Advertisement
ಪಟ್ಟಣದ ಹೆಸ್ಕಾಂ ಉಪ ವಿಭಾಗ ಕಚೇರಿಯಲ್ಲಿ ನಡೆದ ತಾಲೂಕಿನ ವಿದ್ಯುತ್ ಗ್ರಾಹಕರ ಕುಂದು ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
Related Articles
Advertisement
ತಾಲೂಕಿನಲ್ಲಿ ರೈತರು ಕೃಷಿಗೆ ಹಗಲು ನಾಲ್ಕು ತಾಸು ನಂತರ ರಾತ್ರಿ ಮೂರು ತಾಸು ವಿದ್ಯುತ್ ನೀಡಲು ವಿನಂತಿಸಿಕೊಂಡಾಗ ಈ ನಿಟ್ಟಿನಲ್ಲಿ ಇಲಾಖೆ ಪ್ರಯತ್ನಿಸುತ್ತಿದೆ. ಕೆಲವು ದಿನ ಕೆಲವು ಕಡೆ ಹಗಲು ಮೂರು ಗಂಟೆ, ರಾತ್ರಿ ನಾಲ್ಕು ಗಂಟೆ, ಕೆಲವು ಕಡೆ ಹಗಲು ನಾಲ್ಕು ಗಂಟೆ, ರಾತ್ರಿ ಮೂರು ಗಂಟೆ ವ್ಯವಸ್ಥೆಯ ಮೇಲೆ ವಿದ್ಯುತ್ ನೀಡಲಾಗುವದೆಂದರು.
ಗ್ರಾಹಕರು ತಮ್ಮ ಸಮಸ್ಯೆಗಳಿಗೆ ಉಪ ವಿಭಾಗಕ್ಕೆ ಬಂದು ದಾಖಲಿಸಿದರೆ ಪರಿಹಾರ ನೀಡಲಾಗುವದು. ಅದಲ್ಲದೆ ಇನ್ನು ಮುಂದೆ ತಿಂಗಳ ಮೂರನೇ ಶನಿವಾರ ಗ್ರಾಹಕರ ಸಭೆ ನಡೆಸಲಾಗುವದು ಎಂದರು.
ಗ್ರಾಹಕರು ಹೊಸ ಲೇಔಟ್ ದಲ್ಲಿ ಗಿರಣಿಗೆ ವಿದ್ಯುತ್ ಸಂಪರ್ಕ ನೀಡದೇ ಇರುವ ಕುರಿತು, ಮನೆಯ ಮೇಲೆ ವಿದ್ಯುತ್ ತಂತಿ ಹೋಗಿರುವ ಕುರಿತು, ಟಿಸಿ ಸುಟ್ಟ, ರಸ್ತೆಯಲ್ಲಿ ಕಂಬು ಇರುವ ಕುರಿತು, ಲೈನ್‌ಮನ್ ಸ್ಪಂದನೆ ಮಾಡುತ್ತಿಲ್ಲ, ಆಕ್ರಮ ಸಕ್ರಮ ಟಿಸಿ ಬಂದಿಲ್ಲ, ಕೆಇಬಿಯವರು ಸೇವಾ ಪ್ರಮಾಣ ಪತ್ರ ನೀಡದೇ ಇರುವ ಕುರಿತು, ಟಿಸಿಯ ಕಂಬ ಶಿಥಿಲಗೊಂಡ ಸೇರಿದಂತೆ ಅನೇಕ ಸಮಸ್ಯೆ ಕುರಿತು ಚರ್ಚಿಸಿ ಕೆಲವೊಂದು ಸ್ಥಳದಲ್ಲಿಯೇ ಪರಿಹಾರ ನೀಡಿ ಕೆಲವು ಸಮಸ್ಯೆಗಳಿಗೆ ಕಾಲಾವಕಾಶ ಕೋರಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದರು.
ರೈತರು ಮತ್ತು ಗ್ರಾಹಕರಾದ ಇಂಡಿಯ ಕಿರಣ ಧನಶೆಟ್ಟಿ, ಗುಲಾಬಚಂದ ಪಾಂಡರೆ, ಲಚ್ಯಾಣ ಗ್ರಾಮದ ನಿಂಗಪ್ಪ ಯಳಮೇಲಿ, ಸಾತಪುರ ಗ್ರಾಮದ ನಿಂಗಪ್ಪ ವಾಲೀಕಾರ, ಭೂಯ್ನಾರ ಗ್ರಾಮದ ಶಂಕರ ಚಿಕ್ಕಮಣೂರ, ಹಂಚಿನಾಳದ ಅಶೋಕ ಬರಗುಡಿ, ತಡವಲಗಾ ಗ್ರಾಮದ ಮಹಾಂತೇಶ ಅಂಗಡಿ ಸೇರಿದಂತೆ ಅನೇಕರು ತಮ್ಮ ಸಮಸ್ಯೆಗಳನ್ನು ಅರ್ಜಿ ಸಲ್ಲಿಸಿ ತೊಂದರೆ ಹೇಳಿ ಚರ್ಚಿಸಿದರು.
ವೇದಿಕೆಯಲ್ಲಿ ಎಇಇ ಎಸ್.ಆರ್. ಮೆಂಡೆಗಾರ, ಡಿ.ಎಂ. ಮೂಲಿಮನಿ, ಸುಧೀರ ಮದಭಾವಿ, ಆರ್.ಕೆ. ಚವ್ಹಾಣ, ಜಿ.ಡಿ. ಬಾಬಾನಗರ ಸಂತೋಷ ಬನಗೋಡೆ, ಸಂಗಮೇಶ ಇಮ್ಮನದ, ಆರ್.ಬಿ. ಕುಂಬಾರ ಸೇರಿದಂತೆ ಅನೇಕರಿದ್ದರು.