Advertisement

Mangaluru ವಿಶ್ವಕರ್ಮರಿಂದಾಗಿ ಸಂಸ್ಕೃತಿ ಜಗದ್ವಿಖ್ಯಾತ: ನಳಿನ್‌ ಕುಮಾರ್‌

11:01 PM Jan 28, 2024 | Team Udayavani |

ಮಂಗಳೂರು: ದೇವಸ್ಥಾನ, ಮನೆ ಸಹಿತ ಹಿಂದೂ ಧರ್ಮದ ಮೂಲ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ವಿಶ್ವಕರ್ಮ ಸಮಾಜದ ಪಾತ್ರ ಅದ್ವಿತೀಯ. ಬೇಲೂರು, ಹಳೆಬೀಡು ಸಹಿತ ಪ್ರಸ್ತುತ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮನ ನಿರ್ಮಾಣದ ಮೂಲಕ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ವಿಶ್ವಕರ್ಮ ಸಮಾಜಕ್ಕೆ ಸಲ್ಲುತ್ತದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ವಿಶ್ವಕರ್ಮ ಯುವ ಮಿಲನ್‌ ರಾಜ್ಯ ಸಮಿತಿ ಹಾಗೂ ವಿಶ್ವಕರ್ಮ ಯಜ್ಞ-ಯುವ ಸಮಾವೇಶ ಸಮಿತಿ ವತಿಯಿಂದ ಬಂಗ್ರಕೂಳೂರಿನ ಗೋಲ್ಡ್‌ ಫಿಂಚ್‌ ಸಿಟಿ ಮೈದಾನದಲ್ಲಿ ರವಿವಾರ ಆಯೋಜಿಸಲಾದ ವಿಶ್ವಕರ್ಮ ಮಹಾ ಯಜ್ಞ ಹಾಗೂ ವಿಶ್ವಕರ್ಮ ಯುವ ಸಮಾವೇಶದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.
ವಿಶ್ವಕರ್ಮ ನಿಗಮ ಮಂಡಳಿಗೆ ಕನಿಷ್ಠ 300 ಕೋ.ರೂ. ಮೀಸಲಿಡಬೇಕು ಎಂಬ ಬೇಡಿಕೆಯನ್ನು ರಾಜ್ಯ ಸರಕಾರದ ಗಮನಕ್ಕೆ ತರಲಾಗುವುದು. ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಗರಿಷ್ಠ ಪಾಲು ವಿಶ್ವಕರ್ಮ ಸಮಾಜಕ್ಕೆ ದೊರೆಯಬೇಕು ಎಂಬ ಬೇಡಿಕೆ ಈಡೇರಿಕೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಲೆ ಚಿರಸ್ಥಾಯಿ
ಉಡುಪಿ ಪಡುಕುತ್ಯಾರಿನ ಜಗದ್ಗುರು ಶ್ರೀಮತ್‌ ಆನೆಗುಂದಿ ಮಹಾಸಂಸ್ಥಾನಂ ಸರಸ್ವತಿ ಪೀಠದ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ವಿಶ್ವಕರ್ಮರು ಕಲೋಪಾಸಕರಾಗಿದ್ದಾರೆಯೇ ಹೊರತು ಸ್ಥಾನಮಾನಗಳನ್ನು ಬಯಸಿದವರಲ್ಲ. ಶಿಲ್ಪಿಗಳು ಅಳಿದರೂ ಅವರ ಕಲೆಗಳು ಚಿರಸ್ಥಾಯಿ ಎಂದರು.

ಹಾಸನ-ಅರಕಲಗೂಡು ಅರೆಮಾದನ
ಹಳ್ಳಿಯ ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ಪೀಠಾಧೀಶ್ವರ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಆರ್ಶೀವಚನ ನೀಡಿ, ವಿಶ್ವಕರ್ಮ ಸಮಾಜವು ವೇದ-ಶಿಲ್ಪ ಅಧ್ಯಯನ ಮಾಡಿಕೊಂಡು ಬಂದಿರುವ ಏಕೈಕ ಸಮಾಜ ಎಂದರು.

ಲೋಕೇಶ್‌ ಎಂ.ಬಿ. ಆಚಾರ್‌ ಹಾಗೂ ವಾರುಣಿ ನಾಗರಾಜ್‌ ಆಚಾರ್ಯ ವಿಶೇಷ ಉಪನ್ಯಾಸ ನೀಡಿದರು. ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ ವೈ., ಮಾಜಿ ಸಚಿವ ಬಿ. ರಮಾನಾಥ ರೈ, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ವಿಶ್ವಕರ್ಮ ಯಜ್ಞ-ಯುವ ಸಮಾವೇಶ ಸಮಿತಿ ಅಧ್ಯಕ್ಷ ನಾಗರಾಜ ಆಚಾರ್ಯ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮೂಲ್ಕಿ, ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಆಡಳಿತಾಧಿಕಾರಿ ಉಮೇಶ ಆಚಾರ್ಯ, ಮೂಡುಬಿದಿರೆ ಗುರುಮಠ ಕಾಳಿಕಾಂಬಾ ದೇವಸ್ಥಾನದ ಪುರೋಹಿತ್‌ ಜಯಕರ ಆಚಾರ್ಯ, ಸಮಿತಿ ಪ್ರಮುಖರಾದ ಸುಂದರ ಆಚಾರ್ಯ ಮರೋಳಿ, ಕೈಂತಿಲ ಸದಾಶಿವ ಆಚಾರ್ಯ, ಬಿ.ನಾಗರಾಜ ಆಚಾರ್ಯ, ನೀತಾ ಆರ್‌. ಆಚಾರ್ಯ, ಜಯಂತಿ ಕೇಶವ ಆಚಾರ್ಯ, ಅರುಣಾ ಸುರೇಶ್‌, ಗೀತಾ ನಾಗೇಂದ್ರನಾಥ್‌, ಸಂದೀಪ್‌ ಆಚಾರ್ಯ, ಶ್ರವಣ್‌ ಹರೀಶ್‌ ಆಚಾರ್ಯ ಉಪಸ್ಥಿತರಿದ್ದರು.

Advertisement

ವಿಶ್ವಕರ್ಮ ಯುವ ಮಿಲನ್‌ ರಾಜಾಧ್ಯಕ್ಷ ವಿಕ್ರಮ್‌ ಐ. ಆಚಾರ್ಯ ಪ್ರಸ್ತಾವನೆಗೈದರು. ಬೆಳುವಾಯಿ ಸುಂದರ ಆಚಾರ್ಯ ಸ್ವಾಗತಿಸಿದರು. ಸುಂದರ ಆಚಾರ್ಯ ಮರೋಳಿ ವಂದಿಸಿದರು. ಪಶುಪತಿ ಉಳ್ಳಾಲ ಹಾಗೂ ಚೈತ್ರಾ ಕೋಟ ನಿರೂಪಿಸಿದರು.

ಸಮಾಜದ ಸಾಧಕರಿಗೆ ಸಮ್ಮಾನ
ಸ್ವರ್ಣ ಶಿಲ್ಪದಲ್ಲಿ ವಿಶೇಷ ಸಾಧನೆ ಮಾಡಿದ ವೈ.ಎನ್‌. ತಾರಾನಾಥ ಆಚಾರ್ಯ ಮಂಗಳೂರು, ಆಯನ ಶಿಲ್ಪದಲ್ಲಿ ದಾಮೋದರ ಆಚಾರ್ಯ ಕಾಂತಾರಗೋಳಿ, ಕಾಷ್ಟ ಶಿಲ್ಪದಲ್ಲಿ ರಾಜಗೋಪಾಲ ಆಚಾರ್ಯ ಕೋಟೇಶ್ವರ, ಶಿಲಾ ಶಿಲ್ಪದಲ್ಲಿ ಗಣಪತಿ ಆಚಾರ್ಯ ಕಾರ್ಕಳ, ಎರಕ ಶಿಲ್ಪದಲ್ಲಿ ಬಿಳಿಯೂರು ಗಣಪತಿ ಆಚಾರ್ಯ ಶಂಕರಪುರ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಡಾ| ಎನ್‌.ಆರ್‌. ಹರೀಶ್‌ ಆಚಾರ್ಯ, ಎಸ್‌ಕೆಜಿ ಕೋ ಆಪ್‌. ಸೊಸೈಟಿ ಮಂಗಳೂರು ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಅವರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next