Advertisement

ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ ಡೆನ್ನನ’

04:42 PM Feb 17, 2018 | |

ಬಂಟ್ವಾಳ : ಬಿ.ಸಿ. ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿಯ ಅಂತರ್‌ ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ ಡೆನ್ನನ’ಕ್ಕೆ ಇತ್ತೀಚೆಗೆ ಬಂಟ್ವಾಳ ತಾ| ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್‌ ಚಾಲನೆ ನೀಡಿದರು. ಕೇಂದ್ರ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ಧ್ವಜಾರೋಹಣ ಮಾಡಿ ಡೋಲು ಬಾರಿಸುವ ಮೂಲಕ ಉದ್ಘಾಟನೆ ನಡೆಸಿದರು.

Advertisement

ಯುವವಾಹಿನಿ ಬಂಟ್ವಾಳ ತಾ| ಘಟಕದ ಅಧ್ಯಕ್ಷ ಲೋಕೇಶ್‌ ಸುವರ್ಣ ಅಲೆತ್ತೂರು ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿ ಸಾಂಸ್ಕೃತಿಕ ನಿರ್ದೇಶಕ ಭುವನೇಶ್‌ ಪಚ್ಚಿನಡ್ಕ, ಬಂಟ್ವಾಳ ಘಟಕದ ನಿರ್ದೇಶಕ ಹರೀಶ್‌ ಕೋಟ್ಯಾನ್‌ ಕುದನೆ, ಡೆನ್ನಾನ ಡೆನ್ನನ ಸಂಚಾಲಕ ಪ್ರೇಮನಾಥ್‌ ಕೆ., ಬಿ. ಶ್ರೀಧರ ಅಮೀನ್‌, ಘಟಕದ ಉಪಾಧ್ಯಕ್ಷ ಗಣೇಶ್‌ ಪೂಂಜರೆಕೋಡಿ, ಕೋಶಾಧಿಕಾರಿ ಲೋಕೇಶ್‌ ಪೂಜಾರಿ ಪಿ.ಜೆ., ಜತೆ ಕಾರ್ಯದರ್ಶಿ ಕಿರಣ್‌ ರಾಜ್‌, ಸಲಹೆಗಾರರಾದ ಬಿ. ತಮ್ಮಯ, ಅಣ್ಣು ಪೂಜಾರಿ ಉಪಸ್ಥಿತರಿದ್ದರು.

ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಮಾರ್ಗದರ್ಶನದಲ್ಲಿ ಯುವವಾಹಿನಿ (ರಿ.) ಬಂಟ್ವಾಳ ತಾ|ಘಟಕ ಕಾರ್ಯಕ್ರಮ ಸಂಘಟಿಸಿತ್ತು. ಕೇಂದ್ರ ಸಮಿತಿ ಪ್ರ. ಕಾರ್ಯದರ್ಶಿ ರಾಜೇಶ್‌ ಸುವರ್ಣ ಸ್ವಾಗತಿಸಿ, ಕಾರ್ಯದರ್ಶಿ ದಿನೇಶ್‌ ಸುವರ್ಣ ರಾಯಿ ನಿರೂಪಿಸಿ, ವಂದಿಸಿದರು.

ಸ್ಪರ್ಧೆ ಫಲಿತಾಂಶ
ಪ್ರಥಮ: ಮೂಡಬಿದಿರೆ ಘಟಕ, ದ್ವಿತೀಯ ಮಂಗಳೂರು ಘಟಕ, ತೃತೀಯ ಹೆಜಮಾಡಿ ಘಟಕ, ಚತುರ್ಥ ಸಸಿಹಿತ್ಲು ಘಟಕ, ಪಂಚಮ: ಪಡುಬಿದ್ರೆ ಘಟಕ. ಕಂಕನಾಡಿ ಘಟಕವು ಶಿಸ್ತು ಪುರಸ್ಕಾರವನ್ನು ಪಡೆದುಕೊಂಡಿತು.

ಪ್ರೋತ್ಸಾಹಕ ಪುರಸ್ಕಾರ: ಕಂಕನಾಡಿ, ಮಂಗಳೂರು ಮಹಿಳಾ ಘಟಕ, ಮಾಣಿ, ಪಣಂಬೂರು, ಕುಳೂರು, ಉಪ್ಪಿನಂಗಡಿ, ವೇಣೂರು, ಪುತ್ತೂರು, ಬೆಳ್ತಂಗಡಿ, ಸುರತ್ಕಲ್‌, ಹಳೆಯಂಗಡಿ, ಅಡ್ವೆ, ಬೆಳುವಾಯಿ, ಉಡುಪಿ ಘಟಕಗಳಿಗೆ ಹಾಗೂ 7 ಕಲಾವಿದರಿಗೆ ಶ್ರೇಷ್ಠ ಕಲಾವಿದ ಪುರಸ್ಕಾರ ನೀಡಲಾಯಿತು. ರಾಮಚಂದ್ರ ರಾವ್‌, ಸುಧಾಕರ್‌ ಕುಲಾಲ್‌, ಸುರೇಶ್‌ ಕಾರಂತ್‌ ಪೆರ್ಮಂಕಿ ತೀರ್ಪುಗಾರರಾಗಿ ಸಹಕಾರ ನೀಡಿದರು.

Advertisement

ವಿಶೇಷ ಆಕರ್ಷಣೆ
.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವವಾಹಿನಿಯ 28 ಘಟಕಗಳನ್ನು ಪ್ರತಿನಿಧಿಸುವ 28 ವರ್ಣರಂಜಿತ- ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತ ಗೋಪುರ ನಿರ್ಮಿಸಲಾಗಿತ್ತು.

.ಯುವವಾಹಿನಿಯ ಸ್ಪರ್ಧಾ ತಂಡಗಳನ್ನು ಸ್ವಾಗತ ಗೋಪುರದಲ್ಲಿ ಘಟಕದ ಸದಸ್ಯರು ಆರತಿ ಬೆಳಗುವ ಮೂಲಕ ಸ್ವಾಗತಿಸಿದರು.

.ತುಳುನಾಡ ದೈವಾರಾಧನೆ ಪಟ್ಟಿಕೆಗಳನ್ನು ಅನಾವರಣ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next