ಡಾ|ಪಿ.ವಿ.ಭಂಡಾರಿಯವರನ್ನು ಸಂಪರ್ಕಿಸಿದರು. ಎಲ್ಲ ಮಾತ್ರೆಗಳೂ ಇವರಿಗೆ ನಿದ್ರೆ ಬರಿಸಲು ವಿಫಲವಾದವು. ಡಾ|ಭಂಡಾರಿಯವರು ಬಳಕೆದಾರರ ಹೋರಾಟಗಾರ
ಡಾ|ರವೀಂದ್ರನಾಥ ಶ್ಯಾನು ಭೋಗರನ್ನು ಸಂಪರ್ಕಿಸಿ ಏನಾದರೂ ಸಲಹೆ ನೀಡಿರೆಂದರು.
Advertisement
ಡಾ|ಶ್ಯಾನುಭೋಗರು ಮನೋರೋಗಕ್ಕೆ ಒಳಗಾದ ವೈದ್ಯರಿಗೆ 1 ಲ.ರೂ. ಚೆಕ್ ತೋರಿಸಿ “ನಾಳೆ ಸಂಜೆಯೊಳಗೆ ನೀವು ಏನಾದರೂ ಮಾಡಿ ನನ್ನ ಮರ್ಯಾದೆ ತೆಗೆಯಬೇಕು. ಏನು ಬೇಕಾದರೂ ಮಾಡಿ. ಎಷ್ಟು ಬೇಕಾದರೂ ಬಯ್ದುಕೊಳ್ಳಿ. ಆದರೆ ನನ್ನ ಮರ್ಯಾದೆ ಮಾತ್ರ ತೆಗೆಯಬೇಕು. ಈ ಚೆಕ್‌ನ್ನು ಡಾ|ಭಂಡಾರಿಯವರಿಗೆ ಕೊಡುತ್ತೇನೆ. ನನ್ನ ಮರ್ಯಾದೆ ತೆಗೆದ ತತ್‌ಕ್ಷಣ ಹಣವನ್ನು ಡಾ|ಭಂಡಾರಿ ಕೊಡುತ್ತಾರೆ’ ಎಂದರು. ಘನಘೋರ ಅಪರಾಧಿಗಳ ತಲೆಗೆ ಪೊಲೀಸ್ ಇಲಾಖೆ ನಗದು ಬಹುಮಾನ ಘೋಷಣೆ ಮಾಡುವಂತೆ ಶ್ಯಾನುಭೋಗರು ತನ್ನದೇ ಮರ್ಯಾದೆ ತೆಗೆದವರಿಗೆ ನಗದು ಬಹುಮಾನ ಘೋಷಿಸಿದ್ದರು. ಮನೋರೋಗಿಯಾಗಿದ್ದ ವೈದ್ಯರಿಗೆ ಆಶ್ಚರ್ಯವಾಯಿತು. “ನಾನು ಏನಾದರೂ ತಪ್ಪು ಮಾಡಿದರಲ್ಲವೆ ನೀವು ನನ್ನ ಮರ್ಯಾದೆ ತೆಗೆಯುವುದು? ಇಲ್ಲವಾದರೆ ಹೇಗೆ ಸಾಧ್ಯ?’ ಎಂದು ಡಾ|ಶ್ಯಾನುಭೋಗರು ಹೇಳಿದ್ದೇ ತಡ ಮನೋರೋಗಿಯಾಗಿದ್ದ ವೈದ್ಯರಿಗೆ ತತ್‌ಕ್ಷಣ ಜ್ಞಾನೋದಯವಾಯಿತು. ಆಗ ಟಚ್‌ಸ್ಕ್ರೀನ್ ಮೊಬೈಲ್ ಸೆಟ್ ಬಂದದ್ದಷ್ಟೆ. ಕೂಡಲೇ ಆ ಪತ್ರಕರ್ತನಿಗೆ ದೂರವಾಣಿ ಕರೆ ನೀಡಿ “ನೀನು ಏನು ಬರೆದುಕೊಳ್ಳುತ್ತಿಯೋ ಬರೆದುಕೊಳ್ಳು. ನಾನು ಏನೂ ತಪ್ಪು ಮಾಡಿಲ್ಲ’ ಎಂದು ಗದರಿಸಿದರು. ಮನೋರೋಗಿಯಾಗಿದ್ದ ವೈದ್ಯರು ನಾರ್ಮಲ್ ಸ್ಥಿತಿಗೆ ಬಂದರು.
Related Articles
Advertisement
ಬೆಳಗ್ಗೆ 4 ಗಂಟೆಗೆದ್ದು ಯೋಗಾಸನ – ಪ್ರಾಣಾಯಾಮ ಮಾಡಿದರೆ, ವಾಕಿಂಗ್/ ಸೈಕ್ಲಿಂಗ್ ಮಾಡಿದರೆ ಉತ್ತಮ. ಆದರೆ ಇದು ಯಾರಿಗೆ? ಹೀಗೆ ಮಾಡುವವರಿಗೆ ಮಾತ್ರ. ಹಾಗೆಯೇ ಸ್ವಾರ್ಥ, ಹೊಟ್ಟೆಕಿಚ್ಚು, ಹೆಣ್ಣು-ಹೊನ್ನು (ಕಾಂಚನ ) - ಮಣ್ಣಿನ ಪರಿಧಿ ದಾಟಿದ ಕಾಮನೆ ಇತ್ಯಾದಿ ಕೆಟ್ಟ ಅಭಿರುಚಿಗಳನ್ನು ಬೆಳೆಸಿಕೊಂಡರೆ ಕೆಟ್ಟದ್ದು. ಯಾರಿಗೆ? ಹೀಗೆ ಮಾಡುವವರಿಗೆ ಮಾತ್ರ, ಜತೆಗೆ ಪಕ್ಕದಲ್ಲಿರುವ ವರಿಗೂ. ಇಂತಹವರನ್ನು ಸಾಗ ಹಾಕುವ ಕಲೆ ಬೇಕಾಗುತ್ತದೆ. ಇದೇ ತಣ್ತೀವನ್ನು ಶಾಪ/ ವರಕ್ಕೆ ಅನ್ವಯಿಸಿದರೂ ಉತ್ತರ ವಿಷ್ಟೆ. ಶಾಪ / ವರವನ್ನು ಸ್ವೀಕರಿಸಲು ನಾವು ಅರ್ಹರೇ? ಅರ್ಹರಾದರೆ ಯಾರಾದರೊಬ್ಬ ಅಸಾಮಿ ಇವುಗಳನ್ನು ಕೊಡಲು ತಯಾರಾಗಿರುತ್ತಾನೆ, ಆಗ ಅವು ಬಂದು ವಕ್ಕರಿ ಸುತ್ತವೆ. ಅಂತಹವರನ್ನು ಸ್ವಾಗತಿಸಿ “ಆತ ಶಾಪ ಕೊಡುವಂತೆ ನಾನು ವರ್ತಿಸಿದೆ’ ಎಂದು ಹೇಳುವವರನ್ನು ನೋಡುತ್ತಿಲ್ಲ.
“ಉಂಡವ ಹರಸುವುದು ಬೇಡ, ಹಸಿದವ ಶಪಿಸುವುದು ಬೇಡ’ ಎಂಬ ಗಾದೆ ಮಾತಿಲ್ಲವೆ? ಉಂಡರೆ ಪ್ರತ್ಯೇಕವಾಗಿ ಹರಸುವ ಅಗತ್ಯವಿದೆಯೆ? ಹಸಿದ ನೋವೇ ಸಾಕಲ್ಲವೆ? ಪ್ರತ್ಯೇಕ ಶಾಪ ಕೊಡುವ ಅಗತ್ಯವಿದೆಯೆ ಎಂದು ಇದರ ತಾತ್ಪರ್ಯ. ಇಷ್ಟು ಸರಳ ಗಾದೆಯಾದರೂ, ಇದನ್ನು ಕೇಳಿದ ಬಳಿಕವೂ ನಾವು ತೀರಾ ಅಗತ್ಯವಿರುವವರಿಗೆ ಅಂದರೆ ತಿಂದು ಜೀರ್ಣಿಸಿಕೊಳ್ಳು ವವರಿಗೆ (ಅರ್ಹರಿಗೆ) ಊಟ ಹಾಕಲು ತಯಾರಿರುವುದಿಲ್ಲ, ಬದಲಾಗಿ ತಿಂದು ಜೀರ್ಣಿಸಿಕೊಳ್ಳಲಾಗದೆ 300-400 ಶುಗರ್ ಲೆವೆಲ್ ಏರಿಸಿಕೊಂಡವರಿಗೇ ಕೇವಲ ಒಣಪ್ರತಿಷ್ಠೆಗಾಗಿ ಊಟ ಹಾಕಲು ಮುಂದಾಗುತ್ತೇವೆ. ಈ ಒಣಪ್ರತಿಷ್ಠೆ ಎಂಬ ಅಸ್ಥಿಪಂಜರಕ್ಕೆ ಜಾತಿ, ಸಂಬಂಧ, ಆರ್ಥಿಕ ಬಲಾಡ್ಯತನ, ಉದ್ಯೋಗ ತಾರತಮ್ಯ, ಅಂತಸ್ತು ಎಂಬಿತ್ಯಾದಿ ಮಾಂಸ, ಮಜ್ಜೆಗಳಂತಹ ಕವಚ ಇರುತ್ತವೆ.
ಗಾದೆ ಮಾತು ಈಗ ಇನ್ನೂ ವಿಚಿತ್ರ ಸ್ಥಿತಿಗೆ ತಲುಪುತ್ತದೆ: “ಉಂಡರೂ ಹರಸಲಾಗದವರಿಗೆ ಊಟ’, “ವರ ಪಡೆ ಯುವ ತಾಕತ್ತಿದ್ದರೂ ಊಟ ಕೊಡದ ಕಾರಣ ತಪ್ಪುತ್ತಿರುವ ವರ’. ಕೇವಲ ಊಟ ಮಾತ್ರವಲ್ಲ ಬಟ್ಟೆ, ಮನೆಗಳ ಸ್ಥಿತಿಯೂ ಹೀಗೆಯೇ. ಲೋಕದಲ್ಲಿ ಹಲವರಿಗೆ ಒಂದು ಬಟ್ಟೆ ಇಲ್ಲದಿದ್ದರೂ ಚಿಂತೆ ಇಲ್ಲ, ತಮಗೆ ಮಾತ್ರ ಶೋಕೇಸ್ ತುಂಬ ಬಟ್ಟೆ ಬೇಕು. ನಿವೇಶನ ಇಲ್ಲದವರು, ಮನೆ ಇಲ್ಲದವರು ಎಷ್ಟೇ ಜನರು ಇರಲಿ, ನಮಗೆ ಮಾತ್ರ ಇರುವ ಇಬ್ಬರಿಗೋ, ಮೂವರಿಗೋ ಆಸುಪಾಸಿನ “ಎಲ್ಲಾ’ರನ್ನು ತುಂಬಬಹುದಾದ “ವಿಲ್ಲಾ’ಗಳು ಬೇಕು ಎಂಬ ಮನಃಸ್ಥಿತಿ ಇದೆ. ಹೀಗೆ ಮಾಡಿದರೆ ಯಾರೂ ಶಾಪ ಕೊಡುವುದೇ ಬೇಡ, ಅವು ಯಾರನ್ನಾದರೂ ನಿಮಿತ್ತ ಮಾಡಿಕೊಂಡು ಬಂದು ವಕ್ಕರಿಸುತ್ತವೆ. ವಕ್ಕರಿಸುವಾಗ ಯಾರಾದರೂ ನೆಪ ಮಾತ್ರಕ್ಕೆ ಸೃಷ್ಟಿಯಾಗುತ್ತಾನೆ/ಳೆ. ನಾವು ಮೂಲವನ್ನು ಹುಡುಕದೆ ನೆಪ ಮಾತ್ರಕ್ಕೆ ಸಿಕ್ಕಿದವನ(ಳ)ನ್ನು ಜರೆಯುತ್ತೇವೆ. ಒಟ್ಟಾರೆ ಶಾಪ ಪಡೆಯಲು ನಾವು ಅರ್ಹತೆ ಪಡೆದರೆ ಮಾತ್ರ ಶಾಪ, ಇಲ್ಲವಾದರೆ ಅದಕ್ಕೆ ಗಿರಾಕಿಗಳೇ ಸಿಗದು. ವರದ ಕಥೆಯೂ ಇಷ್ಟೆ…. ನಾವು ಶಾಪ ಪಡೆಯಲು ಅನ್‌ಫಿಟ್ ಆಗಿ ವರವನ್ನು ಪಡೆ ಯಲು ಫಿಟ್ ಆದರೆ ರಾಮರಾಜ್ಯ, ಇಲ್ಲವಾದರೆ ರಾವಣ ರಾಜ್ಯ! ಎರಡೂ ಬಗೆಯ ರಾಜ್ಯಗಳಿವೆ, ಪಡೆಯುವವರಿಗೆ.
– ಮಟಪಾಡಿ ಕುಮಾರಸ್ವಾಮಿ