Advertisement
ಕ.ಸಾ.ಪ. ಪುತ್ತೂರು ತಾಲೂಕು ಘಟಕದ ವತಿಯಿಂದ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಆಯೋಜಿಸಲಾದ ಪುಸ್ತಕ ಮೇಳ, ಸಾಹಿತ್ಯ ಉತ್ಸವ, ಮಕ್ಕಳಿಗೆ ಅಭಿನಂದನೆ ಹಾಗೂ ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾಷೆಯ ಉಳಿವಿಗೆ ಹೋರಾಟ ಮಾಡಬೇಕಾದ ಸ್ಥಿತಿಗೆ ನಾವಿಂದು ತಲುಪಿದ್ದೇವೆ. ಆದರೆ ಒಂದಷ್ಟು ಪ್ರಬುದ್ಧರು ಈ ಕಾರ್ಯದಲ್ಲಿ ನಿತ್ಯ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಭಾಷೆಯ ಉಳಿವಿನ ನಿಟ್ಟಿನಲ್ಲಿ ವಿದ್ಯಾವಂತರು, ಪ್ರಜ್ಞಾವಂತರ ಕೊಡುಗೆ ಏನು ಎಂಬುದನ್ನು ಯೋಚಿಸಬೇಕಾಗಿದೆ. ನಮ್ಮ ಮಾನಸಿಕತೆಯನ್ನು ಬದಲಾಯಿಸಿಕೊಳ್ಳದಿದ್ದರೆ ಭಾಷೆಯನ್ನು ಬೆಳೆಸಲು ಸಾಧ್ಯವಿಲ್ಲ ಎಂದರು. ಕನ್ನಡಕ್ಕೆ ಮೊದಲ ಪ್ರಾಶಸ್ತ್ಯ, ಆಂಗ್ಲ ಭಾಷೆಗೆ ಎರಡನೇ ಪ್ರಾಶಸ್ತ್ಯ ನೀಡಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ಆಕಾಶವಾಣಿ ನಿರ್ದೇಶಕಿ ಉಷಾಲತಾ ಸರಪಾಡಿ ಮಾತನಾಡಿ, ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಇಂದು ಯುವಜನತೆಯ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆ. ಭಾಷೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಮಸ್ಯೆ ಇರುವುದು ಮನೆಗಳಲ್ಲಿ. ಮಾತೃಭಾಷೆಯ ಕುರಿತ ಪ್ರೀತಿ ಈ ಕಾಲದ ಆವಶ್ಯಕತೆ ಎಂದರು. ಕೃತಿ ಬಿಡುಗಡೆ
ಎ.ಪಿ. ಉಮಾಶಂಕರಿ ಮರಿಕೆ ಅವರ “ಭಾವಾಂತರಂಗ’ ಹಾಗೂ ರಾಮಕುಂಜ ಪದವಿ ಕಾಲೇಜಿನ ವಿದ್ಯಾರ್ಥಿ ಸಹೋದರಿಯರಾದ ಜ್ಯೋತಿ ರಾವ್ ಎಚ್. ಮತ್ತು ಜ್ಯೋತ್ಸಾ$° ರಾವ್ ಎಚ್. ಅವರ “ಬಾಳಿನಾಗಸದಿಂದ’ ಕವನ ಸಂಕಲನಗಳನ್ನು ಮಂಗಳೂರು ಆಕಾಶವಾಣಿ ನಿರ್ದೇಶಕಿ ಉಷಾಲತಾ ಸರಪಾಡಿ ಲೋಕಾರ್ಪಣೆಗೊಳಿಸಿದರು.
Related Articles
ಪೌಢಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ದಿವಾಕರ ಆಚಾರ್ಯ ಕ.ಸಾ.ಪ. ಪುತ್ತೂರು ಘಟಕದ ಗೌರವ ಕೋಶಾಧ್ಯಕ್ಷ ಎನ್.ಕೆ. ಜಗನ್ನಿವಾಸ್ ರಾವ್, ಕ.ಸಾ.ಪ. ಘಟಕದ ಗೌರವ ಕಾರ್ಯದರ್ಶಿ ಸರೋಜಿನಿ ಮೇನಾಲ ಉಪಸ್ಥಿತರಿದ್ದರು. ಘಟಕದ ಗೌರವ ಕಾರ್ಯದರ್ಶಿ ಡಾ| ಎಚ್.ಜಿ. ಶ್ರೀಧರ್ ಸ್ವಾಗತಿಸಿ, ಘಟಕದ ಅಧ್ಯಕ್ಷ ಐತಪ್ಪ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಜ್ಯೋತಿ ರಾವ್ ಎಚ್. ಕಾರ್ಯಕ್ರಮ ನಿರ್ವಹಿಸಿದರು.
Advertisement
ಸಾಧಕರಿಗೆ ಸಮ್ಮಾನಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಬಿತಾ ಮೋನಿಸ್ ಅವರ ವಿಶೇಷ ಸಾಧನೆಯನ್ನು ಗುರುತಿಸಿ ಸಮ್ಮಾನಿಸಲಾಯಿತು. 2018 -19ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ವಿವೇಕಾನಂದ ಆಂ.ಮಾ. ಪ್ರೌಢಶಾಲೆಯ ಸಿಂಚನಲಕ್ಷ್ಮೀ, ಕನ್ನಡ ಪ್ರಥಮ ಭಾಷೆಯಲ್ಲಿ ಶೇ. 100 ಅಂಕ ಪಡೆದ ಹಾಗೂ ತಾಲೂಕಿಗೆ ಪ್ರಥಮ ಮೂರು ಸ್ಥಾನ ಪಡೆದ ಶ್ರೀಲಕ್ಷ್ಮೀ ಎನ್., ಸನ್ಮತಿ ಎಸ್., ಚೈತ್ರಾ ಎನ್.ಆರ್. ಹಾಗೂ ಕೃತಿ ಎಚ್.ಎಸ್. ಅವರನ್ನು ಸಮ್ಮಾನಿಸಲಾಯಿತು. ತಾಲೂಕಿನಲ್ಲಿ ಶೇ. 100 ಫಲಿತಾಂಶ ಪಡೆದ ಮಂಜುನಾಥನಗರ ಸ.ಪ್ರೌ. ಶಾಲೆ, ಕೊಳ್ತಿಗೆ ಗ್ರಾಮದ ಮಣಿಕ್ಕರ ಹಾಗೂ ಕಾಣಿಯೂರು ಪ್ರಗತಿ ಕ.ಮಾ. ಪ್ರೌಢಶಾಲೆಗಳ ಮುಖ್ಯ ಶಿಕ್ಷಕರನ್ನು ಅಭಿನಂದಿಸಲಾಯಿತು.