Advertisement
ಸಂಸ್ಕೃತ ಭಾರತಿ ಸಂಸ್ಥೆ, ಶನಿವಾರ ಗಿರಿನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಿಂತಕ ಮತ್ತು ಲೇಖಕ ಶತಾವಧಾನಿ ಆರ್.ಗಣೇಶ್ ಅವರ “ಮಹಾಬ್ರಾಹ್ಮಣ’, ಜನಾರ್ಧನ ಹೆಗಡೆ ಅವರ “ಇಂದ್ರಲೇಖ’ ಹಾಗೂ “ಗ್ರಂಥಿಲಂ’ ಕೃತಿಗಳನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದ ಅವರು, ಸಂಸ್ಕೃತ ಭಾಷೆಯಲ್ಲಿ ಸೌಂದರ್ಯ ಅಡಗಿದೆ ಎಂದು ಹೇಳಿದರು.
Related Articles
Advertisement
ನನಗೆ ಸಂಸ್ಕೃತ ಭಾಷೆ ಮಾತನಾಡಲು ಬರುವುದಿಲ್ಲ.ಆದರೆ, ಏನು ಮಾತನಾಡಿದರು ಎಂಬುವುದು ಅರ್ಥವಾಗುತ್ತದೆ. ನಮ್ಮ ತಾತ ನನಗೆ ಕಾಳಿದಾಸ ಕಾವ್ಯಗಳನ್ನು ಸಂಸ್ಕೃತದಲ್ಲಿ ಹೇಳಿಕೊಡುತ್ತಿದ್ದರು. ಹೀಗಾಗಿ ಕಾಳಿದಾಸನ ಕಾವ್ಯಗಳ ಬಗ್ಗೆ ನನಗೆ ಅರಿವಿದೆ. ಜ್ಞಾನ-ವಿಜ್ಞಾನ ಈ ಭಾಷೆಯಲ್ಲಿ ಅಡಗಿದೆ ಎಂದರು.
ಲೇಖಕ ಮತ್ತು ಚಿಂತಕ ಶತಾವಧಾನಿ ಡಾ.ಆರ್.ಗಣೇಶ್ ಮಾತನಾಡಿ, ದೇವುಡು ನರಸಿಂಹ ಶಾಸ್ತ್ರೀ ಅವರ ಗದ್ಯ ಕಾವ್ಯದಲ್ಲಿದ್ದ “ಮಹಾಬ್ರಾಹ್ಮಣ’ ಕೃತಿಯನ್ನು ಸಂಸ್ಕೃತ ಭಾಷೆಯಲ್ಲಿ ತಂದಿರುವುದು ಖುಷಿ ಕೊಟ್ಟಿದೆ. ಗದ್ಯ ಕಾವ್ಯದಲ್ಲಿದ್ದ ಕೃತಿಯನ್ನು ಸಂಸ್ಕೃತದಲ್ಲಿ ಪದ್ಯರೂಪಕ್ಕೆ ತರುವುದು ಎಷ್ಟು ಕಷ್ಟ ಎಂಬ ಅರಿವು ನನಗಾಯಿತು ಎಂದು ಹೇಳಿದರು.
ನಾಗಪುರದ ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಶ್ರೀನಿವಾಸ ವರಖೇಡಿ, ದೇವುಡು ಪ್ರತಿಷ್ಠಾನದ ಗಂಗಾಧರ ದೇವುಡು, ಪ್ರೇಕ್ಷಾ ಸಂಪಾದಕ ಗಣ್ಯ ಸದಸ್ಯ ಬಿ.ಎನ್.ಶಶಿಕಿರಣ ಉಪಸ್ಥಿತರಿದ್ದರು.
10 ಲಕ್ಷ ರೂ. ದೇಣಿಗೆ: ಸಂಸ್ಕೃತ ಕಲಿಸುವ ನಿಟ್ಟಿನಲ್ಲಿ ಸಂಸ್ಕೃತ ಭಾರತಿ ಸಂಸ್ಥೆ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದು, ಸಂಸ್ಕೃತವನ್ನು ಮತ್ತಷ್ಟು ಜನರಿಗೆ ಕಲಿಸಲಿ ಎಂಬ ಉದ್ದೇಶದಿಂದ ಇನ್‌ಫೋಸಿಸ್ ಫೌಂಡೇಷನ್ ವತಿಯಿಂದ ಸಂಸ್ಕೃತ ಭಾರತಿ ಸಂಸ್ಥೆಗೆ 10 ಲಕ್ಷ ರೂ.ದೇಣಿಗೆ ನೀಡುವುದಾಗಿ ಸುಧಾಮೂರ್ತಿ ಹೇಳಿದರು.