Advertisement

ಚುನಾವಣೆಯಲ್ಲಿ ಕಾಳಧನ ನಿಗ್ರಹಕ್ಕೆ ಈಗಿನ ಕಾನೂನು ಅಪರ್ಯಾಪ್ತ: ರಾವತ್‌

04:02 PM Sep 15, 2018 | Team Udayavani |

ಹೊಸದಿಲ್ಲಿ : ಚುನಾವಣೆಯಲ್ಲಿ ಕಾಳಧನದ ಪಿಡುಗನ್ನು ನಿಭಾಯಿಸುವುದಕ್ಕೆ ಈಗಿರುವ ಕಾನೂನುಗಳು ಅಪರ್ಯಾಪ್ತವಾಗಿವೆ ಎಂದು ದೇಶದ ಮುಖ್ಯ ಚುನಾವಣಾ ಆಯುಕ್ತ ಓ ಪಿ ರಾವತ್‌ ಹೇಳಿದ್ದಾರೆ. 

Advertisement

ದೇಶದ ಚುನಾವಣಾ ಪ್ರಕ್ರಿಯೆಗೆ ಕೇಂಬ್ರಿಜ್‌ ಅನಾಲಿಟಿಡಾ ದಂತಹ ಮಾಹಿತಿ ಕಳವು, ಮಾಹಿತಿ ಕೊಯ್ಲು, ಫೇಕ್‌ ನ್ಯೂಸ್‌ ಇತ್ಯಾದಿಗಳು ಭಾರೀ ಸವಾಲಾಗಿ ಪರಿಣಮಿಸಿವೆ ಎಂದು ರಾವತ್‌ ಹೇಳಿದರು. 

ಭಾರತದ ಚುನಾವಣಾ ಪ್ರಜಾಸತ್ತೆ ಮುಂದಿರುವ ಸವಾಲುಗಳು ಎನ್ನುವ ವಿಷಯದಲ್ಲಿ ಮಾತನಾಡುತ್ತಿದ್ದ ರಾವತ್‌, ಪ್ರಜಾಸತ್ತೆಯಲ್ಲಿ  ಚುನಾವಣೆಗಳು ಬೇಕಾಬಿಟ್ಟಿಯಾಗಿ, ಯಾರದೋ ಮನಸೋ ಇಚ್ಛೆಯಂತೆ ನಡೆಯುವಂತಿಲ್ಲ; ಅವು ಸಮರ್ಪಕವಾಗಿ ನಡೆಯಬೇಕಿದ್ದರೆ  ವಿಶ್ವಾಸಾರ್ಹತೆ, ಕಠಿನ ಪರಿಶ್ರಮ ಮತ್ತು ಮೌಲ್ಯಗಳನ್ನು ಆಧರಿಸಿರಬೇಕಾಗುತ್ತದೆ; ಆದರೆ ದುರದೃಷ್ಟವಶಾತ್‌ ಇಂದಿನ ದಿನಗಳಲ್ಲಿ ಅವೆಲ್ಲ ವಿನಾಶದ ಅಂಚಿನಲ್ಲಿವೆ ಎಂದು ರಾವತ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next