Advertisement

ಕರಿಬೇವಿನ ಕಮಾಲ್‌

07:01 PM Dec 05, 2019 | mahesh |

ಅಡುಗೆ ಆದ ನಂತರ ಅದಕ್ಕೆ ಮುಕ್ತಾಯ ಹಾಡಬೇಕಾದರೆ ಒಗ್ಗರಣೆಗೆ ಕರಿಬೇವು ಬೇಕೇ ಬೇಕು. ಅದರಲ್ಲಿರುವ ಪೌಷ್ಟಿಕಾಂಶದ ಅರಿವಿಲ್ಲದೆ ಊಟದ ಮಧ್ಯೆ ಸಿಗುವ ಕರಿಬೇವನ್ನು ಕಸದ ರೀತಿಯಲ್ಲಿ ಬಿಸಾಡುತ್ತಾರೆ. ಆದರೆ, ಈ ಕರಿಬೇವಿನ ಉಪಯೋಗವನ್ನು ಅರಿತರೆ ಆಶ್ಚರ್ಯಕರವಾಗಬಹುದು. ಅನೇಕ ಸಣ್ಣಪುಟ್ಟ ಕಾಯಿಲೆಗಳಿಗೆ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ.

Advertisement

ವಾಂತಿ ನಿವಾರಣೆಗೆ
ಕರಿಬೇವಿನ ಕಡ್ಡಿ 5, ಬೇವಿನ ಕಡ್ಡಿ 5 ತೆಗೆದುಕೊಂಡು ನೀರಿನಲ್ಲಿ ಕುದಿಸಿ, ಅದಕ್ಕೆ ಚಿಟಿಕೆ ಉಪ್ಪು, ಸ್ವಲ್ಪ ಕರಿಮೆಣಸಿನ ಪುಡಿ ಹಾಕಿ ಆಗಾಗ ಸೇವಿಸಬೇಕು.

ಹೊಟ್ಟೆಯುಬ್ಬರ ಕಡಿಮೆಯಾಗಲು
ಒಂದು ಲೋಟ ನೀರಿಗೆ 20 ಕರಿಬೇವಿನ ಎಲೆ, 5ರಿಂದ 6 ಕಾಳುಮೆಣಸು, 1/2 ಚಮಚ ಶುಂಠಿ ಪುಡಿ, 1/2 ಚಮಚ ಜೀರಿಗೆ ಹಾಕಿ, ಕುದಿಸಿ ಕುಡಿಯಬೇಕು.

ಕಫ‌ ಕೆಮ್ಮಿನ ತೊಂದರೆಗಳಿಗೆ
ಕರಿಬೇವಿನ ಎಲೆ 6, ಎರಡು ತುಳಸಿ ಎಲೆಗಳನ್ನು ತೆಗೆದುಕೊಂಡು ಚೂರು ಉಪ್ಪು ಹಾಕಿ, ಜಗಿದು ತಿಂದರೆ ಅಜೀರ್ಣತೆಯ ಜೊತೆಗೆ ಕಫ‌, ಕೆಮ್ಮು ಮಾಯವಾಗಿತ್ತದೆ.

ಮಧುಮೇಹ ನಿಯಂತ್ರಣಕ್ಕೆ
10-12 ಕರಿಬೇವಿನ ಎಲೆಯೊಂದಿಗೆ ಎರಡು ಬೆರಳುಗಳಲ್ಲಿ ಬರುವಷ್ಟು ಜೀರಿಗೆಯನ್ನು ಬರೀ ಹೊಟ್ಟೆಯಲ್ಲಿ ಬೆಳಿಗ್ಗೆ ತಿನ್ನುವುದರಿಂದ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಕರಿಬೇವಿನ ಎಲೆಗಳನ್ನು ತೊಳೆದು ನೆರಳಿನಲ್ಲಿ ಒಣಗಿಸಿ ನಂತರ ಅದನ್ನು ಪುಡಿ ಮಾಡಿಟ್ಟು ಕೊಂಡು ದಿನಾಲು ಬೆಳಿಗ್ಗೆ ಒಂದು ಚಮಚ ಪುಡಿಯೊಂದಿಗೆ 1/2 ಚಮಚ ಜೀರಿಗೆ ಪುಡಿ ಸೇರಿಸಿ ತಿನ್ನಬಹುದು.

Advertisement

ಬಾಯಿ ರುಚಿ ಕೆಟ್ಟಿದ್ದಾಗ
ತುಂಬಾ ದಿನದಿಂದ ಜ್ವರ ಬಂದು ಬಾಯಿ ರುಚಿ ಕೆಟ್ಟಿದ್ದಾಗ ಕರಿಬೇವಿನ ಸೊಪ್ಪಿನ ಎಲೆಗಳಿಂದ ತಂಬುಳಿ ಮಾಡಿಕೊಂಡು, ಊಟ ಮಾಡುವುದರಿಂದ ಊಟ ಚೆನ್ನಾಗಿ ಸೇರುತ್ತದೆ. ಕರಿಬೇವಿನ ಎಲೆಗಳನ್ನು ಹಾಗೆಯೇ ತಿನ್ನಲು ಕಷ್ಟವಾದರೆ ಚಟ್ನಿಪುಡಿಗೆ ಜಾಸ್ತಿ ಎಲೆಗಳನ್ನು ಹಾಕಿ, ಮಾಡಿ ಉಪಯೋಗಿಸಬಹುದು.

ತಲೆ ಕೂದಲು ಕಪ್ಪಾಗಲು
ತೆಂಗಿನ ಎಣ್ಣೆಯೊಂದಿಗೆ ಕರಿಬೇವಿನ ಎಲೆಗಳನ್ನು ಹಾಕಿ ಕಾಯಿಸಿ, ತಲೆಗೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ.
.ಕರಿಬೇವಿನಲ್ಲಿ ಕಬ್ಬಿಣದ ಅಂಶ ಸಾಕಷ್ಟಿರುವುದರಿಂದ ಸ್ತ್ರೀಯರ ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ.

ಪುಷ್ಪಾ ಎನ್‌.ಕೆ. ರಾವ್‌

Advertisement

Udayavani is now on Telegram. Click here to join our channel and stay updated with the latest news.

Next