Advertisement

ಇಂದಿನಿಂದ ರೆಪೋ ಆಧರಿತ ಸಾಲ ಜಾರಿ

02:21 AM Sep 01, 2019 | Team Udayavani |
ಹೊಸದಿಲ್ಲಿ: ದೇಶದ ಅತಿದೊಡ್ಡ ಬ್ಯಾಂಕ್‌ ಎಸ್‌ಬಿಐ ಸೆ.1ರಿಂದ ರೆಪೋ ದರ ಆಧಾರಿತ ಬಡ್ಡಿ ದರದ ಗೃಹ ಸಾಲವನ್ನು ಆರಂಭಿಸಿದೆ. ಸದ್ಯಕ್ಕೆ ಈ ಸಾಲಗಳಿಗೆ ಶೇ. 8.05ರ ಬಡ್ಡಿ ನಿಗದಿಯಾಗಿದ್ದು, ರೆಪೋ ದರದಲ್ಲಿ ಆರ್‌ಬಿಐ ತರುವ ಬದಲಾವಣೆಗಳು ನೇರವಾಗಿ ಈ ಸಾಲಗಳಿಗೆ ಅನ್ವಯವಾಗಲಿವೆ.

ಸೆ.1ರಿಂದ ಎಲ್ಲ ಹಳೆಯ ಮತ್ತು ಹೊಸ ಸಾಲಗಳಿಗೆ ಇದು ಅನ್ವಯವಾಗಲಿದೆ ಎಂದು ಆರ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ. ಈ ವರ್ಷದಲ್ಲಿ ಒಟ್ಟು 110 ಮೂಲಾಂಶ ರೆಪೋ ದರವನ್ನು ಆರ್‌ಬಿಐ ಇಳಿಕೆ ಮಾಡಿದೆ. ಆದರೆ ಆರ್‌ಬಿಐ ರೆಪೋ ದರ ಇಳಿಸುತ್ತಿದ್ದಂತೆ ಬ್ಯಾಂಕ್‌ಗಳು ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿರಲಿಲ್ಲ. ಎಪ್ರಿಲ್ನಿಂದ ಈ ವರೆಗೆ ಎಸ್‌ಬಿಐ 35 ಮೂಲಾಂಶವನ್ನು ಇಳಿಕೆ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next