Advertisement

ಆ. 09 ರ ತನಕ ಕೋವಿಡ್ ಕರ್ಫ್ಯೂ ವಿಸ್ತರಣೆ ಮಾಡಿದ ಗೋವಾ ಸರ್ಕಾರ

02:23 PM Aug 02, 2021 | Team Udayavani |

ಪಣಜಿ : ದೇಶಾದ್ಯಂತ ಕರೋನಾ ಮೂರನೇಯ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಗೋವಾದಲ್ಲಿ ಜಾರಿಯಲ್ಲಿದ್ದ ಕರ್ಫ್ಯೂ ಕಾಲಾವಧಿಯನ್ನು ಆಗಸ್ಟ್ 9 ರವರೆಗೆ ವಿಸ್ತರಣೆ ಮಾಡಲಾಗಿದೆ.

Advertisement

ರಾಜ್ಯದಲ್ಲಿ ಬಾರ್ ಆ್ಯಂಡ್ ರೆಸ್ಟೊರೆಂಟ್‍ ನನ್ನು ರಾತ್ರಿ 11 ಗಂಟೆಯ ವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ : ಮೋದಿ, ಮತ್ತವರ ಗುಲಾಮರು ದೇಶದ ಭೂಮಿಯನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ :  ರಾಹುಲ್ ಕಿಡಿ

ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಕ್ಯಾಸಿನೊ, ಸಿನೆಮಾ ಥಿಯೇಟರ್, ಸಭಾಗೃಹ, ರಿವರ್ ಕ್ರೂಜ್, ಶಾಪಿಂಗ್  ಮಾಲ್ ಗಳನ್ನು ತೆರೆಯಲು ಅವಕಾಶ ನೀಡಿಲ್ಲ.

ದೇಶದ ವಿವಿಧ ರಾಜ್ಯಗಳಲ್ಲಿ ಸದ್ಯ ಕೋವಿಡ್ 3 ನೇಯ ಅಲೆ ಆರಂಭಗೊಳ್ಳುವ ಭೀತಿಯ ಹಿನ್ನೆಲೆಯಲ್ಲಿ ಗೋವಾದಲ್ಲಿಯೂ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಕರ್ಫ್ಯೂ ಕಾಲಾವಧಿಯನ್ನು ಇನ್ನೂ ಒಂದು ವಾರ ಅಂದರೆ ಆಗಸ್ಟ್ 9 ರ ವರೆಗೆ ವಿಸ್ತರಣೆ ಮಾಡಲಾಗಿದೆ.

Advertisement

ಇದನ್ನೂ ಓದಿ : ಅಂದು ಶಿವಮೊಗ್ಗ ಪ್ರಾಂತ್ಯದಲ್ಲಿ ಶ್ರೀಮಂತರು, ಬ್ರಿಟಿಷರಿಗೆ ದುಸ್ವಪ್ನವಾಗಿದ್ದ ರಾಬಿನ್ ಹುಡ್ ಕನ್ನೇಶ್ವರ ರಾಮ!

Advertisement

Udayavani is now on Telegram. Click here to join our channel and stay updated with the latest news.

Next