ದಾವಣಗೆರೆ: ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ ಕ್ಕೆ ಐವರು ಬಲಿಯಾಗಿದ್ದಾರೆ. ಐದು ಜನರ ಸಾವಿನಿಂದ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 167ಕ್ಕೆ ಏರಿದೆ. ಹೊಸದಾಗಿ 318 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಕೋವಿಡ್ ದಿಂದ ಗುಣಮುಖರಾದ 600 ಜನರು ಒಂದೇ ದಿನ ಡಿಸ್ಚಾರ್ಜ್ ಆಗಿರುವುದು ಈವರೆಗಿನ ದಾಖಲೆ.
ಕೋವಿಡ್ ದೊಟ್ಟಿಗೆ ಅಧಿಕ ರಕ್ತದೊತ್ತಡ, ಮಧುಮೇಹ ದಿಂದ ಬಳಲುತ್ತಿದ್ದ ದಾವಣಗೆರೆಯ ಎಂಸಿಸಿ ಬಿ ಬ್ಲಾಕ್‌ನ 62 ವರ್ಷದ ವೃದ್ದ, ವಿನೋಬ ನಗರದ 61 ವರ್ಷದ ವೃದ್ಧ, ಚಿತ್ರದುರ್ಗದ 62 ವರ್ಷದ ವೃದ್ಧ, ದಾವಣಗೆರೆಯ ತರಳ ಬಾಳು ಬಡಾವಣೆಯ 56 ವರ್ಷದ ವೃದ್ಧ, ದಾವಣಗೆರೆ ತಾಲೂಕಿಕ ಕಕ್ಕರಗೊಳ್ಳ ಗ್ರಾಮದ 48 ವರ್ಷದ ಮಹಿಳೆ ಮೃತಪಟ್ಟವರು.
ರೋಗಿ ನಂಬರ್ 272264 ಸಂಪರ್ಕದಿಂದ ದಾವಣಗೆರೆಯ ಆಂಜನೇಯ ಬಡಾವಣೆಯ 70 ವರ್ಷದ ವೃದ್ಧ, ರೋಗಿ ನಂಬರ್ 261224 ಸಂಪರ್ಕದಿಂದ ಡಿಸಿಎಂ ಟೌನ್‌ಶಿಪ್‌ನ 54 ವರ್ಷದ ವೃದ್ಧನಿಗೆ ಸೋಂಕು ಹರಡಿದೆ. ಹರಿಹರ ತಾಲೂಕಿನ ಸಂಕ್ಲಿಪುರ ಗ್ರಾಮದ 25 ವರ್ಷದ ಮಹಿಳೆ, ಡಿಸಿಎಂ ಟೌನ್‌ಶಿಪ್‌ನ 65 ವರ್ಷದವೃದ್ಧೆ, ಚಳ್ಳಕೆರೆಯ ಹೌಸಿಂಗ್ ಬೋರ್ಡ್ ಕಾಲೋನಿಯ 28 ವರ್ಷದ ಮಹಿಳೆ, 56 ವರ್ಷದ ವೃದ್ಧೆ, ಹಾವೇರಿ ಜಿಲ್ಲೆ ರಾಣಿಬೆನ್ನೂರಿನ 44 ವರ್ಷದ ಮಹಿಳೆ, 74 ವರ್ಷದ ವೃದ್ಧೆ, ದಾವಣಗೆರೆಯ ಎಂಸಿಸಿ ಬಿ ಬ್ಲಾಕ್‌ನ 24 ವರ್ಷದ ವ್ಯಕ್ತಿಯಲ್ಲಿನ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ.
ದಾವಣಗೆರೆಯ ಖಾಸಗಿ ಆಸ್ಪತ್ರೆಯ 26 ವರ್ಷದ ವ್ಯಕ್ತಿ, 24 ವರ್ಷದ ಮಹಿಳೆ, 45 ವರ್ಷದ ವ್ಯಕ್ತಿಯಲ್ಲಿ ಐಎಲ್‌ಐ ಸಮಸ್ಯೆಯಿಂದ ಸೋಂಕು ದೃಢಪಟ್ಟಿದೆ. ದಾವಣಗೆರೆಯ ಖಾಸಗಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದ 26 ವರ್ಷದ ಸ್ಟಾಫ್‌ನರ್ಸ್ ಸೋಂಕಿಗೆ ಒಳಗಾಗಿದ್ದಾರೆ. ಮೂಲ ಪತ್ತೆ ಹಚ್ಚಲಾಗುತ್ತಿದೆ. ರೋಗಿ ನಂಬರ್ 246326ರ ಸಂಪರ್ಕದಿಂದ ಚನ್ನಗಿರಿ ತಾಲೂಕಿನ ಲಕ್ಷ್ಮೀಸಾಗರ ಗ್ರಾಮದ 8 ವರ್ಷದ ಬಾಲಕ, 50 ವರ್ಷದ ವೃದ್ಧೆ, 21 ವರ್ಷದ ಮಹಿಳೆ, ವಡ್ನಾಳ್ ಗ್ರಾಮದ 32 ವರ್ಷದ ಮಹಿಳೆ, ವಿವೇಕಾನಂದ ಬಡಾವಣೆಯ 10 ವರ್ಷದ ಬಾಲಕ, ಪೊಲೀಸ್ ವಸತಿ ಸಮುತ್ಛಯದ 18 ವರ್ಷದ ಮಹಿಳೆಯಲ್ಲಿ ಸೋಂಕು ಹರಡಿದೆ. ಚನ್ನಗಿರಿಯ ವೆಂಕಟೇಶ್ವರ ಕ್ಯಾಂಪ್‌ನ 32 ವ್ಯಕ್ತಿಯಲ್ಲಿ ಐಎಲ್‌ಐ ಸಮಸ್ಯೆಯಿಂದ ಸೋಂಕು ದೃಢಪಟ್ಟಿದೆ.