ವಾಷಿಂಗ್ಟನ್: ಮುಸ್ಲಿಮರನ್ನು ರಹಸ್ಯವಾಗಿ ಸೆರೆಯಲ್ಲಿಡಲು ಷಿನ್ ಜಿಯಾಂಗ್ ಪ್ರಾಂತ್ಯದಲ್ಲಿ ಬೃಹತ್ ಜೈಲು ಮತ್ತು ನಿರ್ಬಂಧ ಪ್ರದೇಶಗಳ ಕುರಿತು ತನಿಖಾ ವರದಿ ಪ್ರಕಟಿಸುವ ಮೂಲಕ ಚೀನಾದ ಮುಖವಾಡವನ್ನು ಜಾಗತಿಕವಾಗಿ ಬಯಲುಗೊಳಿಸಿದ ಭಾರತ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್ ಗೆ ಈ ಬಾರಿಯ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:SSLC ಬಹುಆಯ್ಕೆ ಪ್ರಶ್ನೆ ಮಾದರಿ ಪರೀಕ್ಷೆಗೆ ಬಹಿಷ್ಕಾರ ಎಚ್ಚರಿಕೆ: ವಿದ್ಯಾರ್ಥಿಗಳ ಪ್ರತಿಭಟನೆ
ಹೊಸಕಲ್ಪನೆಯ ತನಿಖಾ ವರದಿಗಳನ್ನು ಪ್ರಕಟಿಸುವ ಮೂಲಕ ಅದನ್ನು ಜಗಜ್ಜಾಹೀರುಗೊಳಿಸಿದ ಹಿನ್ನೆಲೆಯಲ್ಲಿ ಮೇಘಾ ರಾಜಗೋಪಾಲನ್ ಸೇರಿ ಮೂವರು ಪತ್ರಕರ್ತರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಮೇಘಾ ಅವರು ಬಝ್ ಫೀಡ್ ನ್ಯೂಸ್ ಸುದ್ದಿಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಟಂಪಾ ಬೇ ಟೈಮ್ಸ್ ವರದಿಗಾರ ನೀಲ್ ಬೇಡಿ ಮತ್ತು ಕ್ಯಾಥ್ಲಿನ್ ಮ್ಯಾಕ್ ಗ್ರೊರಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಪತ್ರಕರ್ತ ನೀಲ್ ಬೇಡಿ ಟಂಪಾ ಬೇ ಟೈಮ್ಸ್ ನ ತನಿಖಾ ವರದಿಗಾರರಾಗಿದ್ದಾರೆ. 2017ರಲ್ಲಿ ಚೀನಾ ಷಿನ್ ಜಿಯಾಂಗ್ ಪ್ರದೇಶದಲ್ಲಿ ಸಾವಿರಾರು ಪತ್ರಕರ್ತರನ್ನು ಬಂಧಿಸಲು ಪ್ರಾರಂಭಿಸಿದ್ದು, ಈ ಸಂದರ್ಭದಲ್ಲಿ ಮೇಘಾ ರಾಜಗೋಪಾಲನ್ ಅವರು ಮೊದಲ ಬಾರಿಗೆ ನಿರ್ಬಂಧ ಶಿಬರಕ್ಕೆ ಭೇಟಿ ನೀಡಿದ್ದರು. ಆದರೆ ಅಂತಹ ಸ್ಥಳ ತಮ್ಮಲ್ಲಿ ಯಾವುದು ಅಸ್ತಿತ್ವದಲ್ಲಿ ಇಲ್ಲ ಎಂದು ಚೀನಾ ನಿರಾಕರಿಸಿರುವುದಾಗಿ ಬಝ್ ಫೀಡ್ ನ್ಯೂಸ್ ಹೇಳಿದೆ.
ಷಿನ್ ಜಿಯಾಂಗ್ ನಲ್ಲಿನ ರಹಸ್ಯ, ನಿರ್ಬಂಧ ಪ್ರದೇಶಗಳ ಕುರಿತ ಸರಣಿ ತನಿಖಾ ವರದಿ ಅಂತಾರಾಷ್ಟ್ರಿಯ ವರದಿ ವಿಭಾಗದಲ್ಲಿ ಮೇಘಾ ಪುಲಿಟ್ಜರ್ ಪ್ರಶಸ್ತಿಯನ್ನು ಜಯಿಸಲು ಸಾಧ್ಯವಾಯಿತು ಎಂದು ವರದಿ ತಿಳಿಸಿದೆ.