಕೆಯಾಗಿರಲಿದೆ. ಬಿಲ್‌ ಜತೆ “ಸರ್ವಿಸ್‌ ಚಾರ್ಜ್‌’ ಸೇರಿಸಿ ಅದನ್ನು ಕೊಡಲೇಬೇಕು ಎಂದು ಹೋಟೆಲ್‌ನವರು ಇನ್ನು ಹೇಳುವಂತಿಲ್ಲ. 

Advertisement

ಈ ಕುರಿತ ಹೊಸ ಮಾರ್ಗಸೂಚಿಗಳಿಗೆ ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. “ಸರ್ವಿಸ್‌ ಚಾರ್ಜ್‌ ಪಾವತಿ ಮಾಡುವುದು ಸಂಪೂರ್ಣ ಗ್ರಾಹಕರ ಆಯ್ಕೆಯೇ ಹೊರತು ಕಡ್ಡಾಯವಲ್ಲ. ಸರ್ವಿಸ್‌ ಚಾರ್ಜ್‌ ನೀಡುವುದು ಕಡ್ಡಾಯವೆನ್ನುವ ಹೋಟೆಲ್‌ಗ‌ಳ ವಿರುದ್ಧ ಗ್ರಾಹಕರು ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಬಹುದು,’ ಎಂದು ಹೊಸ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳಿದ್ದು, ಇದರಿಂದ ಹೋಟೆಲ್‌ ಮತ್ತು ರೆಸ್ಟೋರೆಂಟ್‌ ಬಿಲ್‌ನಲ್ಲಿ ಗ್ರಾಹಕರಿಗೆ ಶೇ.20ರಷ್ಟು ಹಣ ಉಳಿತಾಯವಾಗಲಿದೆ.

“ಸರ್ವಿಸ್‌ ಚಾರ್ಜ್‌ಗೆ ಸಂಬಂಧಿಸಿದಂತೆ ಅನುಮೋದನೆಧಿಗೊಂಡ ಮಾರ್ಗಸೂಚಿಗಳ ಪ್ರಕಾರ, ಹೋಟೆಲ್‌ಗ‌ಳು ಬಿಲ್‌ನಲ್ಲಿರುವ ಸರ್ವಿಸ್‌ ಚಾರ್ಜ್‌ ಸ್ಥಳವನ್ನು ಖಾಲಿ ಬಿಡಬೇಕು. ನಂತರ ಗ್ರಾಹಕರು ಬಯಸಿದರೆ ಮಾತ್ರ ಸೇವಾ ಶುಲ್ಕ ನೀಡಬಹುದು. ಈ ಮಾರ್ಗಸೂಚಿಗಳನ್ನು ಎಲ್ಲ ರಾಜ್ಯ ಸರ್ಕಾರ ಗಳಿಗೂ ಕಳುಹಿಸಿ, ಅಗತ್ಯ ಕ್ರಮಕ್ಕೆ ಸೂಚಿಸಲಾಗುವುದು,’ ಎಂದು ಕೇಂದ್ರ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next