Advertisement
ಅದರಲ್ಲಿ ವಿಶೇಷವಾಗಿ ಭವ್ಯ ಪರಂಪರೆ, ಇತಿಹಾಸ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನ ಹಿನ್ನೆಲೆಯನ್ನು ಹೊಂದಿದ ನಮ್ಮ ಕರ್ನಾಟಕದಲ್ಲಿ ಸೋಬಾನ ಪದ, ಲಾಲಿ ಹಾಡು, ಬೀಸುವ ಕಲ್ಲಿನ ಪದ, ಹಂತಿ ಪದ, ಗೀಗಿ ಪದ, ಮದುವೆ, ಸೀಮಂತ ಮತ್ತು ತೊಟ್ಟಿಲು ಕಾರ್ಯಕ್ರಮದಲ್ಲಿ ಹಾಡುವ ಅನೇಕ ಗರತಿಯ ಹಾಡುಗಳು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ.
Related Articles
Advertisement
ಹಾಲುಂಡ ತರೀಗಿ ಏನೆಂದ ಹಾಡಲೆ
ಹೊಳೆದಂಡೆಯಲಿರುವ ಕರಕೀಯ
ಕುಡಿಯಂಗ ಹಬ್ಬಲಿ ಅವರ ರಸಬಳ್ಳಿ
ಎಂಬ ಸಾಲುಗಳಿಂದ ತವರುಮನೆಯ ಎಲ್ಲ ಕುಟುಂಬದ ಸದಸ್ಯರು ಸಂತೋಷದಿಂದಿರಲಿ. ಅದರ ಕೀರ್ತಿಯು ವ್ಯಾಪಕವಾಗಿ ಬಳ್ಳಿಯಂತೆ ಹಬ್ಬಲೆಂದು ಒಳ್ಳೆಯ ಬಯಕೆಯನ್ನು ನಾವು ತಿಳಿದುಕೊಳ್ಳಬಹುದು.
ಅತ್ತೀಯ ಮನಿಯಾಗ ಮುತ್ತಾಗಿ ಇರಬೇಕ
ಹೊತ್ತ ನೀಡಿದರ ಉಣಬೇಕ
ತವರೂರ ಉತ್ತಮರ ಹೆಸರ ತರಬೇಕ
ಎಂಬ ಮೇಲಿನ ಸಾಲುಗಳಿಂದ ತಾಯಿಯಾದವಳು ಮದುವೆಯಾಗಿ ಗಂಡನ ಮನೆ ಸೇರುತ್ತಿರುವ ತನ್ನ ಮಗಳಿಗೆ ಗಂಡನ ಮನೆಯಲ್ಲಿ ಗುರು-ಹಿರಿಯರಿಗೆ ಗೌರವ ನೀಡುವುದು, ಅತ್ತೆ-ಮಾವ ಮತ್ತು ಮನೆಯವರೊಂದಿಗೆ ಹೇಗೆ ನಡೆದುಕೊಳ್ಳಬೇಕು. ಗಂಡನ ಮನೆಯ ಕುಟುಂಬದ ಸದಸ್ಯರೆಲ್ಲರ ಪ್ರೀತಿಗೆ ಪಾತ್ರರಾಗಿ, ತಂದೆ-ತಾಯಿ, ತವರುಮನೆಯ ಹೆಸರು ತರಬೇಕೆಂಬ ಕಿವಿಮಾತು ಹೇಳುತ್ತಿದ್ದಳು. ಹೀಗಾಗಿ ತನ್ನ ಯಾವುದೇ ತಪ್ಪುಗಳನ್ನು ಮಾಡಿದರೆ ಆಕೆ ಗರತಿಯ ಹಾಡುಗಳ ಮೂಲಕ ಬುದ್ಧಿವಾದವನ್ನು ಹೇಳುತ್ತಾ ತನ್ನ ಗಂಡನ ವ್ಯಕ್ತಿತ್ವ ಹಾಗೂ ಸತಿಯ ಅಂದ-ಚೆದವನ್ನು ವರ್ಣನೆ ಮಾಡುತ್ತಾಳೆ.
ನಮ್ಮ ಸಂಸ್ಕೃತಿಯನ್ನು ಅಭಿವ್ಯಕ್ತಿಗೊಳಿಸುವ ಗರತಿಯ ಹಾಡುಗಳು ಇಂದು ಮಾಯವಾಗುತ್ತಿರುವುದು ತೀರಾ ವಿಷಾದನೀಯ ಸಂಗತಿ. ನಮ್ಮ ಗ್ರಾಮೀಣ ಸೊಗಡು, ಜನಜೀವನ, ಜೀವನ ಶೈಲಿ, ಹಬ್ಬ-ಹರಿದಿನ, ಆಚರಣೆ, ಸಂಪ್ರದಾಯಗಳ ಬಗ್ಗೆ ಹಾಡಿನ ಮೂಲಕ ತಿಳಿಸಿಕೊಡುತ್ತಿರುವ ಗರತಿಯ ಜಾನಪದ ಹಾಡುಗಳು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದ ನಶಿಸಿ ಹೋಗುತ್ತಿವೆ. ಆಧುನಿಕತೆಯ ಸೋಗಿನಲ್ಲಿ ನಾವಿಂದು ನಮ್ಮ ಸಂಸ್ಕೃತಿ ಮತ್ತು ನಮ್ಮತನವನ್ನು ಮರೆತು ಬಿಡುತ್ತಿದ್ದೇವೆ. ಇದನ್ನು ನಮ್ಮ ಮುಂದಿನ ಯುವ ಜನಾಂಗಕ್ಕಾಗಿ ಉಳಿಸಿ, ಬೆಳೆಸಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ.
–ಮಲ್ಲಪ್ಪ ಸಿ.
ಖೊದ್ನಪೂರ