Advertisement

Manipur; ಮಹಿಳೆಯರ ರ‍್ಯಾಲಿ ಕಾರಣಕ್ಕೆ ಕರ್ಫ್ಯೂ ಸಡಿಲಿಕೆ ಹಿಂಪಡೆದ ಸರಕಾರ

03:56 PM Jul 19, 2023 | Team Udayavani |

ಇಂಫಾಲ : ಮಣಿಪುರ ಸರಕಾರವು ಐದು ಕಣಿವೆ ಜಿಲ್ಲೆಗಳಲ್ಲಿ ಬೆಳಗ್ಗೆ 5 ರಿಂದ ಸಂಜೆ 6 ರವರೆಗೆ ದೈನಂದಿನ ಕರ್ಫ್ಯೂ ಸಡಿಲಿಕೆಯನ್ನು ತೆಗೆದುಹಾಕಿದ್ದು, ಬುಧವಾರದ ರ‍್ಯಾಲಿಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ಕರ್ಫ್ಯೂ ಅನ್ನು ವಿಧಿಸಿದೆ.

Advertisement

ಇಂಫಾಲದ ಮುಖ್ಯ ಮಾರುಕಟ್ಟೆಯ ಮಹಿಳೆಯರನ್ನು ಪ್ರತಿನಿಧಿಸುವ ಕ್ವೈರಂಬಾಂಡ್ ಇಮಾ ಕೀಥೆಲ್ ಶಾಂತಿಗಾಗಿ ಜಂಟಿ ಸಮನ್ವಯ ಸಮಿತಿಯು “ತಾಯಂದಿರ ಪ್ರತಿಭಟನೆ” ರ‍್ಯಾಲಿಯನ್ನು ಯಶಸ್ವಿಗೊಳಿಸುವಂತೆ ಎಲ್ಲರಿಗೂ ಮನವಿ ಮಾಡಿದ ನಂತರ ಸರಕಾರ ಈ ನಿರ್ಧಾರ ಕೈಗೊಂಡಿದೆ.

ಸಮಿತಿಯ ಸಹ ಸಂಚಾಲಕರಾದ ಕೆ. ಧನೇಶೋರಿ, ಪ್ರತಿ ಪ್ರದೇಶದ ಎಲ್ಲಾ ತಾಯಂದಿರು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರ ನಡುವೆ ತಮ್ಮ ಮನೆಗಳಿಂದ ಹೊರಬಂದು ಪ್ರತ್ಯೇಕ ಆಡಳಿತವನ್ನು ತಿರಸ್ಕರಿಸಬೇಕು, ಎನ್‌ಆರ್‌ಸಿ ಜಾರಿಗೊಳಿಸಬೇಕು ಮತ್ತು ತುರ್ತು ವಿಧಾನಸಭೆ ಅಧಿವೇಶನವನ್ನು ತತ್ ಕ್ಷಣವೇ ಕರೆಯಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಬೇಕು. ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧದ ಪ್ರತಿಭಟನೆಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಒತ್ತಾಯಿಸಿದ್ದರು.

ರಾಜಧಾನಿ ಇಂಫಾಲ ಪಟ್ಟಣದಲ್ಲಿಯೂ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಏತನ್ಮಧ್ಯೆ, ಈ ವಿಚಾರಕ್ಕೆ ಸಂಬಂಧವಿಲ್ಲದ ಬೆಳವಣಿಗೆಯಲ್ಲಿ, ಇಂಫಾಲ್ ಪಶ್ಚಿಮ ಜಿಲ್ಲೆಯ ಕ್ವಾಕಿಥೆಲ್‌ನಲ್ಲಿ ಸೋಮವಾರ ರಾತ್ರಿ ಐಜಿಪಿ ಕೆ. ಕಬೀಬ್ ಮತ್ತು ಅವರ ಬೆಂಗಾವಲು ಸಿಬಂದಿ ಪ್ರಯಾಣಿಸುತ್ತಿದ್ದ ವಾಹನವನ್ನು ಸುಟ್ಟುಹಾಕಿದ ಆರೋಪದಲ್ಲಿ ಭಾಗಿಯಾದ ಆರೋಪದ ಮೇಲೆ ಪೊಲೀಸರು 30 ಜನರನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next