Advertisement
ಒಂದೇ ಸಾಲಿನಲ್ಲಿ ಹೇಳುವುದಾದರೆ “ಕರ್ವಾಲೊ’ ಸೃಜನಶೀಲವಾಗಿದೆ. ನಿರೂಪಣೆ, ವಸ್ತುವಿನ ಆಯ್ಕೆ-ಹೀಗೆ ಎಲ್ಲದರಲ್ಲೂ ಲೇಖಕ ರಾದ ತೇಜಸ್ವಿಯವರು ತೋರಿಸಿರುವ ಸೃಜನ ಶೀಲತೆ ಪ್ರಶಂಸನೀಯ. ಬದುಕಿನ ಅನುಭವ ಗಳನ್ನೇ ಕಾದಂಬರಿಯ ರೂಪಕ್ಕಿಳಿ ಸಿರುವ ರೀತಿ ಗಮನಾರ್ಹ. ತಮಾಷೆಯಲ್ಲೇ ಸಾಗುವ “ಕರ್ವಾಲೊ’ ಪಯಣ ಕೊನೆ ಕೊನೆಗೆ ವೈಜ್ಞಾನಿ ಕತೆ ಮತ್ತು ವೈಚಾರಿಕತೆಯ ವಿವಿಧ ಮಜಲುಗಳಿಗೆ ತೆರೆ ದುಕೊಳ್ಳುತ್ತದೆ. ಮನುಷ್ಯ, ಪರಿಸರ ಉಳಿಸಿಕೊಂಡಿರುವ ಅಚ್ಚರಿಗಳು, ಜೈವಿಕ ಪ್ರಭೇ ದಗಳು, ಹಳ್ಳಿ ಸೊಗಡು, ಸಾಮಾನ್ಯರಲ್ಲಿ ಸಾಮಾನ್ಯರ ಜೀವನಶೈಲಿ.. ಹೀಗೆ ಜೀವ ನಕ್ಕೆ ಹತ್ತಿರವಾದ ಹಲವಾರು ವಿಷಯಗಳ ರಸಾಯನವಾಗಿ ಕರ್ವಾಲೊ ಮೈದಳೆದಿದೆ.
Related Articles
Advertisement
ಇಲ್ಲಿ ನಾಯಕ ತೇಜಸ್ವಿಯವರಾದರೂ ಮಂದ ಣ್ಣನೂ ಅಷ್ಟೇ ಮುಖ್ಯವೆನಿಸುತ್ತಾನೆ. ತಮಾಷೆ ಯಿಂದ ಶುರುವಾಗಿ ಲೇಖಕರನ್ನು ಜೀವವಿಕಾಸ ದೆಡೆಗೆ ಕರೆದೊಯ್ದುದರಲ್ಲಿ ಅವನ ಪಾತ್ರ ದೊಡ್ಡದು. ಜೀವವಿಕಾಸ, ಜೇನುತುಪ್ಪ ಮಾತ್ರವಲ್ಲದೇ ಸಮಾಜದ ಓರೆಕೋರೆಗಳ ಬಗ್ಗೆಯೂ ಮುಕ್ತವಾಗಿ ಬರೆದಿ¨ªಾರೆ. ಮದುವೆ ಮತ್ತು ಅದಕ್ಕೆ ಅಂಟಿಕೊಂಡಿರುವ ಕೊಂಡಿ ಗಳು, ದೊಡ್ಡವರ ಸಣ್ಣತನ, ಕೃಷಿ, ಕಳ್ಳಭಟ್ಟಿ, ಪೊಲೀಸರು ಸಹಿತ ಹತ್ತು ಅನೇಕ ವಿಷಯಗಳು ಕಾದಂಬರಿ ಯಲ್ಲಿವೆ. ಲೇಖಕರ ನೆಚ್ಚಿನ ನಾಯಿಯಾದ ಕಿವಿ, ಬಿರಿಯಾನಿ ಕರಿಯಪ್ಪ , ಪ್ರಭಾಕರ ಮತ್ತು ಇತರ ಪಾತ್ರಗಳು ಕಾದಂಬ ರಿಯ ಓಘಕ್ಕೆ ಸಹಕರಿಸಿವೆ.
ಈ ಪಾತ್ರಗಳು ಸಹ್ಯಾದ್ರಿಯ ತಪ್ಪಲಿನಲ್ಲಿ ಏನ ನ್ನೋ ಹುಡುಕಲು ಹೋಗುತ್ತವೆ. ಆ ಸನ್ನಿವೇಶ ದಲ್ಲಿ ಸೃಷ್ಟಿಯೆಂಬುದು ಮಾಯೆಯೋ ಅಲ್ಲವೋ, ಎಲ್ಲವೂ ವೈಜ್ಞಾನಿಕವೋ, ಪ್ರಾಕೃತಿಕ ವೋ, ಅನ್ವೇಷಣೆಯ ಬೆನ್ನೇರುವುದೋ ಅಥವಾ ತೀರಾ ಸಾಮಾನ್ಯನ ಬದುಕೇ ಚಂದ ಎಂದುಕೊಳ್ಳುವುದೋ ಮುಂತಾದ ಪ್ರಶ್ನೆಗಳು ಮೂಡುತ್ತವೆ. ಇದನ್ನು ಓದುಗರಿಗೆ ವರ್ಗಾ ಯಿಸಿರುವ ಬಗೆ ವಿಶೇಷವಾಗಿದೆ.
ಅನೇಕ ದೃಶ್ಯಗಳು ನಗು ತರಿಸಿದರೂ ಓದು ಗನನ್ನು ಅಗಾಧ ಚಿಂತನೆಗೆ ಒಡ್ಡುತ್ತವೆ. ಮೇಲ್ನೋಟಕ್ಕೆ ಹಗುರವಾಗಿ ಕಂಡರೂ ಓದಿನ ಬಳಿಕ ಇಡೀ ಕೃತಿ ಬಹಳವಾಗಿ ಕಾಡುತ್ತದೆ. ಅಂದ ಹಾಗೆ, ಕರ್ವಾಲೊ ಎಂದರೆ ಏನು? ಸಹ್ಯಾದ್ರಿಯಲ್ಲಿ ಹುಡುಕಲು ಹೊರಟ ಸಂಜೀವಿನಿಯ ಹೆಸರಾ? ಕೃತಿಯನ್ನು ಓದಿ ಆ ಕೌತುಕವನ್ನು ತಣಿಸಿಕೊಳ್ಳಿ.
-ಅಭಿಷೇಕ್ ಎಸ್., ಬೆಂಗಳೂರು