Advertisement

ಸಾಂಸ್ಕೃತಿಕತೆ ಧಾರ್ಮಿಕತೆಗೆ ಪೂರಕ: ಕೃಷ್ಣಾಪುರಶ್ರೀ

01:12 AM Jan 25, 2022 | Team Udayavani |

ಉಡುಪಿ: ಸಾಂಸ್ಕೃತಿಕ ಕಾರ್ಯಕ್ರಮಗಳು ಧಾರ್ಮಿಕ ಕ್ಷೇತ್ರಕ್ಕೆ ಪೂರಕ ಎಂದು ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.

Advertisement

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸೋಮವಾರ ಪರ್ಯಾಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾ ರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ನಾವು ಶಾಸ್ತ್ರದ ಪ್ರಕಾರ ಹೇಳುವುದನ್ನು ಕಲಾವಿದರು ವಿವಿಧ ಕಲಾ ಪ್ರಕಾರಗಳ ಮೂಲಕ ಪಸರಿಸುತ್ತಿ ದ್ದಾರೆ. ಪ್ರವಚನದ ಮೂಲಕ ಹೇಳುವುದು ಅರ್ಥವಾಗದ ಜನರಿಗೆ ಕಲಾ ಪ್ರಕಾರಗಳ ಮೂಲಕ ಹೇಳಿದರೆ ಅರ್ಥವಾಗುತ್ತದೆ. ಇದರಿಂದ ಜನರಲ್ಲಿ ದೇವರ, ಧರ್ಮದ ಪ್ರಜ್ಞೆ, ಶ್ರದ್ಧೆ ಬೆಳೆಯುತ್ತದೆ. ಭಾಗವತ ಎಂದರೆ ಭಗವಂತನಿಗೆ ಸಂಬಂಧಿಸಿದ್ದು ಎಂದು ಅರ್ಥ. ಶ್ರೀಮದ್ಭಾಗವತದಲ್ಲಿ ಬರುವ ವಿಚಾರಗಳನ್ನು ತಿಳಿದುಕೊಳ್ಳಬೇಕು. ಇದನ್ನು ಕಲಾಪ್ರಕಾರಗಳು ಸಾರುತ್ತಿವೆ ಎಂದು ಶ್ರೀಪಾದರು ಹೇಳಿದರು.

ಇದನ್ನೂ ಓದಿ:ಹೆಣ್ಣುಮಕ್ಕಳ ಘನತೆ ಹೆಚ್ಚಿಸುವುದು ತಮ್ಮ ಉದ್ದೇಶ: ಪ್ರಧಾನಿ ಮೋದಿ

ಸಮ್ಮಾನ
ಆಳ್ವಾಸ್‌ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಮೋಹನ ಆಳ್ವ ಅವರನ್ನು ಸ್ವಾಮೀಜಿ ಸಮ್ಮಾನಿಸಿ, ಆಳ್ವರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೊಡುಗೆಗಳನ್ನು ಶ್ಲಾಘಿ ಸಿದರು. ಈ ಪರ್ಯಾಯದ ಅವಧಿಯಲ್ಲಿ ಕನಿಷ್ಠ 10 ಕಾರ್ಯಕ್ರಮ
ಗಳನ್ನು ನೀಡುವುದಾಗಿ ಡಾ| ಆಳ್ವ ಪ್ರಕಟಿಸಿದರು. ಮೂಡಬಿದಿರೆಯಿಂದ ಬಂದ ಸುಮಾರು 250 ವಿದ್ಯಾರ್ಥಿಗಳ ತಂಡದಿಂದ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆದವು.

Advertisement

ಪರ್ಯಾಯೋತ್ಸವ ಸಮಿತಿ ಗೌರವಾಧ್ಯಕ್ಷ ಕೆ. ಸೂರ್ಯ ನಾರಾಯಣ ಉಪಾಧ್ಯಾಯ, ಪ್ರ. ಕಾರ್ಯದರ್ಶಿ ವಿಷ್ಣುಪ್ರಸಾದ್‌ ಪಾಡಿಗಾರು, ಖಜಾಂಚಿ ರವಿಪ್ರಸಾದ್‌ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕ ಪ್ರೊ| ಎಂ.ಎಲ್‌. ಸಾಮಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next