Advertisement

ಕರಿಬೇವು ಲಾಭ ಹಲವು

06:01 PM Aug 06, 2019 | mahesh |

ಒಗ್ಗರಣೆ ಎಂದ ಕೂಡಲೇ ಮೊದಲು ನೆನಪಾಗುವುದು ಕರಿಬೇವು. ಒಗ್ಗರಣೆಯ ಘಮ ಹೆಚ್ಚಿಸುವ ಕರಿಬೇವನ್ನು, ತಿನ್ನದೆ ಅದನ್ನು ತಟ್ಟೆಯ ಮೂಲೆಗೆ ತಳ್ಳುವವರೇ ಹೆಚ್ಚು. ಆದರೆ, ಕರಿಬೇವಿನಿಂದ ಆರೋಗ್ಯಕ್ಕೆ ಆಗುವ ಲಾಭಗಳನ್ನು ತಿಳಿದರೆ, ಮುಂದೆಂದೂ ಅದನ್ನು ಮೂಲೆಗೆ ತಳ್ಳಲು ಮನಸ್ಸು ಬರುವುದಿಲ್ಲ.

Advertisement

– ಕರಿಬೇವಿನಲ್ಲಿ ನಾರಿನಂಶ, ಪ್ರೋಟಿನ್‌, ಕ್ಯಾಲ್ಸಿಯಂ, ಕ್ಯಾರೊಟೀನ್‌ ಹಾಗೂ ಹಲವಾರು ಬಗೆಯ ಅಮೈನೋ ಅಮ್ಲಗಳು ಹೇರಳವಾಗಿವೆ.
– ನೆಗಡಿ, ಕೆಮ್ಮು, ಅಸ್ತಮಾದಂಥ ಶ್ವಾಸಕೋಶದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
– ಕರಿಬೇವಿನಲ್ಲಿ, ವಾಯುಕಾರಕ ಅಂಶವನ್ನು ತೆಗೆದುಹಾಕುವ ಗುಣವಿದ್ದು, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.
– ಅನಗತ್ಯ ವಿಷ ಪದಾರ್ಥವನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ.
-ಕರಿಬೇವು ಪಿತ್ತ ನಿವಾರಕವಾಗಿ ಕೆಲಸ ಮಾಡಬಲ್ಲದು.
-ಇದು ಅತಿಸಾರಕ್ಕೆ ಮದ್ದು.
-ಕೊಲೆಸ್ಟ್ರಾಲ್‌ ಕಡಿಮೆ ಮಾಡಿ, ಹೊಟ್ಟೆಯ ಬೊಜ್ಜು ಕರಗಿಸುವಲ್ಲಿ, ತೂಕ ನಿಯಂತ್ರಣದಲ್ಲಿ ಸಹಕಾರಿ.
-ಕರಿಬೇವಿನ ಸೇವನೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ.
-ಕರಿಬೇವಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್‌ ದೇಹದ ಸಕ್ಕರೆ ಅಂಶವನ್ನು ನಿಯಂತ್ರಿಸಬಲ್ಲದು.
– ಲಿವರ್‌ ಸಂಬಂಧಿತ ಕಾಯಿಲೆಗಳಿಂದ ರಕ್ಷಿಸುತ್ತದೆ.
– ಕರಿಬೇವಿನಲ್ಲಿರುವ ಫೋಲಿಕ್‌ ಆಮ್ಲ ಮತ್ತು ಅಧಿಕವಾದ ಕಬ್ಬಿಣದ ಅಂಶ ರಕ್ತಹೀನತೆಯನ್ನು ನಿವಾರಿಸುತ್ತದೆ.
– ಕರಿಬೇವಿನ ರಸವನ್ನು, ಬೆಲ್ಲದಲ್ಲಿ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಮುಂಜಾನೆ ಕುಡಿದರೆ ರಕ್ತಹೀನತೆ ನಿಯಂತ್ರಣಕ್ಕೆ ಬರುತ್ತದೆ.
– ಕರಿಬೇವನ್ನು ಕುದಿಸಿ, ಕಷಾಯ ಮಾಡಿ ಕುಡಿಯುವುದರಿಂದ ಮೂತ್ರಕ್ಕೆ ಸಂಬಂಧಿಸಿದ ಕಾಯಿಲೆಗಳು ಗುಣಮುಖವಾಗುತ್ತವೆ.
– ಅಪೌಷ್ಟಿಕತೆಯಿಂದ ಕೂದಲು ಬಿಳಿಯಾಗುವುದನ್ನು ಕರಿಬೇವು ತಡೆಯಬಲ್ಲದು.
-ಪ್ರತಿದಿನ ಬೆಳಗ್ಗೆ ಕರಿಬೇವಿನ ಎಲೆ ತಿನ್ನುವುದರಿಂದ, ಕೊಬ್ಬರಿ ಎಣ್ಣೆಯಲ್ಲಿ ಕರಿಬೇವನ್ನು ಕುದಿಸಿ ತಲೆಗೆ ಹಚ್ಚುವುದರಿಂದ ಬಾಲ ನೆರೆ ತಡೆಯಬಹುದು.
-ಕೂದಲು ಸೊಂಪಾಗಿ ಬೆಳೆಯಲು, ಕರಿಬೇವಿನಲ್ಲಿರುವ ಕಬ್ಬಿಣಾಂಶ ಸಹಾಯ ಮಾಡುತ್ತದೆ.

-ಸಂಗಮೇಶ ಎನ್‌. ಜವಾದಿ

Advertisement

Udayavani is now on Telegram. Click here to join our channel and stay updated with the latest news.

Next