Advertisement

ಯುವಜನರಲ್ಲಿ ಬೆಳೆಯಲಿ ಸಂಸ್ಕೃತಿ-ಸಂಸ್ಕಾರ

09:44 AM Feb 18, 2019 | |

ದೇವದುರ್ಗ: ಜೀವನದಲ್ಲಿ ಹಣ, ಚಿನ್ನ ಸಂಪಾದಿಸಿದರೆ ಕಳ್ಳರು, ದರೋಡೆಕೋರರು ಕದ್ದುಕೊಂಡು ಹೋಗಬಹುದು. ಆದರೆ ಯಾರೂ ಕದಿಯಲಾಗದ ಸಂಪತ್ತು ವಿದ್ಯೆಯಾಗಿದ್ದು, ಪ್ರತಿಯೊಬ್ಬರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸಮೀಪದ ಸುಕ್ಷೇತ್ರ ವೀರಘೋಟದ ಆದಿಮೌನೇಶ್ವರ ಆಸನಕಟ್ಟೆಯಲ್ಲಿ 1.96 ಲಕ್ಷ ಗಣಗಳ ಇಷ್ಟಲಿಂಗ ಪೂಜಾ ಸಮಾರಂಭದ ಮೂರನೇ ದಿನ ರವಿವಾರ ನಡೆದ ಯುವಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆಧುನಿಕ ಮತ್ತು ತಂತ್ರಜ್ಞಾನದ ಯುಗದಲ್ಲಿ ಯುವಕರು ಮೊಬೈಲ್‌ಗ‌ಳ ದಾಸರಾಗುತ್ತಿದ್ದಾರೆ. ತಂದೆ-ತಾಯಿಗಳಿಗೆ, ಹಿರಿಯರಿಗೆ ಗೌರವ ನೀಡುತ್ತಿಲ್ಲ. ಆದ್ದರಿಂದ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸಿ ಸಮಾಜದ ಆಸ್ತಿ ಮಾಡಬೇಕು ಎಂದರು.

Advertisement

ಕೂಡ್ಲಿಗಿಯ ಪ್ರಕಾಶ ಸಾಗರ ಶಿವಾಚಾರ್ಯರು ಮಾತನಾಡಿ, ಚೀನಾ ವಯೋವೃದ್ಧರ ದೇಶವಾಗುತ್ತಿದ್ದರೆ, ಭಾರತ ಯುವಕರ ದೇಶವಾಗಿ ಬೆಳೆಯುತ್ತಿದೆ. ಭಾರತದ ಯುವಕರು ವಿವಿಧ ದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಲು ಯುವಜನತೆ ಸಂಕಲ್ಪ ಮಾಡಬೇಕು. ಸ್ವಾತಂತ್ರ್ಯಾ ಸೇನಾನಿ ಭಗತ್‌ಸಿಂಗ್‌ರ ಆದರ್ಶಗಳನ್ನು ಪಾಲಿಸಬೇಕು. ದೇಶ ಕಾಯುವ ಸೈನಿಕರನ್ನು ಗೌರವದಿಂದ ಕಾಣಬೇಕು ಎಂದರು.

ಸಿಂದಗಿ ಸಾರಂಗಮಠದ ಶ್ರೀ ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಯುವಕರು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಿಲ್ಲ. ದೇಶ, ಧರ್ಮ ಮರೆತ ಯುವಕರಲ್ಲಿ ಸ್ವಾಭಿಮಾನ ಇಲ್ಲದಂತಾಗಿದೆ. ಆತ್ಮಬಲ ಗಟ್ಟಿಯಾಗಿ ಭಕ್ತಿ ಶುದ್ಧಿಯಿಂದಾಗಿ ಶಿಕ್ಷಕರು ಬೋದಿಸುವ ಪಾಠ ಗಟ್ಟಿಗೊಳ್ಳುತ್ತದೆ ಎಂದ ಅವರು, ಅಡವಿಲಿಂಗ ಮಹಾರಾಜ ಶ್ರೀಗಳ ತಪಸ್ಸಿನ ಫಲವಾಗಿ ವೀರಘೋಟ ಪುಣ್ಯಕ್ಷೇತ್ರವಾಗುತ್ತಿದೆ. ಅಡವಿಲಿಂಗ ಮಹಾರಾಜರು ನಡೆದಾಡುವ ದೇವರಾಗಿದ್ದಾರೆ. ಭಕ್ತರಲ್ಲಿ ಆತ್ಮವಿಶ್ವಾಸ ಬೆಳೆಸುವ ಜೊತೆಯಲ್ಲಿ ಧರ್ಮ ಪಾಲನೆ ನೀತಿ ಪಾಠ ಬೋಧನೆ ಮಾಡಿದ್ದಾರೆ ಎಂದರು.

ಶ್ರೀಮಠದ ಅಡವಿಲಿಂಗ ಮಹಾರಾಜ ಶ್ರೀಗಳು ಆಶೀರ್ವಚನ ನೀಡಿದರು. ಮುರುಘೇಂದ್ರ ಸ್ವಾಮೀಜಿ, ಪಂಚಾಕ್ಷರ ಸ್ವಾಮೀಜಿ, ಅನ್ನದಾನೇಶ್ವರ ದೇವರು ಉಪಸ್ಥಿತರಿದ್ದರು. ಶಾಸಕ ಕೆ. ಶಿವನಗೌಡ ನಾಯಕ ಅಧ್ಯಕ್ಷತೆ ವಹಿಸಿದ್ದರು.

ವ್ಯಕ್ತಿ ಭಕ್ತಿಯಲ್ಲಿ ಶ್ರೀಮಂತನಾದಾಗ ಭಗವಂತನ ದರ್ಶನವಾಗುತ್ತದೆ. ಜನರಲ್ಲಿ ಭಕ್ತಿ ಭಾವ, ಸಂಸ್ಕೃತಿ, ಸಂಸ್ಕಾರ ಬೆಳೆಸಲು ಇಂತಹ ಧಾರ್ಮಿಕ ಕಾರ್ಯಗಳು ಅಗತ್ಯವಾಗಿದೆ. ಅಡವಿಲಿಂಗ ಮಹಾರಾಜ ಶ್ರೀಗಳು ಆಯೋಜಿಸಿದ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಇತಿಹಾಸ ಸೃಷ್ಟಿಸಲಿದೆ.  ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಬಾಗೇವಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next