Advertisement

ಬಂದು ಕೂಡು ಪಕ್ಕ,ಕೊಡದೇ ಬರಿದೇ ಲೆಕ್ಕ

03:45 AM Jan 31, 2017 | |

ಇಬ್ಬರೂ ಮಾಲ್‌ನಲ್ಲಿ ಕುಳಿತಿದ್ದರು.
       ಅದೂ ಇದೂ ಹರಟೆ ನಡೆಯುತ್ತಿತ್ತು. ಈ ಮೇ ಬಂದರೆ ಅವರ ಪ್ರೇಮಕ್ಕೆ ಬರೋಬ್ಬರಿ ಎರಡು ವರ್ಷ ತುಂಬುತ್ತದೆ. ಮೊದಲು ಶುರುವಾಗಿದ್ದು ಕಾಲೇಜಿನಲ್ಲೇ. ರಂಜಿತಾಗೆ ಇವರಿಬ್ಬರೂ ಕಾಮನ್‌ ಫ್ರೆಂಡ್ಸ್‌. ಅವಳ ಜೊತೆ ಮಾತಾಡುವಾಗ, ಒಂದೆರಡು ಸಲ ಕಾಫಿ ಡೇನಲ್ಲಿ ಮೀಟ್‌ ಆದಾಗ ಅವಳೂ ಬಂದಿದ್ದಳು, ತುಂಬ ಸುಂದರಿಯಲ್ಲ. ಯಾಕೋ ಕಂಡ ತಕ್ಷಣ ಮತ್ತೆ ಮತ್ತೆ ನೋಡಬೇಕೆಂಬ ಆಸೆ ಆಗುತ್ತಿತ್ತು. ಆಮೇಲೆಲ್ಲಾ ರಂಜಿತಾಳನ್ನ ಮೀಟ್‌ ಆಗೋದು ಅವನಿಗೆ ನೆಪವಾಗಿತ್ತು. ಯಾಕೋ ತುಂಬ ಸಿಗೋಣ ಅನ್ನುತ್ತಿದ್ದಾನಲ್ಲಾ ಅಂತ ಮೊದಲು ರಂಜಿತಾಗೆ ಅನುಮಾನ ಬಂತು, ಆಮೇಲೆ  ತನ್ನ ಬಗ್ಗೆ ಮಾತಾಡೋದಕ್ಕಿಂತ ಇವಳ ಬಗ್ಗೆನೇ ವಿಚಾರಿಸೋದು, ಅವಳನ್ನೂ ಕರ್ಕೊಂಡ್‌ ಬಾ ಅನ್ನೋದು ಶುರುವಾದಮೇಲೆ ಇದು ಅದೇ ಅಂತ ಅವಳಿಗೆ ಖಾತ್ರಿಯಾಯ್ತು.

Advertisement

ಹಾಗೆ ಶುರುವಾಯ್ತು ಪ್ರೀತಿ.
         ಅವರಿಬ್ಬರೂ ತುಂಬ ಮಾತಾಡಿದ್ದರು, ಸುತ್ತಿದ್ದರು, ಎರಡು ವ್ಯಾಲಂಟೈನ್‌ ಡೇ ಬಂದು ಹೋಗಿದ್ದವು, ಹತ್ತಿಪ್ಪತ್ತು ಗಿಫ್ಟ್ಗಳಾದರೂ ಇವರಿಬ್ಬರ ಕೈ ಬದಲಾಗಿದ್ದವು. ಇಬ್ಬರೂ ಮಾಲ್‌ ಸುತ್ತುವುದೇ ಒಂದು  ಸಂತೋಷ. ಸುಮ್ಮನೆ ಬಟ್ಟೆಯನ್ನು ಮುಟ್ಟುತ್ತಾ, ಮಾತಾಡುತ್ತಾ, ಸುಮ್ಮನೆ ಗಿಫ್ಟ್ ಐಟಂ ಬಗ್ಗೆ ವಿಚಾರಿಸುತ್ತಾ, ರೇಟ್‌ ಎಷ್ಟಿವೆ ಅಂತ ಒಂದು ರೌಂಡ್‌ ಸರ್ವೇ ಮಾಡುತ್ತಾ, ಕೈಗೆ ಕೈ ತಾಗಿಸುತ್ತಾ, ಸುಮ್ಮನೆ ಕಳೆದು ಹೋಗುತ್ತಾ, ಆಮೇಲೆ ಫೋನ್‌ ಮಾಡಿ ಸುಮ್ಮನೇ ಹುಡುಕುವ ನಾಟಕವಾಡುತ್ತಾ ವಿಚಿತ್ರವಾದ ಪ್ರೇಮ ಕತೆಯೊಂದಕ್ಕೆ ತಾವೇ ಪಾತ್ರವಾಗಿದ್ದರು. ಒಂದು ಸಲವಂತೂ ಆ ಮಾಲ್‌ಗೆ ಪರಿಚಯದ ಒಬ್ಬರು ಬಂದು, ಇಬ್ಬರೂ ಅವರ ಕಣ್ತಪ್ಪಿಸಿ ಓಡಾಡುವ ಸಾಹಸದಲ್ಲಿ ಫೋನ್‌ನಲ್ಲೇ ಮಾತಾಡಿಕೊಂಡು ಕಳೆದು, ಕಡೆಗೆ ರಾತ್ರಿಯೆಲ್ಲಾ ಅವಳು ಮುನಿಸಿಕೊಂಡು ಅವನಿಗೆ ಸಮಾಧಾನ ಮಾಡುವ ಹೊತ್ತಿಗೆ ಸಾಕುಸಾಕಾಗಿತ್ತು.

ಈಗ ಮತ್ತೆ ಸುಮ್ಮನೆ ಕುಳಿತಿದ್ದರು ಮಾಲ್‌ನ ಕಾಫಿ ಡೇನಲ್ಲಿ.

ಅವಳಾಕೋ ತುಂಬ ಡಲ್‌ ಇದ್ದಳು.

“ಯಾಕೇ ಏನಾಯೆ¤à?’

Advertisement

ಕ್ಯಾಪಚಿನೋ ಮುಂದಿಟ್ಟುಕೊಂಡ ಅವಳನ್ನು ಅನುನಯದಿಂದ ಕೇಳಿದ ಅವನು.

“ಏನಿಲ್ಲ ಹೋಗೋ’

ಅವಳು ಮುಲುಗಿದಳು.

“ಅಯ್ಯೋ, ಅದೇ ಯಾಕೆ ಏನೂ ಇಲ್ಲ?’

“ಯಾಕೆ, ಏನಾದ್ರೂ ಇದ್ರೇ ಬರಬೇಕಾ.. ಪರವಾಗಿಲ್ಲ ಕಣೋ ನೀನು.. ಟೈಮ್‌ಪಾಸ್‌ ನಿಂಗೆ.. ನೀವ್‌ ಹುಡ್ಗರ ಹಣೆಬರಹನೇ ಇಷ್ಟು.. ಬರಬೇಕು, ನಗ್ಬೇಕು, ಮಾತಾಡ್ಬೇಕು, ಕೈಕೈ ಹಿಡ್ಕೊàಬೇಕು, ತಬೊRàಬೇಕು.. ಇಷ್ಟೇ.. ಅದಿಲ್ಲ ಅಂದ್ರೆ ನಾವ್‌ ನಿಮ್ಗೆ ವೇಸ್ಟ್‌ ಆಗಿ ಕಾಣಿ¤àವಲ್ವಾ?’

ಅವನಿಗೆ ಪೇಚಿಗೆ ಸಿಕ್ಕಿಕೊಂಡಿತು.

“ಇದೊಳ್ಳೆ ಕತೆಯಲ್ಲ, ಅಯ್ಯೋ.. ಈಗೇನಾಯ್ತು ಅಂತ.. ಸುಮ್ನಿದ್ದೀಯಲ್ಲ ಯಾಕೆ ಅಂದೆ.. ಓಕೆ, ಸುಮ್ನೆà ಇರು.. ಡಿಸ್ಟರ್ಬ್ ಮಾಡಲ್ಲ.. ಸರೀನಾ?’

ಅವನು ಸುಮ್ಮನಾದ. ಮೊಬೈಲ್‌ ತೆಗೆದು, ವಾಟ್ಸಪ್‌ ಆನ್‌ ಮಾಡಿ ಏನೋ ಚೆಕ್‌ ಮಾಡತೊಡಗಿದ.

ಅವಳಿಗೆ ಮತ್ತೆ ರೇಗಿತು.

“ಆಹಾ.. ಏನ್‌ ಜನಾನೋ.. ಇದೊಂದ್‌ ಬೇಗ ಮಾಡ್ತೀರಾ.. ಸಿಟ್ಟು ಮಾಡ್ಕೊಂಡ್ರೆ ಸಾಕು.. ನಿಮ್ಮ ಪಾಡಿಗೆ ನೀವ್‌ ವಾಟ್ಸಪ್‌ ನೋಡ್ಕೊಂಡ್‌ ಕೂತ್ರಾಯ್ತು.. ಈಗ ಮೊಬೈಲ್‌.. ಮದ್ವೆ ಆಗಿ ನಾಲ್ಕೋ ಐದೋ ವರ್ಷಕ್ಕೆ ಟಿವಿ.. ಆಮೇಲೆ ಸಿಸ್ಟಮ್‌.. ಆಮೇಲೆ ಹೋಮ್‌ ಥೇಟರ್‌..’

ಅವಳು ರೇಗಿದಳು, ಕಣ್ಣಂಚಲ್ಲೊಂದು ಮುತ್ತಿನ ಕಣ್ಣೀರು ಬಂದು ಕುಳಿತಿತು.

ಅವನಿಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ.

ಆಚೀಚೆ ನೋಡಿದ, ಬ್ರೇಕಪ್‌ ಕ್ಲೈಮ್ಯಾಕ್ಸ್‌ಗೆ ಅಪಾಯಿಂಟ್‌ಮೆಂಟ್‌ ತೆಗೆದುಕೊಂಡು ಬಂದ ಜೋಡಿ ಥರ ಕಂಡರು ಇವರಿಬ್ಬರೂ.

ಅವನ ತಲೇಲಿ ನೂರಾರು ಫ್ಲಾಷ್‌ಕಟ್‌ಗಳು. ರಿವರ್ಸ್‌ ಆರ್ಡರ್‌ನಲ್ಲಿ. ಬೇರೆ ಯಾರನ್ನಾದ್ರೂ ನೋಡಿದ್ನಾ, ಬೇರೆ ಯಾರೋ ಹುಡ್ಗಿàದು ಫೋನ್‌ ನಂಬರ್‌ ನನ್‌ ಕಾಂಟ್ಯಾಕ್ಟ್‌ನಲ್ಲಿ ಸೇವ್‌ ಆಗಿದ್ಯಾ, ಪೇಸ್‌ಬುಕ್‌ ಪ್ರೊಫೈಲ್‌ನಲ್ಲಿ ನನ್ನ ಜೊತೆ ಯಾವಾªದ್ರೂ ಹುಡ್ಗಿ ಇದಾÛ.. ಅಥಾÌ ಇವÛ ಮನೇಲಿ ಯಾವಾªದ್ರೂ ಹುಡ್ಗನ್ನ ನೋಡಿದ್ದಾರಾ?

ಅವನು ಆಚೀಚೆ ನೋಡಿ, ಅವಳ ಸಮೀಪಕ್ಕೆ ಹೋಗಿ ಕುಳಿತ. ಅವಳ ಭುಜದ ಸುತ್ತ ತೋಳು ಹಾಕಿದ. ಎಡದೋಳು ಅಮುಕಿದ.

“ಕರವಲನಕೋಮಮೆ’.

ಅವಳ ಕಿವಿಯಲ್ಲಿ ಪಿಸುಗುಟ್ಟಿದ.

“ಏನು ಹಂಗಂದ್ರೆ?’

ಸಿಡುಕಿದಳು ಅವಳು.

“ಅರ್ಥ ಆಗ್ಲಿಲ್ವಾ.. ಸಿಂಪಲ್ಲಾಗ್‌ ಏನಾಯ್ತು ಅಂದೆ ಕಣೇ!’

“….’

“ಅಲ್ವೇ.. ನಂಗಿನ್ನೂ ತಾಳಿ ಕಟ್ಟಿ ಮದ್ವೆ ಮಾಡ್ಕೊಳ್ಳಿಳ್ಳ ಕಣೇ.. ಗಂಡನ್‌ ಥರ ರೇಗ್ತಿàಯಲ್ಲೇ!’

ಅವಳು ಸರಿದು ಕುಳಿತಳು.

“ತಮ್ಮ ಕೋಪಕ್ಕೆ ಕಾರಣವೇನು?’

ಅವಳು ಅವನನ್ನೇ ದುರುಗುಟ್ಟಿ ನೋಡಿದಳು. ಸರಿದು ಕುಳಿತಳು.

ಸ್ಲಿಪ್‌ ಡಿಸ್ಕ್.

“ಈಗ ಅಂಥದ್ದೇನಾಯ್ತು? ಹೋಗಿ ಒಂದ್‌ ಸುತ್ತು ಮಾಲ್‌ ರೌಂಡ್‌ ಹಾಕ್ಕೊಂಡ್‌ ಬರೋಣಾÌ..’

ಅವಳ ಕಣ್ತುಂಬಿತು.

“ನಂಗೊತ್ತಿಲ್ವ… ಎಲÅ ಥರ.. ನೀನೂ ಹಂಗೇ..’

ಅವನಿಗೆ ಅರ್ಥವಾಗಲಿಲ್ಲ.

“ಹಾಗ್‌ ಎಲ್ಲಾ ಹೇಳ್ಬೇಡ ಕಣೇ.. ನೀನೂ ಹಂಗೇ ಅಂದ್ರೆ ನೋಡೊªàರು ಏನ್‌ ಅಂದೊRಳ್ಳೋಲ್ಲ..’

“ಹಾಗಲ್ಲ, ಮದ್ವೆ ಮಾಡ್ಕೊಂಡ್‌ ನಾಲ್ಕು ವರ್ಷ ಆದ್ಮೇಲೆ ಜಗಳ ಮಾಡ್ತೀಯಾ.. ಆಮೇಲೆ ಹೊಡೀತೀಯಾ.. ನಂಗೊತ್ತು.. ಎಲÅ ಹಂಗೇ ನೀನೂ..’

ದೇವರ ಥರ ಕುಳಿತವನು ಅವಳನ್ನೇ ನೋಡಿದ.

“ಮದ್ವೆ ಮಾಡ್ಕೊಂಡು, ಆಸ್ತಿನೆಲ್ಲಾ ಕಟ್ಕೊಂಡೋಳ್‌ ಹೆಸ್ರಿಗೆ ಬರ್ಕೊಡೋದು.. ಹೊಡುª, ಜಗಳ ಮಾಡಿ ಅಧಿಕಾರ ಮಾಡೋದು.. ನಂಗೊತ್ತಿಲ್ವಾ ಗಂಡಸ್ರ ಬುದ್ಧಿ..’

ಅವಳನ್ನೇ ನೋಡಿದ- ತುಟಿ ಕೊಂಕಿತ್ತು, ಕಣ್ಣು ಕೆಂಪಾಗಿತ್ತು, ಹುಬ್ಬಿನ ಸುತ್ತ ನರಗಳು ಬಿಗಿದುಕೊಂಡಿದ್ದವು. ಯಾಕೋ ತುಂಬ ಪಾಪ ಅನ್ನಿಸಿಬಿಟ್ಟಿತು.

ಅವಳನ್ನು ಬರಸೆಳೆದು ತಬ್ಬಿಕೊಂಡ ಅವನು, ಅವಳ ಭುಜದ ಬಿಸಿ ಅವನಿಗೆ ಮತ್ತೂ ಪ್ರೀತಿ ಹುಟ್ಟಿಸಿತು. ಕಣ್ಮುಚ್ಚಿ ಅವಳ ಹಣೆಯ ಮೇಲೊಂದು ಬಿಸಿಮುತ್ತು ಒತ್ತಿದ.

ಇಡೀ ಜಗತ್ತೇ ಒಂದು ಕ್ಷಣ ಸ್ಟಿಲ್‌ ಆಗಿ ನಿಂತುಬಿಟ್ಟಿದೆ ಅಂತ ಅನ್ನಿಸಿತು ಅವನಿಗೆ; ಆ ಕ್ಷಣ ಅವಳಿಗೂ..

ಕಿವಿತುಂಬ ತುಂಬಿಕೊಂಡಿರುವ ಮುಂಗುರುಳನ್ನು ಸರಿಸದೇ ಕಿವಿಯಲ್ಲಿ ಪಿಸುಗುಟ್ಟಿದ..

“ಹೊಡುದ್ರೆ ನೀನ್‌ ಸುಮ್ನಿರ್ತೀಯಾ. ನನ್ನ ಕೊಲೆ ಮಾಡುದ್ರೆ.. ನನ್ನ ಜೀವದ್‌ ಮೇಲೆ ಭಯ ಇದ್ಯಪ್ಪ..’

ಅವಳಿಗೆ ಯಾಕೋ ಅವನ ಅಪ್ಪುಗೆಯ ಹದಕ್ಕೆ ಜೋರಾಗಿ ನಗು ಬಂತು.

ನಗಲು ಹೋಗಿ ನೆತ್ತಿ ಹತ್ತಿತು. ಕಣ್ಣೀರು, ನಗು, ಸಿಟ್ಟು ಸಮೇತ ಅವಳು ಗೊಕ್ಕೆಂದಳು. ಸುತ್ತಲಿನವರೆಲ್ಲಾ ಅವರನ್ನೇ ನೋಡಿದರು- ಜಗಳ ಸರಿ ಹೋಗಿರಬೇಕು ಅಂತ ಅನ್ನಿಸಿ.

ಅವಳು ಮರುಕ್ಷಣ ಅವನನ್ನೇ ದುರುಗುಟ್ಟಿ ನೋಡಿ ಜೋರಾಗಿ ಕಪಾಳಕ್ಕೆ ಹೊಡೆದುಬಿಟ್ಟಳು.

ಚೂರು ಕಿವಿ ಹತ್ತಿರ ಬಿದ್ದಿದ್ದರೆ ಆಯಕಟ್ಟಿನ ಜಾಗಕ್ಕೆ ತಾಗಿ ಅವನು ಸತ್ತೇ ಹೋಗುತ್ತಿದ್ದ.

ನಿಟ್ಟುಸಿರು ಬಿಡುತ್ತಿದ್ದ ಸುತ್ತಮುತ್ತಲಿನವರು ಆ ಘಟನೆಗೆ ಸ್ತಬ್ಧರಾದರು.

ಅವನಿಗೆ ಸುತ್ತಲಿನವರ ನೋಟ, ತಿಂದ ಪೆಟ್ಟು, ಆದ ಅವಮಾನಕ್ಕೆ ತಾಳಿಕೊಳ್ಳಲಾಗಲಿಲ್ಲ.

ಎದ್ದು ದುರುದುರನೆ ನಡೆದು ಹೋದ.

ರಾತ್ರಿಯೆಲ್ಲಾ ಅವನ ಕಣ್ಣಲ್ಲಿ ನೀರಿತ್ತು. ಮಧ್ಯರಾತ್ರಿ ಅವಳು ಮೆಸೇಜು ಮಾಡಿದಳು.

“ಥ್ಯಾಂಕ್ಸ್‌.. ವಾಪಾಸ್‌ ಹೊಡೊÂàವಷ್ಟು ತಾಕತ್ತಿಲ್ಲ ಅಂತ ಗೊತ್ತಾಯ್ತು.. ಲವ್‌ ಯೂ!’

ಫಿಲವ್‌ಸಫಿ
ಪ್ರೀತಿಯಲ್ಲಿ ಅತಿಯಾದ ಅನುಮಾನವೂ ಅಪಾಯ, ಅತಿಯಾದ ನಂಬಿಕೆಯೂ ಅಪಾಯ. ಆ ಕ್ಷಣ ಹುಟ್ಟುವ ಭಾವಗಳಲ್ಲಿ ಜೀವಿಸುತ್ತಾ ಹೋದರೆ ಪ್ರೀತಿ ಹದಬೆಚ್ಚನೆಯ ನೀರಿನ ಥರ ಸುಡುವುದೂ ಇಲ್ಲ, ಕೊರೆಯುವುದೂ ಇಲ್ಲ. ಪ್ರತಿ ಕ್ಷಣ ನಿಮ್ಮ ಲವ್‌ ಅನ್ನು ಎಕ್ಸ್‌ಪೆರಿಮೆಂಟ್‌ಗೆ ಒಗ್ಗಿಸಿಕೊಳ್ಳಿ.

– ವಿಕಾಸ್‌ ನೇಗಿಲೋಣಿ

Advertisement

Udayavani is now on Telegram. Click here to join our channel and stay updated with the latest news.

Next