Advertisement

ಸಂಸ್ಕೃತಿ ಉಳಿಸೋದೇ ದೊಡ್ಡ ಸವಾಲು: ಚೂಡಾಮಣಿ

04:23 PM Dec 11, 2018 | |

ಸಾಗರ: ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಹೆಣ್ಣುಮಕ್ಕಳು ತೊಡಗಿಕೊಳ್ಳಬೇಕು ಎನ್ನುವ ಮಾತನಾಡುತ್ತೇವೆ. ಆದರೆ ನಮ್ಮ ಮಕ್ಕಳನ್ನೇ ನಾವು ಈ ಕ್ಷೇತ್ರದಲ್ಲಿ ತೊಡಗಿಸುವುದಿಲ್ಲ. ಎಲ್ಲರೂ ನಗರ ಸೇರಬೇಕು, ಡಾಕ್ಟರ್‌, ಇಂಜಿನಿಯರ್‌ ಆಗಬೇಕು ಎನ್ನುವ ಮನೋಭೂಮಿಕೆ ಸೃಷ್ಟಿಯಾಗುತ್ತಿದೆ. ಹೀಗೇ ಆದರೆ, ನಮ್ಮ ಸಂಸ್ಕೃತಿ ಉಳಿಸುವುದು ಹೇಗೆ ಎಂದು ರಾಜ್ಯ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚೂಡಾಮಣಿ ರಾಮಚಂದ್ರ ಹೇಳಿದರು.

Advertisement

ಸಾಗರ ಮಾಧ್ವ ಸಂಘ, ತಾಲೂಕು ಬ್ರಾಹ್ಮಣ ಒಕ್ಕೂಟ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.  ಪ್ರದರ್ಶನ ಕಲೆಗಳು ಇಂದು ಅವನತಿಯ ಅಂಚಿನಲ್ಲಿವೆ. ಇವುಗಳನ್ನು ಕರಾರುವಾಕ್ಕಾಗಿ ಕಲಿತು ಪ್ರದರ್ಶಿಸುವಂತಹ ಕಲಾವಿದರ ಸಂಖ್ಯೆಯೂ ಕ್ಷೀಣಿಸುತ್ತಿದೆ. ಬೃಹತ್‌ ಚರ್ಮವಾದ್ಯಗಳಲ್ಲಿ ಒಂದಾದ ಡೊಳ್ಳು ಒಂದು ಕಾಲದಲ್ಲಿ ಗಂಡು ಕಲೆಯಾಗಿತ್ತು. ಅದನ್ನು ಕರಗತಗೊಳಿಸಿಕೊಂಡು ನಾವು ಕಲಿಯಲು ಪುರುಷ ಡೊಳ್ಳು ಕಲಾವಿದರು ನೀಡಿದ ಸಹಕಾರವನ್ನು ನಾವು ಎಂದಿಗೂ ಮರೆಯುವಂತಿಲ್ಲ ಎಂದರು.

ಭಾರತ ಸರ್ಕಾರದ ಸೇವಾಸಿಂಧು ಯೋಜನೆಯ ಸೇವಾ ಪುರಸ್ಕಾರ ಪಡೆದ ಕಲ್ಯಾಣಿ ಆನಂದ ಮಾತನಾಡಿ, ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳನ್ನು ತಲುಪಬೇಕು. ನಮ್ಮಲ್ಲಿ ಸೇವಾ ಮನೋಭಾವ ಇರಬೇಕು. ಆ ನಿಟ್ಟಿನಲ್ಲಿ ಶ್ರಮ ವಹಿಸಬೇಕಾದದ್ದು ನಮ್ಮ ಜವಾಬ್ದಾರಿ
ಎಂದರು. 

ತಾಲೂಕು ಬ್ರಾಹ್ಮಣ ಒಕ್ಕೂಟದ ಗೌರವಾಧ್ಯಕ್ಷ ಎಚ್‌.ಆರ್‌. ನಾಗಭೂಷಣ, ಮಾಧ್ವ ಸಂಘದ ಅಧ್ಯಕ್ಷ ಡಾ| ಗುರುರಾಜ ಕಲ್ಲಾಪುರ ಮಾತನಾಡಿದರು. ಮಾಧ್ವ ಸಂಘದ ಕಾರ್ಯದರ್ಶಿ ಅನಂತರಾವ್‌, ಮುರುಳೀಧರ ಹತ್ವಾರ್‌, ಶ್ರೀಶಾಚಾರ್‌, ರಾಜಗೋಪಾಲ್‌, ಬದರೀನಾಥ್‌, ವೈ. ಮೋಹನ್‌, ಸಂಜಯ್‌, ರಘುನಂದನ ಪುರೋಹಿತ್‌, ಭಾಗ್ಯಲಕ್ಷ್ಮೀ, ಸುಮಿತ್ರಾಬಾಯಿ, ವೆಂಕಟೇಶ ಕಟ್ಟಿ, ಶ್ರೀದೇವಿ ಮೋಹನ್‌, ನಾಗರತ್ನ, ರಮಾಮಣಿ, ಮಂಜುಳಾ ಬದರೀನಾಥ್‌, ಸತ್ಯಶೀಲ, ವೀರಜಾ ಕಲ್ಲಾಪುರ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next