Advertisement
ಇಲ್ಲಿನ ಜೆಸಿ ಭವನದಲ್ಲಿ ನಡೆದ ದಿ. ಉಲ್ಲಾಳ ದಯಾನಂದ ನಾಯಕರ ಜನ್ಮ ಶತಾಬ್ಧಿ ಕಾರ್ಯಕ್ರಮದಲ್ಲಿ ಮಾತನಾಡಿ ಮೇಲಿನ ವಾಕ್ಯ ನಾಯಕರಿಗೆ ಸದಾ ಪ್ರಸ್ತುತ ಹುಟ್ಟಿದಾಗ ಉಸಿರಿರುತ್ತದೆ ನಂತರ ಹೆಸರು ಬರುವುದು ಆ ಹೆಸರು ಚಿರಸ್ಥಾಯಿಯಾಗಿರಬೇಕು ಆದರೆ ಧಾರ್ಮಿಕವಾಗಿ ಇಂದು ಹಬ್ಬ ಹರಿದಿನಗಳಲ್ಲಿ ಸಂತೋಷವಾಗಿ ಕುಣಿಯೋಣ ಬಾರ ಎಂದರೆ. ಕೆಲವರು ಕೆಣಕೋಣ ಬಾರ ಎಂದರೆ, ರಾಜಕೀಯ ನಾಯಕರು ನುಂಗೋಣ ಬಾರ ಎನ್ನುತ್ತಿದ್ದು. ಸಮಾಜ ಕಟ್ಟುವ ಕೈಂಕರ್ಯ ಮರೆತು ಹೋಗಿದೆ. ದೇಶ ಭಕ್ತ, ದೇಶ ಪ್ರೇಮಿ ಎಂಬ ವಾಕ್ಯಗಳೇ ನಾಶವಾಗಿವೆ. ಮನುಷ್ಯನಲ್ಲಿ ಸಮಾಜ ಕಟ್ಟುವ ಸುಗುಣಗಳಿರಬೇಕು. ಮತ್ಸರ ಬಿಟ್ಟು ಸಮಾಜ ಬೆಳೆಸಬೇಕು ಎಂದರು.
ಮಾಜಿ ಸಚಿವ ಬಿ.ಎಲ್. ಶಂಕರ್ ಮಾತನಾಡಿ ದಯಾನಂದ ನಾಯಕರು ಸಂಘಟನೆಗಾಗಿ ದುಡಿದವರು, ರಾಜಕೀಯಕ್ಕಾಗಿ ಆಸೆ ಪಟ್ಟವರಲ್ಲ. ಠಾಕ್ರೆ, ಯಡಿಯೂರಪ್ಪ, ವಾಜಪೇಯಿ, ಆಡ್ವಾಣಿಯವರ ಸಂಪರ್ಕವಿದ್ದರೂ ತನಗಾಗಿ ಬಳಸದೆ ಸಮಾಜಕ್ಕಾಗಿ ಬಳಸಿಕೊಂಡವರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂಘವನ್ನು ನಿಷೇಧಿಸಿದಾಗ ಮೂರು ಬಾರಿ ಸಂಘಟನೆಗಾಗಿ ಜೈಲು ಸೇರಿದ್ದರು. ಎಲ್ಲಾ ಸಂಘಟನೆಯಲ್ಲೂ ಒಳ್ಳೆಯವರು ಇರಬೇಕು ಎನ್ನುವ ಅಭಿಪ್ರಾಯ ನಾಯಕರು ಹೊಂದಿದ್ದರು. ಸಮಾಜದಲ್ಲಿ ಇಂದು ಭ್ರಷ್ಟಾಚಾರ, ಹಣ ಮಾಡುವ ಕುತಂತ್ರಿಗಳೇ ತುಂಬಿದ್ದು ಈ ಕ್ಯಾನ್ಸರ್ ಗುಣ ಮಾಡಿದರೆ ಮಾತ್ರ ಸಮಾಜ ಉಳಿಯಲಿದೆ ಎಂದು ತಿಳಿಸಿದರು.
Related Articles
Advertisement