ಗಂಗಾವತಿ (ಶ್ರೀಕೃಷ್ಣದೇವರಾಯ ವೇದಿಕೆ): ಆನೆಗೊಂದಿ ಉತ್ಸವದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನೆರೆದ ಜನರ ಮನಸ್ಸನ್ನು ಸೂರೆಗೊಂಡವು. ಸ್ಥಳೀಯ ಮತ್ತು ಹೊರ ಜಿಲ್ಲೆಯ ಕಲಾವಿದರು ಪ್ರಸ್ತುತಪಡಿಸಿ ಮಂಗಳವಾದ್ಯ, ಶಾಸ್ತ್ರೀಯ ಗಾಯನ, ಸುಗಮ ಸಂಗೀತ, ಗೊಂದಳಿಪದಗಳು, ಶಾಸ್ತ್ರೀಯ ವಾದ್ಯಸಂಗೀತ ಆನೆಗೊಂದಿ ಬೆಟ್ಟಗುಡ್ಡಗಳ ಮಧ್ಯೆ ನೆರೆದ ಜನರಿಗೆ ಸಂತೋಷವನ್ನುಂಟು ಮಾಡಿದವು.
ಕುಷ್ಟಗಿ ಶರಣಪ್ಪ ವಡಿಗೇರಿಯವರ ತತ್ವಪದಗಳು ಜನರು ಕುಣಿಯವಂತೆ ಮಾಡಿದವು. ಬೆಂಗಳೂರಿನ ನವಚೇತನ ನೃತ್ಯಕಲಾ ತಂಡ ಅಕಾಡೆಮಿಯವರು ಮಾಡಿದ ಸಾಮೂಹಿಕ ಭರತ ನಾಟ್ಯ ಮನಮೋಹಕವಾಗಿತ್ತು.
ಮೂಡಬಿದ್ರೆಯ ಆಳ್ವಾಸ್ ನುಡಿಸಿರಿ ವಿರಾಸತ್ ತಂಡ ಶ್ರೀರಾಮ ಪಟ್ಟಾಭಿಷೇಕ ಕಥಾ ವಸ್ತು ಆಧಾರಿತ ಸಂಪೂರ್ಣ ರಾಮಾಯಣ ದೃಶ್ಯವನ್ನು ಯಕ್ಷಗಾನ ಭರತನಾಟ್ಯದ ಸಂಮಿಶ್ರಿತ ಸಮೂಹ ನೃತ್ಯ ಆನೆಗೊಂದಿ ಕಿಷ್ಕಿಂದ ಪ್ರದೇಶದ ಕಥೆಯನ್ನು ಮನಮುಟ್ಟುಂತೆ ಧ್ವನಿ ಬೆಳಕಿನ ಮೂಲಕ ಪ್ರದರ್ಶನ ನೀಡಿತು. ದೇಶಿಯ ಲಂಬಾಣಿ ಸುಗ್ಗಿ ಹಾಡಿಗೆ ಆಳ್ವಾಸ್ ತಂಡದ ನೃತ್ಯ ಗ್ರಾಮೀಣ ಬದುಕನ್ನು ತೆರೆದಿಟ್ಟಿತು. ಉತ್ತರ ಕನಾಟಕದ ಮಲ್ಲಗಂಭ ಮತ್ತು ಮಣಿಪುರದ ಮಾರ್ಷಲ್ ಆರ್ಟ್ ಪ್ರದರ್ಶನ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು.
ಸ್ಥಳೀಯ ಬಾಲ ಕಲಾವಿದ ಮಾಸ್ಟರ್ ಅರ್ಜುನ್ ಇಟಗಿ ಹಾಗೂ ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ ತಂಡ ಪ್ರಸ್ತುತಪಡಿಸಿದ ಕನ್ನಡ ಸಿನಿಮಾ ಹಾಗೂ ಸಂಗೀತ ರಸಮಂಜರಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದವು.
-ಕೆ. ನಿಂಗಜ್ಜ