Advertisement

ಆಧುನಿಕ ಯುಗದಲ್ಲಿ ಸಂಸ್ಕಾರ ಕಣ್ಮರೆ

05:48 PM May 14, 2018 | Team Udayavani |

ಚಿತ್ರದುರ್ಗ: ಆಧುನಿಕ ಯುಗದಲ್ಲಿ ಸಂಸ್ಕಾರ, ಮೌಲ್ಯಗಳು ಕಣ್ಮರೆಯಾಗಿವೆ. ಎಲ್ಲರೂ ಹಣ, ಅಧಿಕಾರದ ಹಿಂದೆ ಬಿದ್ದಿದ್ದಾರೆಯೇ ವಿನಃ ಭಕ್ತಿಯ ಮಾರ್ಗದಲ್ಲಿ ಹೋಗುವವರು ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ| ಶಾಂತವೀರ ಸ್ವಾಮೀಜಿ ವಿಷಾದಿಸಿದರು.

Advertisement

ಬೆಂಗಳೂರಿನ ಮಂಜುನಾಥ ನಗರದಲ್ಲಿ ಭಾನುವಾರ ವೀರಾಂಜನೇಯಸ್ವಾಮಿ ನೂತನ ದೇವಸ್ಥಾನದ ಕುಂಭಾಭಿಷೇಕ ಹಾಗೂ ಕಳಶ ಸ್ಥಾಪನೆ ನೆರವೇರಿಸಿ ಶ್ರೀಗಳು ಆಶೀರ್ವಚನ ನೀಡಿದರು. 

ಆತ್ಮ ನಿವೇದನೆ ಮಾಡಿಕೊಳ್ಳಲು ಪ್ರತಿಯೊಬ್ಬರೂ ದೇವಸ್ಥಾನಕ್ಕೆ ಹೋಗಿ ದೇವರನ್ನು ಪೂಜಿಸಬೇಕೇ ವಿನಃ
ಆತ್ಮವಂಚನೆ ಮಾಡಿಕೊಳ್ಳಬಾರದು.  ಮನುಷ್ಯರಾದ ಮೇಲೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ತಪ್ಪು ಮಾಡುವುದು ಸಹಜ. ಆದರೆ ದೇವಸ್ಥಾನಕ್ಕೆ ಹೋದ ಮೇಲೆ ದೇವರ ಸನ್ನಿಧಿಯಲ್ಲಿ ತಪ್ಪನ್ನು ತಿದ್ದಿಕೊಂಡು ಸರಿಯಾದ ಮಾರ್ಗದಲ್ಲಿ ಹೋಗುವುದನ್ನು ಕಲಿಯಬೇಕು ಎಂದರು.

ದೇವಸ್ಥಾನಗಳನ್ನು ಕಟ್ಟುವವರು ಸಂಖ್ಯೆ ಜಾಸ್ತಿ ಇದೆ. ಭಕ್ತಿ ಮನಸ್ಸಿನಲ್ಲಿ ಇರಬೇಕು. ಆಡಂಬರಕ್ಕಾಗಿ ಪೂಜೆ ಮಾಡಿ ಭಕ್ತಿಯನ್ನು ಮತ್ತೂಬ್ಬರ ಎದುರು ಪ್ರದರ್ಶಿಸಲು ಹೋದರೆ ನಿಜವಾಗಿಯೂ ದೇವರು ಮೆಚ್ಚುವುದಿಲ್ಲ. ಹಾಗಾಗಿ ದೇವಸ್ಥಾನಗಳನ್ನು ಕಟ್ಟುವುದಕ್ಕಿಂತ ಮುಖ್ಯವಾಗಿ ಮನಸ್ಸುಗಳನ್ನು ಕಟ್ಟುವ ಮೂಲಕ ಸಮಾಜದಲ್ಲಿ ಸಾಮರಸ್ಯ,
ಸಹಬಾಳ್ವೆಯನ್ನು ರೂಪಿಸಿಬೇಕಾಗಿದೆ ಎಂದರು.

ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ
ಶ್ರೀ ಹನುಮಂತನಾಥ ಸ್ವಾಮೀಜಿ, ದೇವಸ್ಥಾನದ ಅಧ್ಯಕ್ಷ ಕೃಷ್ಣಪ್ಪ, ಮಂಜು, ಶಿವಭದ್ರಯ್ಯ ಮೊದಲಾದವರು
ಇದ್ದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next