Advertisement

ಸಂಸ್ಕೃತಿ ಪ್ರತೀಕ ಸ್ಮಾರಕ ರಕ್ಷಣೆ ಅಗತ್ಯ

05:57 AM Jan 05, 2019 | |

ಕಲಬುರಗಿ: ನಮ್ಮ ನಡೆ, ನುಡಿ ಬಿಂಬಿಸುವ ಸಂಸ್ಕೃತಿ ಪ್ರತೀಕವಾಗಿರುವ ಸ್ಮಾರಕಗಳ ರಕ್ಷಣೆಗೆ ಸರ್ಕಾರದ ಜತೆಗೆ ಸಾರ್ವಜನಿಕರು ಕೈ ಜೋಡಿಸುವುದು ಹೆಚ್ಚು ಅಗತ್ಯವಿದೆ ಎಂದು ಆಗಾಖಾನ್‌ ಸಂಸ್ಕೃತಿ ಟ್ರಸ್ಟ್‌ ನಿರ್ದೇಶಕ ಕೆ.ಕೆ ಮಹ್ಮದ್‌ ಹೇಳಿದರು.

Advertisement

ನಗರದ ಶರಣಬಸವ ವಿಶ್ವವಿದ್ಯಾಲಯ, ಶರಣಬಸವೇಶ್ವರ ಕಲಾ ಪದವಿ ಮಹಾವಿದ್ಯಾಲಯ ಸಂಯುಕ್ತವಾಗಿ ಶುಕ್ರವಾರ
ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಹಮ್ಮಿಕೊಂಡಿದ್ದ ಸ್ಮಾರಕಗಳ ಸಮಗ್ರ ಸಂರಕ್ಷಣಾ ವಿಧಾನಗಳು ರಾಷ್ಟ್ರ ಮಟ್ಟದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪುರಾತನ ಸ್ಮಾರಕಗಳ ರಕ್ಷಣೆ ಮಾಡುವ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಅಲ್ಲದೇ ಅವು ವಿಕೋಪಕ್ಕೆ ಹೋಗಿ ಸಮಾಜದ ಸ್ವಾಸ್ಥ ಹಾಳಾಗುವ ಸನ್ನಿವೇಶ ನಿರ್ಮಾಣವಾಗಬಹುದು. ಆದ್ದರಿಂದ ಸ್ಮಾರಕಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು.

ಸ್ಮಾರಕಗಳನ್ನು ರಕ್ಷಿಸುವುದರಿಂದ ಪ್ರವಾಸೋದ್ಯಮ ಬೆಳೆದು ಆರ್ಥಿಕ ಸಂಪನ್ಮೂಲ ವೃದ್ಧಿಯಾಗಿ ಬಡತನ ಕಡಿಮೆಯಾಗುತ್ತದೆ. ಮುಂದಿನ ಪೀಳಿಗೆಗೆ ಇತಿಹಾಸ ಹೇಳಲು ಅನುಕೂಲವಾಗುತ್ತದೆ. ಹೀಗಾಗಿ ಪ್ರಾಚೀನ ಕಾಲದಲ್ಲಿ ನಿರ್ಮಾಣಗೊಂಡಿರುವ ಸ್ಮಾರಕಗಳನ್ನು ರಕ್ಷಿಸಬೇಕಿದೆ ಎಂದರು.

ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ| ನಿರಂಜನ ನಿಷ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಮಾರಕಗಳು ಇತಿಹಾಸದ
ಪ್ರತೀಕವಾಗಿವೆ. ಹೀಗಾಗಿ ನಮ್ಮ ಆಸ್ತಿಯಂತೆ ಕಾಪಾಡುವುದು ಅಗತ್ಯವಾಗಿದೆ ಎಂದರು.

Advertisement

ಮೈಸೂರಿನ ಭಾರತೀಯ ಇತಿಹಾಸ ಸಂಕಲನ ಸಮಿತಿಯ ಕಾರ್ಯದರ್ಶಿ ಡಾ| ಶ್ರೀನಿವಾಸರಾವ್‌ ಮಾತನಾಡಿ, ನಮ್ಮನ್ನು ನಾವು ಅರಿಯುವುದಕ್ಕೆ ಇತಿಹಾಸ ಸಹಕಾರಿಯಾಗಿದೆ. ಇತಿಹಾಸವನ್ನು ತಿಳಿದುಕೊಂಡರೇ ನಾವು ಶ್ರೀಮಂತರಾಗಬಹುದು ಎಂದು ಹೇಳಿದರು.

ಪ್ರೊ| ಶಾಂತಲಾ ನಿಷ್ಟಿ, ಜಗದೇವಿ ಕಲಶೆಟ್ಟಿ, ಪ್ರೊ| ರೇಣುಕಾ ಕನಕೇರಿ, ಡಾ| ವೆಂಕಣ್ಣ ಡೊಣ್ಣೆಗೌಡರ್‌ ಹಾಗೂ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಚಾರ್ಯ ಡಾ| ಎನ್‌.ಎಸ್‌. ಪಾಟೀಲ ಸ್ವಾಗತಿಸಿದರು. ಡಾ| ಸುರೇಶ ನಂದಗಾಂವ ನಿರೂಪಿಸಿದರು, ಡಾ| ಶಿವರಾಜ ಶಾಸ್ತ್ರೀ ಹೇರೂರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next