ಸುರತ್ಕಲ್: ಸುರತ್ಕಲ್ ಸೇಕ್ರೆಡ್ ಹಾರ್ಟ್ ಚರ್ಚ್‌ನ ಗುರುಗಳು, ಪಾಲನ ಮಂಡಳಿ, ಚರ್ಚಿನ ಭಕ್ತರ ಕುಟುಂಬದ ದೇಣಿಗೆಯ ಸಹಾಯದಿಂದ ಭವ್ಯ ಸಭಾಭವನ ತಲೆ ಎತ್ತಿ ನಿಂತಿದ್ದು, ಮುಂದಿನ ದಿನಗಳಲ್ಲಿ ಇದು ಸಂಸ್ಕೃತಿ ಸೌಹಾರ್ದದ ಕೇಂದ್ರವಾಗಲಿ ಎಂದು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ರೆ| ಡಾ| ಪೀಟರ್ ಪೌಲ್ ಸಲ್ಡಾನ್ಹಾ ಹೇಳಿದರು.
ಸುರತ್ಕಲ್ ಸೇಕ್ರೆಡ್ ಹಾರ್ಟ್ ಚರ್ಚ್ ಸಭಾಭವನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಈ ನೂತನ ಸಭಾ ಭವನದಲ್ಲಿ ಎಲ್ಲ ಸಮುದಾಯದವರಿಗೂ ಕಾರ್ಯಕ್ರಮ ನಡೆಸಲು ಅವಕಾಶ ಕಲ್ಪಿಸಲಾಗು ವುದುಎಂದು ಹಾರೈಸಿದರು.
ಸಚಿವ ಯು.ಟಿ. ಖಾದರ್, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ, ಮಾಜಿ ಶಾಸಕ ಮೊದಿನ್ ಬಾವಾ ಶುಭ ಹಾರೈಸಿದರು. ಬ್ಲೋಸಮ್ ಫೆರ್ನಾಂಡಿಸ್, ಎಸ್ಪಾ ಸಂಘದ ಸದಸ್ಯ ವಿನ್ಸೆಂಟ್ ಮಿಸ್ಕಿತ್, ಕಾರ್ಯದರ್ಶಿ ಬೆರ್ನಾಡ್ ಡಿ’ಸೋಜಾ, ಪಾಲನ ಮಂಡಳಿಯ ಪದಾ ಧಿಕಾರಿಗಳು, ವಿವಿಧ ಸಮುದಾಯದ ಗಣ್ಯರು ಪಾಲ್ಗೊಂಡಿದ್ದರು. ಚಚ್‌ನ ಧರ್ಮ ಗುರು ರೆ| ಪೌಲ್ ಪಿಂಟೋ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚರ್ಚ್‌ನ ಉಪಾಧ್ಯಕ್ಷ ಜೆ.ಐ. ಡೋನಿ ಸುವಾರಿಸ್ ವಂದಿಸಿದರು. ವೀರಾ ಪಿಂಟೋ ಮತ್ತು ರೊನಾಲ್ಡ್ ಮೊಂತೆರೋ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಭಾ ಭವನದ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳನ್ನು, ನಿರ್ಮಾಣಕ್ಕೆ ಶ್ರಮಿಸಿದ ಗಣ್ಯರನ್ನು ಬಿಷಪ್ ಸಮ್ಮಾನಿಸಿದರು.
ಸರ್ವಸನ್ನದ್ಧ ಸಭಾಂಗಣ
ವಿಶಾಲ ಪಾರ್ಕಿಂಗ್ ಜತೆಗೆ ಸುಮಾರು 1,600 ಜನರಿಗೆ ಅವಕಾಶವನ್ನು ಹೊಂದಿರುವ ಸಭಾಂಗಣ ಇದಾಗಿದೆ. ಪ್ರತ್ಯೇಕ ಭೋಜನ ಶಾಲೆ, ಗ್ರೀನ್ ರೂಮ್, ಸ್ನಾನದ ಕೊಠಡಿ, ಶೌಚಾಲಯಗಳನ್ನು ಹೊಂದಿದೆ.