ಮೈಸೂರು: ನಗರದಲ್ಲಿ 1200ರಷ್ಟು ಬೆಡ್‌ಗಳನ್ನುಮೀಸಲಿರಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ 92ಐಸಿಯು, 62 ವೆಂಟಿಲೇಟರ್ ಲಭ್ಯವಿದೆ. ಸರ್ಕಾರಿಆಸ್ಪತ್ರೆಯಲ್ಲಿ 28 ಐಸಿಯು, 200 ಆಕ್ಸಿಜನ್ ಬೆಡ್‌ಗಳು ಲಭ್ಯವಿವೆ. ಇದಷ್ಟೆ ಅಲ್ಲದೆ ಪ್ರತಿ ತಾಲೂಕುಕೇಂದ್ರದಲ್ಲಿ 50 ಬೆಡ್‌ಗಳ ವ್ಯವಸ್ಥೆ ಇದೆ.ಹೊಸದಾಗಿ ಟ್ರಾಮಾ ಸೆಂಟರ್‌ನಲ್ಲಿ 200ಬೆಡ್‌ಗಳ ವ್ಯವಸ್ಥೆ ಮಾಡಲಾ ಗಿದೆ.
ಮುಂದಿನಪರಿಸ್ಥಿತಿ ನೋಡಿಕೊಂಡು ಮತ್ತಷ್ಟು ಬೆಡ್‌ಗಳವ್ಯವಸ್ಥೆಗೆ ಸಿದ್ಧತೆ ನಡೆಸ ಲಾಗುವುದು ಎಂದುಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಹಿತಿನೀಡಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಸದ್ಯಕ್ಕೆ ಐಸಿಯು ಬೆಡ್‌ಗಳ ಕೊರತೆ ಇಲ್ಲ.ಆಕ್ಸಿಜನ್ ಕೊರತೆಯೂ ಇಲ್ಲ.
ಆದರೂ ಸಾವುಯಾಕೆ ಸಂಭವಿಸುತ್ತಿದೆ ಎಂಬುದು ಗೊತ್ತಾಗಿಲ್ಲ.ಕೊನೆಯ ಕ್ಷಣಗಳಲ್ಲಿ ಚಿಕಿತ್ಸೆಗೆ ಬರುವವರ ಸಾವಾಗುತ್ತಿದೆ.ಜನರು ಮೊದಲು ಕೊರೊನಾ ತಪಾಸಣೆ ಆದಬಳಿಕ ಬೇರೆ ಇರಬೇಕು. ಜನರಿಗೆ ಮೊದಲು ಈಅರಿವು ಮೂಡಬೇಕು ಎಂದರು.ಹೊರಗಿನಿಂದ ಬರುವವರಿಗೆ ಮೈಸೂರಿಗೆಬರಬೇಡಿ ಎನ್ನಲು ಸಾಧ್ಯವಿಲ್ಲ.
ಆದರೆ ಅವರುಹೆಚ್ಚಾಗಿ ಬಂದರೆ ಒತ್ತಡ ಖಂಡಿತ ಇದ್ದೇ ಇರುತ್ತದೆ.ಬೆಂಗಳೂರಿನಲ್ಲಿ ಬೆಡ್ ಕೊರತೆ ಇರುವವರುಮೈಸೂರಿಗೆ ಬರುತ್ತಿದ್ದಾರೆ. ಅದರಲ್ಲೂ ಇಲ್ಲಿಸಂಬಂಧಿಕರು ಇರುವವರು ಸಹ ಮೈಸೂರಿಗೆಬರುತ್ತಿದ್ದಾರೆ. ಸದ್ಯಕ್ಕೆ ಐಸಿಯು ಘಟಕ ಕೆ.ಆರ್‌ಆಸ್ಪತ್ರೆಯಲ್ಲಿ ಫುಲ್ ಆಗಿದೆ. ಖಾಸಗಿ ಆಸ್ಪತ್ರೆ ಜತೆಗೆಈಗಾಗಲೇ ಮಾತುಕತೆ ನಡೆಸಲಾಗಿದೆ.
ಶೇ.50ರಷ್ಟು ಬೆಡ್ ವ್ಯವಸ್ಥೆಗೆ ಸೂಚಿಸಲಾಗಿದೆ.ಸದ್ಯಕ್ಕೆ ಬೆಡ್ ಸಮಸ್ಯೆ ಇಲ್ಲ. ಪ್ರಕರಣಗಳ ಸಂಖ್ಯೆಹೆಚ್ಚಿದಲ್ಲಿ ಮಾತ್ರ ಆ ಸಮಸ್ಯೆ ಉಂಟಾಗಲಿದೆ.ಸದ್ಯಕ್ಕೆ ಎಲ್ಲ ರೀತಿಯ ಕ್ರಮಕ್ಕೆ ಜಿಲ್ಲಾಡಳಿತ ಕೂಡಮುಂದಾಗಿದೆ ಎಂದು ತಿಳಿಸಿದರು.