ಮೂಡುಬಿದಿರೆ: ಜಾಂಬೂರಿ ಯಿಂದ ಪ್ರಾದೇಶಿಕ ಸಂಸ್ಕೃತಿ, ಪರಂಪರೆಯ ವಿನಿಮಯವಾಗುತ್ತದೆ ಎಂದು ತಮಿಳು ನಾಡಿನ ಶಿಕ್ಷಣ ಸಚಿವ, ರಾಜ್ಯ ಸ್ಕೌಟ್ ಗೈಡ್ಸ್ ಅಧ್ಯಕ್ಷ ಅನಿºಲ್ ಮಹೇಶ್ ಪೊಯ್ಯಮೊಜಿ ಹೇಳಿದ್ದಾರೆ.
ಶನಿವಾರ ಜಾಂಬೂರಿಗೆ ಭೇಟಿ ನೀಡಿ ವ್ಯವಸ್ಥೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಪ್ಯಾಲೇಸ್ ಗ್ರೌಂಡ್‌ನಲ್ಲಿ ತಮಿಳುನಾಡು ದಿನದ ವಿವಿಧ ಕಾರ್ಯಕ್ರಮ ವೀಕ್ಷಿಸಿದರು.
ಈ ಸಂದರ್ಭ ಮಾತನಾಡಿದ ಅವರು,ತಮಿಳುನಾಡು ಸರಕಾರ ಶಿಕ್ಷಣದ ಜತೆಗೆ ಸ್ಕೌಟ್ ಗೈಡ್ಸ್‌ಗೂ ಹೆಚ್ಚಿನ ನೆರವು ನೀಡುತ್ತಿದೆ. ಪ್ರಾದೇಶಿಕ, ರಾಜ್ಯ, ರಾಷ್ಟ್ರಮಟ್ಟದ ಜಾಂಬೂರಿಗಳನ್ನೂ ಕೂಡ ಆಯೋಜಿಸುತ್ತಿ ದ್ದೇವೆ. ವಿದ್ಯಾರ್ಥಿಗಳು ಜಾಂಬೂರಿಯಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರದರ್ಶಿಸುವುದು ಮಾತ್ರವಲ್ಲದೇ ಇತರ ಜಿಲ್ಲೆ, ರಾಜ್ಯ, ರಾಷ್ಟ್ರಗಳ ಸಂಸ್ಕೃತಿಯನ್ನು ಅರಿಯಬೇಕು.
ತಮಿಳುನಾಡಿನಲ್ಲಿ ಈಗ ಮೂರುವರೆ ಲಕ್ಷ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳಿದ್ದಾರೆ. ಅದನ್ನು ಹತ್ತು ಲಕ್ಷದವೆರೆಗೆ ಹೆಚ್ಚಿಸುವ ಗುರಿ ನಮ್ಮದು. ಸ್ಕೌಟ್‌ಗೆçಡ್ಸ್ ಚಟುವಟಿಕೆಗೆ ಹೆಚ್ಚಿನ ಅನುದಾನ ಒದಗಿಸುವಲ್ಲಿ ಸರಕಾರ ಚಿಂತನೆ ನಡೆಸುತ್ತಿದೆ ಎಂದರು.
ಸಮ್ಮಾನ: ಸ್ಕೌಟ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಅವರು ಸಚಿವರನ್ನು ಸಮ್ಮಾನಿಸಿದರು.