Advertisement

ಕರಿಬೇವು ಲಾಭ ಹಲವು

12:13 PM Aug 16, 2019 | mahesh |

ಒಗ್ಗರಣೆ ಎಂದ ಕೂಡಲೇ ಮೊದಲು ನೆನಪಾಗುವುದು ಕರಿಬೇವು. ಒಗ್ಗರಣೆಯ ಘಮ ಹೆಚ್ಚಿಸುವ ಕರಿಬೇವನ್ನು ತಿನ್ನದೆ ಅದನ್ನು ತಟ್ಟೆಯ ಮೂಲೆಗೆ ತಳ್ಳುವವರೇ ಹೆಚ್ಚು. ಆದರೆ, ಕರಿಬೇವಿನಿಂದ ಆರೋಗ್ಯಕ್ಕೆ ಆಗುವ ಲಾಭಗಳು ತಿಳಿದರೆ, ಮುಂದೆಂದೂ ಅದನ್ನು ಮೂಲೆಗೆ ತಳ್ಳಲು ಮನಸ್ಸು ಬರುವುದಿಲ್ಲ.

Advertisement

.ಕರಿಬೇವಿನಲ್ಲಿ ನಾರಿನಂಶ, ಪ್ರೊಟೀನ್‌, ಕ್ಯಾಲ್ಸಿಯಂ, ಕ್ಯಾರೊಟೀನ್‌ ಹಾಗೂ ಹಲವಾರು ಬಗೆಯ ಅಮೈನೋ ಆಮ್ಲಗಳು ಹೇರಳವಾಗಿವೆ.
.ನೆಗಡಿ, ಕೆಮ್ಮು, ಅಸ್ತಮಾದಂಥ ಶ್ವಾಸಕೋಶದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
.ಕರಿಬೇವಿನಲ್ಲಿ, ವಾಯುಕಾರಕ ಅಂಶವನ್ನು ತೆಗೆದುಹಾಕುವ ಗುಣವಿದ್ದು, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.
.ಅನಗತ್ಯ ವಿಷ ಪದಾರ್ಥವನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.
.ಕರಿಬೇವು ಪಿತ್ತ ನಿವಾರಕವಾಗಿ ಕೆಲಸ ಮಾಡಬಲ್ಲದು, ಇದು ಅತಿಸಾರಕ್ಕೆ ಮದ್ದು.
.ಕೊಲೆಸ್ಟರಾಲ್‌ ಕಡಿಮೆ ಮಾಡಿ, ಹೊಟ್ಟೆಯ ಬೊಜ್ಜು ಕರಗಿಸುವಲ್ಲಿ, ತೂಕ ನಿಯಂತ್ರಣದಲ್ಲಿ ಸಹಕಾರಿ.
.ಕರಿಬೇವಿನ ಸೇವನೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ.
.ಕರಿಬೇವಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್‌ ದೇಹದ ಸಕ್ಕರೆ ಅಂಶವನ್ನು ನಿಯಂತ್ರಿಸಬಲ್ಲದು.
.ಲಿವರ್‌ ಸಂಬಂಧಿತ ಕಾಯಿಲೆಗಳಿಂದ ರಕ್ಷಿಸುತ್ತದೆ.
.ಕರಿಬೇವಿನಲ್ಲಿರುವ ಫೋಲಿಕ್‌ ಆಮ್ಲ ಮತ್ತು ಅಧಿಕವಾದ ಕಬ್ಬಿಣದ ಅಂಶ ರಕ್ತಹೀನತೆಯನ್ನು ನಿವಾರಿಸುತ್ತದೆ.
.ಕರಿಬೇವಿನ ರಸವನ್ನು, ಬೆಲ್ಲದಲ್ಲಿ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಮುಂಜಾನೆ ಕುಡಿದರೆ ರಕ್ತಹೀನತೆ ನಿಯಂತ್ರಣಕ್ಕೆ ಬರುತ್ತದೆ.
.ಕರಿಬೇವನ್ನು ಕುದಿಸಿ, ಕಷಾಯ ಮಾಡಿ ಕುಡಿಯುವುದರಿಂದ ಮೂತ್ರಕ್ಕೆ ಸಂಬಂಧಿಸಿದ ಕಾಯಿಲೆಗಳು ಗುಣವಾಗುತ್ತವೆ.
.ಅಪೌಷ್ಟಿಕತೆಯಿಂದ ಕೂದಲು ಬಿಳಿಯಾಗುವುದನ್ನು ಕರಿಬೇವು ತಡೆಯಬಲ್ಲದು.
.ಪ್ರತಿದಿನ ಬೆಳಗ್ಗೆ ಕರಿಬೇವಿನ ಎಲೆ ತಿನ್ನುವುದರಿಂದ, ಕೊಬ್ಬರಿ ಎಣ್ಣೆಯಲ್ಲಿ ಕರಿಬೇವನ್ನು ಕುದಿಸಿ ತಲೆಗೆ ಹಚ್ಚುವುದರಿಂದ ಬಾಲನೆರೆ ತಡೆಯಬಹುದು.
.ಕೂದಲು ಸೊಂಪಾಗಿ ಬೆಳೆಯಲು, ಕರಿಬೇವಿನಲ್ಲಿರುವ ಕಬ್ಬಿಣಾಂಶ ಸಹಾಯ ಮಾಡುತ್ತದೆ.

ಸಂಗಮೇಶ ಎನ್‌. ಜವಾದಿ

Advertisement

Udayavani is now on Telegram. Click here to join our channel and stay updated with the latest news.

Next