ದೇವನಹಳ್ಳಿ: ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 74 ಲಕ್ಷ ರೂ. ಹಣ ಸಾಗಿಸುತ್ತಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಯೊಬ್ಬರು ಸಿಕ್ಕಿಬಿದ್ದಿದ್ದು ಸಿಐಎಸ್‌ಎಫ್ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ ಕಸ್ಟಮ್ಸ್ ಅಧಿಕಾರಿ ಇರ್ಫಾನ್ ಅಹಮದ್ ಮೊಹಮದ್ ಬಂಧಿತ. ಆರೋಪಿ ಇರ್ಫಾನ್ ತನ್ನ ಪತ್ನಿಯೊಂದಿಗೆ ಲಕ್ನೋಗೆ ತೆರಳಲು ಚೆನ್ನೈನಿಂದ ರಸ್ತೆಯ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ
ಬಂದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ 9.20ಕ್ಕೆ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಸ್ಟಾಟ್ ಆಗುವ ವೇಳೆ ಸಿಐಎಸ್‌ಎಫ್ ಅಧಿಕಾರಿಗಳ ಪರಿಶೀಲನೆಗೆ ಇರ್ಫಾನ್ ಒಳಗಾಗಿದ್ದಾರೆ. ಈ ವೇಳೆ ಅವರ ಪತ್ನಿಯು ಸೂಟ್ ಕೇಸ್ ತೆಗೆದುಕೊಂಡು ಬಾತ್‌ರೂಂನತ್ತ ತೆರಳಿ 10 ಲಕ್ಷ ರೂ. ಬಿಸಾಡುತ್ತಿದ್ದಾಗ ಸಿಐಎಸ್‌ಎಫ್ ಪೊಲೀಸರಿಗೆ ಅನುಮಾನ ಬಂದಿದೆ.
ಇದನ್ನೂ ಓದಿ:ಸಚಿವ ಬಿ.ಸಿ. ಪಾಟೀಲ್ ರೈತರ ಕ್ಷಮೆ ಕೇಳಬೇಕು: ಶಾಸಕ ಪುಟ್ಟರಾಜು ಆಗ್ರಹ
ತಕ್ಷಣವೇ ಈ ದಂಪತಿ ಬಳಿ ಇದ್ದ ಸೂಟ್‌ಕೇಸ್ ಅನ್ನು ಸಂಪೂರ್ಣವಾಗಿ ಪರೀಕ್ಷೆಗೆ ಒಳ ಪಡಿಸಿದಾಗ ಸುಮಾರು 74.81 ಲಕ್ಷ ರೂ. ಬ್ಯಾಗ್‌ನಲ್ಲಿ ಪತ್ತೆ ಆಗಿದೆ. ಸೂಟ್‌ಕೇಸ್‌ನಲ್ಲಿ ಕಂತೆ ಕಂತೆ ಹಣ ಸೇರಿದಂತೆ 2 ದುಬಾರಿ ಮೊಬೈಲ್, ಆ್ಯಪಲ್ ವಾಚ್ ಹಾಗೂ 5
ಚಿನ್ನದ ಓಲೆ ಹಾಗೂ ಒಂದು ಚಿನ್ನದ ನೆಕ್ಲೆಸ್ ಸೇರಿದಂತೆ 200 ಗ್ರಾಂ ನಷ್ಟು ಚಿನ್ನ ಬ್ಯಾಗ್‌ನಲ್ಲಿ ದೊರೆತಿದೆ.
customs officer
ಇಷ್ಟೆಲ್ಲಾ ಹಣ ಹಾಗೂ ನಗದು ಜಪ್ತಿ ಮಾಡಿದ ಸಿಐಎಸ್‌ಎಫ್ ಪೊಲೀಸರು ಪ್ರಕರಣವನ್ನು ಐಟಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದು ಐಟಿ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ.