Advertisement
– ಸೀತಾಫಲದಲ್ಲಿ ವಿಟಮಿನ್ ಎ, ಸಿ, ಕಬ್ಬಿಣಾಂಶ, ನಾರಿನ ಅಂಶ, ಮೆಗ್ನಿಷಿಯಂನಂಥ ಪೋಷಕಾಂಶಗಳು ಹೇರಳವಾಗಿವೆ.
Related Articles
Advertisement
– ಬಾಣಂತಿಯರು ಈ ಹಣ್ಣನ್ನು ಸೇವಿಸಿದರೆ ನಿಶ್ಶಕ್ತಿ ಕಾಡುವುದಿಲ್ಲ.
– ಈ ಹಣ್ಣಿನಲ್ಲಿರುವ ಕ್ಯಾಲ್ಸಿಯಂ ಅಂಶದಿಂದ ಬೆಳೆಯುವ ಮಕ್ಕಳ ಮೂಳೆ ಗಟ್ಟಿಯಾಗುತ್ತದೆ.
-ಸೀತಾಫಲವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
– ಗರ್ಭಿಣಿಯರ ಆರೋಗ್ಯಕ್ಕೆ ಮತ್ತು ಹೆರಿಗೆಯ ನಂತರ ಎದೆಹಾಲು ಉತ್ಪನ್ನ ಹೆಚ್ಚಳಕ್ಕೆ ಸೀತಾಫಲ ಸಹಕಾರಿ.
– ಸೀತಾಫಲದಲ್ಲಿ ವಿಟಮಿನ್ ಬಿ6 ಸಮೃದ್ಧವಾಗಿದ್ದು, ಶ್ವಾಸ ಸಂಬಂಧಿ ರೋಗಗಳನ್ನು ನಿಯಂತ್ರಿಸುತ್ತದೆ.
-ರಕ್ತಶುದ್ಧಿಯಲ್ಲಿ ಸಹಾಯ ಮಾಡುತ್ತದೆ.– ಸೀತಾಫಲದ ಎಲೆಗಳನ್ನು ನುಣ್ಣಗೆ ಅರೆದು ಹಚ್ಚಿದರೆ ಗಾಯ ಬೇಗ ವಾಸಿಯಾಗುತ್ತದೆ.
-ದಿನವೂ ಬೆಳಗ್ಗೆ ಸೀತಾಫಲವನ್ನು ಸೇವಿಸಿದರೆ ನರಗಳ ಬಲಹೀನತೆ ನಿವಾರಣೆಯಾಗುತ್ತದೆ.
– ಗ್ಯಾಸ್, ಆ್ಯಸಿಡಿಟಿ, ಅಜೀರ್ಣ, ಮಲಬದ್ದತೆಯಂಥ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ರಾಮಬಾಣ. -ಹರ್ಷಿತಾ ಕುಲಾಲ್ ಕಾವು