Advertisement

ಜಿಎಸ್‌ಟಿಯಲ್ಲಿ ಗ್ರಾಹಕ ಸಾರ್ವಭೌಮ: ವಿಶ್ವನಾಥ

12:41 PM Jul 12, 2017 | Team Udayavani |

ಹುಬ್ಬಳ್ಳಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯಲ್ಲಿ ಗ್ರಾಹಕನೇ ಸಾರ್ವಭೌಮ. ಇನ್ನೈದು ವರ್ಷಗಳಲ್ಲಿ ದೇಶದ ಆರ್ಥಿಕಾಭಿವೃದ್ಧಿಯ ಚಿತ್ರಣವೇ ಬದಲಾಗಲಿದೆ ಎಂದು ಲೆಕ್ಕಪರಿಶೋಧಕಎಸ್‌. ವಿಶ್ವನಾಥ ಭಟ್‌ ಹೇಳಿದರು. ಸ್ಥಳàಯ ವಕೀಲರ ಸಂಘದ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಎಸ್‌ಟಿ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಜಿಎಸ್‌ಟಿಯು ಉತ್ಪಾದಕರು, ವಿತರಕರು ಹಾಗೂ ಗ್ರಾಹಕರಿಗೆ ಅನುಕೂಲಕರವಾಗಿದೆ. ದೇಶದ ಶೇ. 1.15ರಷ್ಟು ಜನ ಮಾತ್ರ ತೆರಿಗೆ ಕಟ್ಟುತ್ತಿದ್ದಾರೆ. 128 ಕೋಟಿ ಜನರ ಭಾರ 2 ಕೋಟಿ ಜನರ ಮೇಲೆ ನಿಂತಿದೆ.  ಶೇ. 56ರಷ್ಟು ದೇಶದ ಆರ್ಥಿಕತೆ ಸಮಾನಾಂತರವಾಗಿ ನಡೆಯುತ್ತಿದೆ. 

ವಿಶ್ವದ ಆರ್ಗನೈಜೇಶನ್‌ ಫಾರ್‌ ಎಕನಾಮಿಕ್‌ ಕೋ-ಆಪರೇಶನ್‌ ಆ್ಯಂಡ್‌ ಡೆವಲಪಮೆಂಟ್‌ (ಒಇಸಿಡಿ) ಎಂಬ ಆಂತರಿಕ ಸಂಘಟನೆ ಪ್ರಕಾರ ಜಿಡಿಪಿಯಲ್ಲಿ ತೆರಿಗೆಯ ಪಾಲು ಶೇ. 32ರಷ್ಟಿದೆ. ಆದರೆ ಭಾರತದಲ್ಲಿ ಅದು ಶೇ. 16ರಷ್ಟಾಗಿದೆ. ಜಿಎಸ್‌ಟಿ ಜಾರಿಗೊಳಿಸದಿದ್ದರೆ ಭಾರತದ ಆರ್ಥಿಕ ಸ್ಥಿತಿ ಅಧೋಗತಿಗೆ ಸಾಗುತ್ತಿತ್ತು.

2020ರ ವೇಳೆಗೆ ಭಾರತದ ಜಿಡಿಪಿ ದರ ವೃದ್ಧಿಸಲಿದೆ ಎಂದರು. ದೇಶದಲ್ಲಿ ಶೇ. 85ರಷ್ಟು ವರ್ತಕರ ವಾರ್ಷಿಕ ವಹಿವಾಟು 75 ಲಕ್ಷ ರೂ. ಒಳಗೆ ಇದೆ. ಜಿಎಸ್‌ಟಿ ಜಾರಿಯಿಂದಾಗಿ ಸರಕು ಉತ್ಪಾದಕ ದೇಶಗಳಿಗೆ ಶೇ. 28ರಷ್ಟು ಹಾನಿಯಾಗಲಿದೆ. ಶೇ. 59ರಷ್ಟು ಖಾದ್ಯತೈಲವನ್ನು ಕಪ್ಪು ಖಾತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು.

ಶೇ. 81ರಷ್ಟು ಸರಕುಗಳಿಗೆ ಶೇ. 0-18 ತೆರಿಗೆ ಹಾಕಲಾಗಿದೆ. ಜಿಎಸ್‌ಟಿಯಿಂದ ಸರಕುಗಳ ಸರಬರಾಜಿನ ಸಾರಿಗೆ ಖರ್ಚು ಶೇ. 50ರಷ್ಟು ಕಡಿಮೆಯಾಗಲಿದೆ. ವರ್ತಕರು ಪ್ರತಿ ತಿಂಗಳು ರಿಟರ್ನ್ ಸಲ್ಲಿಸುವ ಅವಶ್ಯಕತೆಯಿಲ್ಲ. ಜಿಎಸ್‌ ಟಿಯಿಂದ ವಸ್ತುವಿಗೆ ಮೊದಲೇ ಕರ ಪಾವತಿಸುವ ಬದಲು ಬಳಕೆ ವೇಳೆ ಪಾವತಿಸಬೇಕಾಗುತ್ತದೆ.

Advertisement

ವರ್ತಕರಿಗೆ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ಅನ್ವಯವಾಗುತ್ತದೆ. ಜಿಎಸ್‌ಟಿ ಜಾರಿಗಿಂತ ಮೊದಲು ಕೇಂದ್ರದ ತೆರಿಗೆ ಅಪರೋಕ್ಷವಾಗಿತ್ತು, ಈಗ ಪರೋಕ್ಷವಾಗಿದೆ. ಜಿಎಸ್‌ಟಿ ರಾಜ್ಯಗಳ ನಡುವಿನ ಆರ್ಥಿಕ ದಿಗ್ಬಂಧನ ತೊಡೆದು ಹಾಕುವುದಾಗಿದೆ. ವಕೀಲರು ಜಿಎಸ್‌ಟಿ ಬಗ್ಗೆ ಅರಿತುಕೊಂಡರೆ ಸಮಾಜಕ್ಕೆ ಉಪಯುಕ್ತ ಎಂದರು. 

ಲೆಕ್ಕ ಪರಿಶೋಧಕ ಶೇಷಗಿರಿ ಕುಲಕರ್ಣಿ ಮಾತನಾಡಿ, ಜಿಎಸ್‌ಟಿ ಸ್ವಯಂ ಕಾರ್ಯನೀತಿ ಯಾಂತ್ರಿಕ ವ್ಯವಸ್ಥೆ ಆಗಿದೆ. ಇದು ತೆರಿಗೆ ಕಡಿಮೆ ಮಾಡುತ್ತದೆ. ಸ್ಪರ್ಧೆ ಹೆಚ್ಚಿಸುತ್ತದೆ. ದೇಶದಲ್ಲಿ 15 ವರ್ಷಗಳಿಂದ ತೆರಿಗೆ ಬದಲಾವಣೆ ಆಗಿರಲಿಲ್ಲ. ಆದರೆ ಜಿಎಸ್‌ಟಿ ಕುರಿತು ಅನಗತ್ಯವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಜನರಲ್ಲಿ ಭಯ, ಆತಂಕ ಸೃಷ್ಟಿಸಲಾಗುತ್ತಿದೆ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾ. ನಾಗರಾಜ, ವಕೀಲರ ಸಂಘದ ಅಧ್ಯಕ್ಷ ಡಿ.ಎಂ. ನರಗುಂದ, ಉಪಾಧ್ಯಕ್ಷಸಿ.ವಿ. ಮಲ್ಲಾಪುರ, ಬಾಬುಗೌಡ ಶಾಬಳದ, ಮಂಜುಳಾ ಪಡೇಸೂರ ಇದ್ದರು. ರತ್ನಮಾಲಾ ಕಿತ್ತೂರ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಅಶೋಕ ಅಣೆಕರ ಸ್ವಾಗತಿಸಿದರು. ಉಮೇಶ ಹುಡೇದ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next