Advertisement
ಮಂಗಳೂರು ಮಹಿಳಾ ಬಂಟರ ಯಾನೆ ನಾಡವರ ಮಾತೃ ಸಂಘ ಮಹಿಳಾ ಘಟಕದ ಅಧ್ಯಕ್ಷೆ ಡಾ| ಆಶಾಜ್ಯೋತಿ ಮಾತನಾಡಿ, ಮಾತೃ ಪ್ರಧಾನ ಸಂಸ್ಕೃತಿಯ ಬಂಟ ಸಮುದಾಯದ ಸಂಸ್ಕಾರ ಆಚಾರ ವಿಚಾರಗಳನ್ನು ಉಳಿಸಿಕೊಂಡು, ಮುಂದಿನ ಪೀಳಿಗೆಗೂ ಪಸರಿಸುವ ಕಾರ್ಯ ನಡೆಸಬೇಕು. ರಾಜ್ಯದಲ್ಲಿ ಬಿ ವರ್ಗದಲ್ಲಿ ಇರುವ ಬಂಟ ಸಮುದಾಯ ಕೇಂದ್ರದ ವ್ಯಾಪ್ತಿಯಲ್ಲಿ ಯಾವುದೇ ವರ್ಗದಲ್ಲೂ ನಮೂದು ಆಗದಿರುವುದು ಖೇದಕರ ಸಂಗತಿ ಎಂದರು.
110 ವರ್ಷಗಳ ಇತಿಹಾಸ ಇರುವ ಸಂಘಟನೆ ಈ ಸದೃಢವಾಗಿ ಬೆಳೆದ ಹಿಂದೆ ಸಂಘಟಿತ ಪ್ರಯತ್ನ ಇದೆ. ಬಂಟರ ಸಂಘದ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಪುತ್ತೂರು ಮಹಿಳಾ ಬಂಟರ ಸಂಘ ಸಂಘಟಿತ ನೆಲೆಯಲ್ಲಿ ತೊಡಗಿಕೊಳ್ಳಬೇಕು ಎಂದರು. ಸಮಾಜಮುಖೀ ಕಾರ್ಯ
ಸಭಾಧ್ಯಕ್ಷತೆ ವಹಿಸಿದ ಪುತ್ತೂರು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಕುಮುದಾ ಎಲ್.ಎನ್. ಶೆಟ್ಟಿ ಮಾತನಾಡಿ, ಮಹಿಳಾ ಬಂಟರ ಸಂಘವು ಸಮಾಜ ಮುಖೀ ಕಾರ್ಯಚಟುವಟಿಕೆಗಳೊಂದಿಗೆ, ಸಮಾಜದ ಹಿಂದುಳಿದವರಿಗೆ ಆರ್ಥಿಕ ಸಹಕಾರ ನೀಡುತ್ತಿದೆ ಎಂದರು.
Related Articles
Advertisement
ಪುತ್ತೂರು ಮಹಿಳಾ ಬಂಟರ ಸಂಘದ ಸ್ವರ್ಣಲತಾ ಅವರು ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಬಿತಾ ಭಂಡಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಆಶಾ ಎಸ್. ರೈ ವಂದಿಸಿದರು.
ಸಹಾಯಧನ ಹಸ್ತಾಂತರಮಹಿಳಾ ಬಂಟರ ಸಂಘದ ಕಾರ್ಯ ಚಟುವಟಿಕೆಯ ಅಂಗವಾಗಿ, ಅನಾರೋಗ್ಯ ದಿಂದ ಬಳಲುತ್ತಿರುವ ವಸಂತಿ (5 ಸಾವಿರ ರೂ.), ಮನೆ ನಿರ್ಮಾಣಕ್ಕೆ ಕೊçಲದ ಸುಮತಿ (10,000 ರೂ.), ಕುತ್ಯಾಡಿ ಸತೀಶ್ ರೈ ಅವರು ಮಹಿಳಾ ಬಂಟರ ಸಂಘದ ಮೂಲಕ ಪಾಪೆಮಜಲಿನ ಇಬ್ಬರು ವಿದ್ಯಾರ್ಥಿನಿಯರ ದತ್ತು ಸ್ವೀಕಾರ ಹಾಗೂ ಎಸೆಸೆಲ್ಸಿ ತನಕದ ಶೈಕ್ಷಣಿಕ ವೆಚ್ಚ ಭರಿಸಲಿದ್ದಾರೆ. ಶ್ರಾವಣ್ಯಾ ಹಾಗೂ ಸೌಜನ್ಯಾ ತಿಂಗಳಾಡಿ ಅವರಿಗೆ ಈ ಸಾಲಿನ ಶೈಕ್ಷಣಿಕ ವೆಚ್ಚವನ್ನು ಕುತ್ಯಾಡಿ ವಸಂತ ರೈ ಅವರು ಹಸ್ತಾಂತರಿಸಿದರು.