Advertisement

ಜನಪ್ರಿಯ ಸ್ವಿಫ್ಟ್ಉತ್ಪಾದನೆ ಸ್ಥಗಿತ?

11:31 AM Jan 01, 2018 | |

ಮುಂಬೈ; ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಸ್ವಿಫ್ಟ್ ಕಾರು ಉತ್ಪಾದನೆ ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಈ ಸಂಬಂಧ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಉತ್ಪಾದನಾ ಘಟಕದಲ್ಲಿ ಉದ್ಯೋಗಿಗಳು ಕೊನೆಯ ಸ್ವಿಫ್ಟ್ ಉತ್ಪಾದನೆಯ ನಂತರ ಫೋಟೋ ತೆಗೆದು  ಕೊಳ್ಳುತ್ತಿದುದು ಕಂಡು  ಬಂದಿದೆ. ಅಲ್ಲದೆ ಬೈ ಬೈ ಸ್ವಿಫ್ಟ್ ಎಂದು ಅವರು ಬರೆದುಕೊಂಡಿದ್ದೂ ತಿಳಿದುಬಂದಿದೆ.

Advertisement

2005ರಲ್ಲಿ ಆರಂಭವಾದ ಈ ಮಾದರಿಯ ಕಾರು ಅತ್ಯಂತ ಜನಪ್ರಿಯವಾಗಿತ್ತು. 2007, 2010 ಹಾಗೂ 2011ರಲ್ಲಿ ಹೊಸ ಹೊಸ ಮಾದರಿಗಳನ್ನು ಕಂಪನಿ ಬಿಡುಗಡೆ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಕಾರು 2014 ರ ಸುಧಾರಿತ ಆವೃತ್ತಿಯಾಗಿದೆ.

ಮುಂದಿನ ದಿನಗಳಲ್ಲಿ, ಸ್ವಿಫ್ಟ್ನ ಹೊಸ ಮಾದರಿಯ ಕಾರು ಬಿಡುಗಡೆಯಾಗಲಿದ್ದು, ವಿನ್ಯಾಸ, ತಂತ್ರಜ್ಞಾನ ಹಾಗೂ ಇತರ ವಿಭಾಗಗಳಲ್ಲಿ ಸಂಪೂರ್ಣ ವಿಭಿನ್ನವಾಗಿರಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next