Advertisement

ಡಿ. 21-30: ಸಾಂಸ್ಕೃತಿಕ ಪ್ರಕಾರಗಳ ಪ್ರದರ್ಶನ

01:25 AM Dec 20, 2018 | Karthik A |

ಬಂಟ್ವಾಳ: ಒಂದೇ ವೇದಿಕೆಯಲ್ಲಿ ಹಲವು ಸಾಂಸ್ಕೃತಿಕ ಪ್ರಕಾರಗಳ ಪ್ರದರ್ಶನದ ಕರಾವಳಿ ಕಲೋತ್ಸವಕ್ಕೆ ಬಿ.ಸಿ. ರೋಡ್‌ನ‌ಲ್ಲಿ ವೇದಿಕೆ ಸಿದ್ಧಗೊಂಡಿದೆ. ದೈವಾರಾಧನೆ, ಸಾಹಿತ್ಯ, ಸಂಗೀತ, ನಾಟಕ, ಆಟ-ಕೂಟ-ಕ್ರೀಡೆ, ಸಂಗೀತ ರಸಮಂಜರಿ, ನೃತ್ಯ ಸಂಗಮ, ಯಕ್ಷಗಾನ, ತುಳುನಾಡ ಐಸಿರಿ ಇತ್ಯಾದಿ ವೈವಿಧ್ಯಮಯ ಸಾಂಸ್ಕೃತಿಕ ಮೇಳವು ಬಿ.ಸಿ. ರೋಡ್‌ ಜೋಡುಮಾರ್ಗ ಉದ್ಯಾನವನದ ಸನಿಹದ ಗೋಲ್ಡನ್‌ ಪಾರ್ಕ್‌ ಅಸೋಸಿಯೇಟ್ಸ್‌ ಮೈದಾನದಲ್ಲಿ ನಡೆಯಲಿದೆ.

Advertisement

ಮಂಗೇಶರಾಯ ವೇದಿಕೆ
ಕಲೋತ್ಸವ ವೇದಿಕೆಗೆ ಪಂಜೆ ಮಂಗೇಶರಾಯ ಕಲಾ ವೇದಿಕೆ ಎಂದು ನಾಮಕರಣ ಮಾಡಲಾಗಿದೆ. ಕನ್ನಡ-ಸಂಸ್ಕೃತಿ ಇಲಾಖೆ ಬೆಂಗಳೂರು,  ಚಿಣ್ಣರ ಲೋಕ ಮೋಕೆದ ಕಲಾವಿದೆರ್‌ ಸೇವಾ ಟ್ರಸ್ಟ್‌ (ರಿ.) ಬಂಟ್ವಾಳ ಆಶ್ರಯದಲ್ಲಿ ಡಿ. 21ರಿಂದ 30ರ ತನಕ ಕರಾವಳಿ ಕಲೋತ್ಸವ 2018-19, ಚಿಣ್ಣರೋತ್ಸವ, ರಾಜ್ಯಮಟ್ಟದ ನೃತ್ಯ ಪ್ರದರ್ಶನ, ನಾಟಕೋತ್ಸವ ನಡೆಯಲಿದೆ. ಕಾರ್ಯಕ್ರಮವು ಡಿ. 21, 22 ಮತ್ತು 24ರಿಂದ 29ರವರೆಗೆ ಸಂಜೆ 6ರಿಂದ, ಡಿ. 23, 30ರಂದು ಅಪರಾಹ್ನ 4ರಿಂದ ಆರಂಭ ಆಗಲಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಶುಭ ಹಾರೈಕೆಯೊಂದಿಗೆ ಕಾರ್ಯಕ್ರಮ ಚಾಲನೆಗೊಳ್ಳುವುದು.

ಜಾನಪದ ದಿಬ್ಬಣ
ಡಿ.  21ರಂದು ಅಪರಾಹ್ನ 4ಕ್ಕೆ ಬಿ.ಸಿ. ರೋಡ್‌ ಶ್ರೀ ಅನ್ನಪೂರ್ಣೆಶ್ವರೀ ಕಲಾ ಮಂಟಪದಲ್ಲಿ ಕಲೋತ್ಸವ ಜಾನಪದ ದಿಬ್ಬಣವನ್ನು ಬಂಟ್ವಾಳ ತಹಶೀಲ್ದಾರ್‌ ಪುರಂದರ ಹೆಗ್ಡೆ ಉದ್ಘಾಟಿಸುವರು. ದಿಬ್ಬಣದಲ್ಲಿ ಪೂಜಾ ಕುಣಿತ, ಡೊಳ್ಳು ಕುಣಿತ, ಮಹಿಳಾ ವೀರಗಾಸೆ,  ಚೆಂಡೆ ಮೇಳ, ನಾಸಿಕ್‌ ಬ್ಯಾಂಡ್‌, ಸ್ವಾಗತ ಕಲಶ, ಕೊಂಬು -ಕಹಳೆ, ಸ್ವಾಗತ ಛತ್ರಿ ವಿನೂತನ ಪ್ರದರ್ಶನ ಇರುವುದು. ನಾಡಿನ ಸಾಂಸ್ಕೃತಿಕ ರಾಯಬಾರಿಗಳ ಆಗಮನ, ಸಾಧಕರಿಗೆ ಸಮ್ಮಾನ, ಗೌರವ ಗುರುತಿಸುವಿಕೆ, ಸಭಾ ಕಾರ್ಯಕ್ರಮ ವೈವಿಧ್ಯಗಳು ನಡೆಯುವವು. ಚಿಣ್ಣರೋತ್ಸವ ಅಧ್ಯಕ್ಷ ಮಾ| ಅಭಿಷೇಕ್‌ ಬಿ.ಕೆ.,  ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ ಜೈನ್‌ ಪಂಜಿಕಲ್ಲು ನೇತೃತ್ವದಲ್ಲಿ  ಚಿಣ್ಣರ ಲೋಕ ಮೋಕೆದ ಕಲಾವಿದೆರ್‌ ಸೇವಾ ಟ್ರಸ್ಟ್‌ ಸ್ಥಾಪಕ ಅಧ್ಯಕ್ಷ ಮೋಹನದಾಸ ಕೊಟ್ಟಾರಿ ಮುನ್ನೂರು ನೇತೃತ್ವದಲ್ಲಿ ಕಲೋತ್ಸವ ನಡೆಯಲಿದೆ.

ವಿವಿಧ ಆಕರ್ಷಣೆಗಳು
ಕಲೋತ್ಸವದಲ್ಲಿ ವಿಶೇಷ ಆಕರ್ಷಣೆಗಳಾಗಿ ಬೃಹತ್‌ ಜಿಯೆಂಟ್‌ ವೀಲ್‌, ಬ್ರೇಕ್‌ ಡ್ಯಾನ್ಸ್‌, ಡ್ರಾಗನ್‌ ಟ್ರೈನ್‌, ಕೊಲಂಬಸ್‌, ಪುಟಾಣಿ ರೈಲು, ಬೌನ್ಸಿ, ನವಿಲು,  ಧೂಮ್‌ ಬೈಕ್‌, ಮಿನಿ ಜೀಪ್‌, ಬೈಕ್‌, ಕ್ರಾಸ್‌ ವೀಲ್‌ ಆಟಗಳು, ಗೃಹೋಪಯೋಗಿ ವಸ್ತು, ಗೃಹಿಣಿಯರ ಆಲಂಕಾರಿಕ ಆಭರಣ, ಮಕ್ಕಳ ಆಟಿಕೆ ಸಾಮಾನುಗಳ ಮಾರಾಟ ಮಳಿಗೆಗಳು, ಸಾರಥಿ ಎಕ್ಸ್‌ ಪೋ-2018 ವಾಹನ ಪ್ರದರ್ಶನ ಮೇಳ, ವಸ್ತುಪ್ರದರ್ಶನ, ಚಿತ್ರಕಲೆ ಪ್ರದರ್ಶನ, ಮಾರಾಟ ಮಳಿಗೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next