Advertisement

ಜೀರಿಗೆ ನೀರು ತೂಕ ಇಳಿಕೆಗೆ ಸಹಕಾರಿ

04:36 PM Apr 09, 2021 | Team Udayavani |

ಜೀರಿಗೆ ಅಡುಗೆ ಮನೆಯ ಬಹುಪಯೋಗಿ ಮಸಾಲೆ ಪದಾರ್ಥ. ಹಲವಾರು ಔಷಧೀಯ ಗುಣವಿರುವ ಇದನ್ನು ಕಷಾಯ, ಒಗ್ಗರಣೆ, ಸಾಂಬಾರಿನಲ್ಲೂ ಬಳಸುತ್ತೇವೆ. ಇದರ ಮತ್ತೂಂದು ಪ್ರಯೋಜನವೆಂದರೆ ಇದು ದೇಹದ ತೂಕ ಇಳಿಕೆ ಮಾಡಲು ಸಹಕಾರಿಯಾಗಿದೆ. ಜೀರ್ಣಕ್ರಿಯೆಯನ್ನು ಸುಸ್ಥಿರಗೊಳಿಸುವ ಜೀರಿಗೆಯು ಗ್ಯಾಸ್ಟ್ರಿಕ್‌ ಸಮಸ್ಯೆಯನ್ನೂ ಪರಿಹರಿಸುತ್ತದೆ.

Advertisement

ಅಲ್ಲದೇ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಿ ಚರ್ಮದ ಆರೋಗ್ಯವನ್ನೂ ಕಾಪಾಡುತ್ತದೆ.ಜೀರಿಗೆಯು ದೇಹದ ಕೊಬ್ಬನ್ನು ಶೀಘ್ರದಲ್ಲಿ ಕಡಿಮೆ ಮಾಡುತ್ತದೆ. ಹೀಗಾಗಿ ನಿಯಮಿತವಾಗಿ ಜೀರಿಗೆ ನೀರನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಊಟಕ್ಕೆ  ಮುಂಚಿತವಾಗಿ ಜೀರಿಗೆ ನೀರನ್ನು ಒಳ್ಳೆಯದು. ಇದರಿಂದ ಹಸಿವು ಕಡಿಮೆಯಾಗುತ್ತದೆ ಮಾತ್ರವಲ್ಲ ಅನಾರೋಗ್ಯಕರ ತಿನಿಸುಗಳನ್ನು ತಿನ್ನದಂತೆ ಇದು
ತಡೆಯುತ್ತದೆ. ಜೀರಿಗೆ ನೀರನ್ನು ದಿನಕ್ಕೆ 3 ಅಥವಾ 4 ಬಾರಿ ಕುಡಿಯಬಹುದು.

ಪ್ರತಿ ದಿನ ಜೀರಿಗೆ ನೀರನ್ನು ಕುಡಿಯುವುದು ಬೇಸರವಾದರೆ ಅದನ್ನು ಕಷಾಯದ ಹುಡಿಯ ರೂಪದಲ್ಲಿ ತಯಾರಿಸಿಟ್ಟು ಕೊಳ್ಳಬಹುದು. ಕೆಲವೊಮ್ಮೆ ಬೇರೆ ಪದಾರ್ಥಗಳನ್ನು ಅದರಲ್ಲೂ ದಾಲ್ಚಿನ್ನಿಯ ಹುಡಿಯನ್ನು ಸೇರಿಸಿ ರುಚಿಯನ್ನು ಬದಲಾಯಿಸಬಹುದು. ದಾಲ್ಚಿನ್ನಿ ಹುಡಿ ಕೂಡ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಗ್ಲುಕೋಸ್‌ ಮಟ್ಟವನ್ನು ನಿಯಂತ್ರಣದಲ್ಲಿರಿಸಿ ಹಸಿವಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಒಂದು ಚಮಚ ಜೀರಿಗೆಯನ್ನು ಒಂದು ಲೋಟ ನೀರಿಗೆ ಹಾಕಿ ರಾತ್ರಿಯಿಡಿ ನೆನೆಸಿಟ್ಟು ಅದನ್ನು ಕುಡಿಯುವ ಮೊದಲು ದಾಲ್ಚಿನ್ನಿ ಅಥವಾ ಶುಂಠಿ ಹುಡಿಯನ್ನು ಸೇರಿಸಬಹುದು. ಇದರೊಂದಿಗೆ ನಿಂಬೆ ರಸ, ಮೆಂತೆ ಬೀಜಗಳನ್ನು ಹಾಕಬಹುದು. ಜೀರಿಗೆ ನೀರು ಕೇವಲ ತೂಕ ನಷ್ಟ ಮಾಡುವುದಿಲ್ಲ. ಅದರಿಂದ ಇನ್ನೂ ಹಲವು ಪರಿಣಾಮಗಳಿವೆ. ಹೀಗಾಗಿ ಇದನ್ನು ತೂಕ ನಷ್ಟಕ್ಕೆ ಬಳಸುವ ಮೊದಲು ತಜ್ಞರ ಮಾರ್ಗದರ್ಶನ ಪಡೆಯುವುದು ಬಹುಮುಖ್ಯ.

Advertisement

Udayavani is now on Telegram. Click here to join our channel and stay updated with the latest news.

Next