Advertisement

ಧರ್ಮದ ಆವರಣದೊಳಗೆ ಸಂಸ್ಕೃತಿ ಅನಾವರಣ: ಒಡಿಯೂರು ಶ್ರೀ

12:30 AM Feb 07, 2019 | Team Udayavani |

ವಿಟ್ಲ: ಸನಾತನ ಹಿಂದೂ ಧರ್ಮ ಶಾಶ್ವತ. ಧಾರ್ಮಿಕ ಶ್ರದ್ಧಾ ಕೇಂದ್ರಗಳು ಅದಕ್ಕೆ ಪೂರಕವಾಗಿರ ಬೇಕು. ಅಲ್ಲಿ ಪೂಜೆ ಪುನಸ್ಕಾರ ಗಳೊಂದಿಗೆ ಪ್ರವಚನಾದಿ ಸಂಸ್ಕಾರ, ನೀತಿ ಬೋಧಿಸಲ್ಪಡಬೇಕು. ಕುಂಡಡ್ಕ ದೇಗುಲ ಬ್ರಹ್ಮಕಲಶ ಊರಿನಲ್ಲಿ ಆ ಸಾಧನೆ ಮಾಡಿದೆ. ಕುಂಡಡ್ಕದ ಧರ್ಮದ ಆವರಣದೊಳಗೆ ಸಂಸ್ಕೃತಿ ಅನಾವರಣಗೊಂಡಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

Advertisement

ಅವರು ಬುಧವಾರ ಕುಳ-ವಿಟ್ಲ ಮುಟ್ನೂರು ಗ್ರಾಮದ ಕುಂಡಡ್ಕ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ, ಮಾಡ ಶಿಬರಿಕಲ್ಲ ಶ್ರೀ ಮಲರಾಯ – ಮೂವರ್‌ ದೈವಂಗಳ ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.

ವಿಟ್ಲ ಯೋಗೀಶ್ವರ ಮಠದ ಶ್ರೀ 1008 ಮಠಾಧೀಶ ಶ್ರೀ ರಾಜಗುರು ತುರಂತನಾಥಾಜಿ ಮಹಾರಾಜ ಆಶೀರ್ವಚನ ನೀಡಿ ಭಗವಂತನ ಕೆಲಸದಲ್ಲಿ ಯಾವ ತಪ್ಪುಗಳಾಗಲು ಸಾಧ್ಯವಿಲ್ಲ. ಸೂಕ್ಷ್ಮ ರೂಪದಲ್ಲಿ  ದೇವರು ಕುಂಡಡ್ಕದಲ್ಲಿ ಸಂಚರಿಸುತ್ತಿದ್ದಾನೆ ಎಂದು ತಿಳಿಸಿದರು.

ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ವಿಟ್ಲ ಅರಮನೆಯ ವಿ. ಜನಾರ್ದನ ವರ್ಮ ಅರಸರು ಅಧ್ಯಕ್ಷತೆ ವಹಿಸಿದ್ದರು. ಶ್ರೀವತ್ಸ ಕೆದಿಲಾಯ ಶಿಬರ ಅವರು ಧಾರ್ಮಿಕ ಉಪನ್ಯಾಸ ನೀಡಿದರು.

ಗಣ್ಯರಾದ ಎಂ.ಕೆ. ಪುರುಷೋತ್ತಮ ಭಟ್‌ ಬದನಾಜೆ, ಗೋಪಾಲಕೃಷ್ಣ ಭಟ್‌ ಬೈಪದವು, ಎಂ.ಡಿ.ವೆಂಕಪ್ಪ, ಜಯಾನಂದ ಪಿ., ಮೋಹನ ಗೌಡ ಕಾಯರ್‌ಮಾರ್‌, ಉದ್ಯಮಿ ಜಯಗೋವಿಂದ ಭಟ್‌, ಪವಿತ್ರಪಾಣಿ ಸುಬ್ರಹ್ಮಣ್ಯ ಕೇಳತ್ತಾಯ, ಯೋಗೀಶ್‌ ಕುಡ್ವ, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಉಪಸ್ಥಿತರಿದ್ದರು.

Advertisement

ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕೆ. ಟಿ. ವೆಂಕಟೇಶ್ವರ ನೂಜಿ ಪ್ರಸ್ತಾವನೆ ಗೈದರು. ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಮರುವಾಳ ಸ್ವಾಗತಿಸಿ, ಕೋಶಾಧಿಕಾರಿ ಗೋವಿಂದ ರಾಜ್‌ ಪೆರುವಾಜೆ ವಂದಿಸಿದರು. ಚಿದಾನಂದ ಪೆಲತ್ತಿಂಜ ನಿರೂಪಿಸಿದರು. 

ಸಮ್ಮಾನ
ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪುರಂದರ ಗೌಡ ದರ್ಬೆ, ಚಂದ್ರಮೋಹನ ಗೌಡ, ಕಬಡ್ಡಿಪಟು ಭರತ್‌ ಶೆಟ್ಟಿ, ನಾಟಿ ವೈದ್ಯೆ ಗಿರಿಜಾ ಅವರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next