Advertisement

ಗಮನ ಸೆಳೆದ ಸಾಂಸ್ಕೃತಿಕ ವೈವಿಧ್ಯ

06:14 PM Mar 30, 2022 | Team Udayavani |

ಶಿರಸಿ: ತಾಲೂಕಿನ ಸುಧಾಪುರ ಕ್ಷೇತ್ರದ ಸಂಕಟಹರ ವೆಂಕಟರಮಣ ದೇವಸ್ಥಾನದಲ್ಲಿ ಇಲ್ಲಿನ ಶಬರ ಸಂಸ್ಥೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಿತು. ಗಾಯನದಲ್ಲಿ ಶುಭದಾ ಮುಧೋಳ್‌ ದೇವರ ನಾಮಗಳನ್ನು ಬೇರೆ ಬೇರೆ ರಾಗಗಳಲ್ಲಿ ಪ್ರಸ್ತುತಪಡಿಸಿ ಜನರನ್ನು ಭಕ್ತಿ ಪರವಶರಾಗಿಸಿದರು. ಕೆ.ಪಿ. ಹೆಗಡೆ ದಾಸನಕೊಪ್ಪ ಮತ್ತು ಕಿರಣ್‌ ಕಾನಗೋಡ, ಅನಂತಮೂರ್ತಿ ಭಟ್ಟ ಮತ್ತಿಘಟ್ಟ ಸಹಕರಿಸಿದರು. ಭರತನಾಟ್ಯದಲ್ಲಿ ಮೈಸೂರಿನ ಹರ್ಷಿಣಿ ಪುರುಷೋತ್ತಮ ದೇವರಿಗೆ ನೃತ್ಯ ಸೇವೆ ಸಲ್ಲಿಸಿ ಜನಮೆಚ್ಚುಗೆ ಗಳಿಸಿದರು.

Advertisement

ದಿ| ಪ್ರೊ| ಎಂ.ಎ. ಹೆಗಡೆ ದಂಟಕಲ್‌ ಅವರ ಸಾಹಿತ್ಯ, ನಿರ್ದೇಶನದ ವಿಶ್ವ ಶಾಂತಿ ಸಂದೇಶ ಸಾರುವ ಶ್ರೀಕೃಷ್ಣಂ ವಂದೇ ಯಕ್ಷನೃತ್ಯ ರೂಪಕವನ್ನು ತುಳಸಿ ಹೆಗಡೆ ಪ್ರಸ್ತುತ ಪಡಿಸಿದರು. ಕೃಷ್ಣ ಪರಮಾತ್ಮನ ಬಾಲ್ಯಲೀಲೆಗಳಿಂದ ಪ್ರಾರಂಭವಾಗಿ ಕಾಳಿಂಗ ಮರ್ಧನ ಶಿಷ್ಟರನ್ನು ಪೊರೆಯುವ ಸಂಗತಿಗಳನ್ನು ಮನಮುಟ್ಟುವಂತೆ ಬೇರೆ ಬೇರೆ ಆಯಾಮಗಳಲ್ಲಿ ಮನೋಜ್ಞವಾಗಿ ಹಾವ ಭಾವಗಳ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.

ಶಬರ ಸಂಸ್ಥೆಯ ನಾಗರಾಜ ಜೋಶಿ ಕಲಾವಿದರನ್ನು ಪರಿಚಯಿಸಿದರು. ರತ್ನಾಕರ ಹೆಗಡೆ ಬಾಡಲಕೊಪ್ಪ ವಂದಿಸಿದರು. ರಮೇಶ್‌ ಶಾಸ್ತ್ರಿ ಸ್ವರ್ಣವಲ್ಲಿ ನಿರೂಪಿಸಿದರು. ಅನ್ನಪೂರ್ಣ ಹೆಗಡೆ ಬೈರುಂಬೆ, ನಾರಾಯಣ ಹೆಗಡೆ ಮಾವಿನಕೊಪ್ಪ, ಪಾರ್ವತಿ ಹೆಗಡೆ ಹೆಗಡೆಕಟ್ಟಾ, ರಾಮಚಂದ್ರ ಹೆಗಡೆ ಬಾಡಲಕೊಪ್ಪ, ಪ್ರಸನ್ನ ಹೆಗಡೆ ವಾಜಗದ್ದೆ, ಭುವನೇಶ್ವರಿ ಜೋಶಿ ಕಲಾವಿದರನ್ನು ಗೌರವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next