Advertisement

ಸಾಂಸ್ಕೃತಿಕ , ಕ್ರೀಡೋತ್ಸವ ಯಶಸ್ವಿಗೊಳಿಸಲು ಕರೆ

11:02 PM Sep 13, 2019 | Sriram |

ಮುಳ್ಳೇರಿಯ: ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಅಂಗಸಂಸ್ಥೆಯಾದ ಮುಳ್ಳೇರಿಯ ಶಿವಳ್ಳಿ ಬ್ರಾಹ್ಮಣ ಸಭಾದ ಮಾಸಿಕ ಸಭೆಯು ಅಡೂರಿನ ಕೃಷ್ಣ ನಿವಾಸದ ಬಾಲಕೃಷ್ಣ ತಂತ್ರಿಗಳ ಮನೆಯಲ್ಲಿ ನಡೆಯಿತು.

Advertisement

ಸಭೆಯ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿವಳ್ಳಿ ಬ್ರಾಹ್ಮಣ ಸಭಾದ ಜಿಲ್ಲಾ ಅಧ್ಯಕ್ಷೆ ಸತ್ಯಪ್ರೇಮಾ ಭಾರಿತ್ತಾಯ, ಸದಸ್ಯರಾದ ಶ್ರೀಪತಿ ಎಂ, ರಾಜಾರಾಮ ಸರಳಾಯ, ಅನಂತರಾಮ ಎಂ, ವಿಜಯರಾಜ ಪಿ, ಅನಿಲ್‌ ಕುಮಾರ್‌ ಎ, ಎ.ಬಾಲಕೃಷ್ಣ ತಂತ್ರಿ, ಸುಮತಿ ಬಿ. ಭಾಗವಹಿಸಿದ್ದರು. ಸಭೆಯಲ್ಲಿ “ಪರಸ್ಪರ ಸಹಾಯ ನಿಧಿ’ ಯೋಜನೆಗೆ ಚಾಲನೆ ನೀಡಲಾಯಿತು.

ಇದೇ ಡಿಸೆಂಬರ್‌ 21ರಿಂದ 2 ದಿನ ಮುಜುಂಗಾವು ಭಾರತೀಯ ವಿದ್ಯಾಪೀಠದಲ್ಲಿ ನಡೆಯುವ ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಜಿಲ್ಲಾ ಸಾಂಸ್ಕೃತಿಕ ಹಾಗೂ ಕ್ರೀಡೋತ್ಸವವನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು.

ಕೇರಳ ರಾಜ್ಯ ಉಡುಪಿ ಮಾಧ್ವ ಬ್ರಾಹ್ಮಣ ಸಭಾ ನೀಡುವ ವಿವಿಧ ವಿದ್ಯಾರ್ಥಿ ವೇತನಗಳ ಬಗ್ಗೆ ಸಭೆಯಲ್ಲಿದ್ದ ಸದಸ್ಯರಿಗೆ ಮಾಹಿತಿ ನೀಡಿ, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲು ಸೂಚಿಸಲಾಯಿತು.

ಮುಳ್ಳೇರಿಯ ವಲಯ ವ್ಯಾಪ್ತಿಯ ವಿವಿಧ ಕ್ಷೇತ್ರಗಳಲ್ಲಿ ಸಮುದಾಯದ ಸದಸ್ಯರು ನಡೆಸುತ್ತಿರುವ ವಿಷ್ಣು ಸಹಸ್ರನಾಮ ಪಾರಾಯಣ ಯೋಜನೆಯನ್ನು ಬೆಂಬಲಿಸಿ ಅಭಿನಂದನೆ ಸಲ್ಲಿಸಲಾಯಿತು.

Advertisement

ಸಂಘಟನೆಯ ಮುಂದಿನ ಮಾಸಿಕ ಸಭೆಯು ಅ.12ರಂದು ಬೆಳಗ್ಗೆ 10 ಗಂಟೆಗೆ ತಲ್ಪಚ್ಚೇರಿ ಸುಂದರ ಕಲ್ಲೂರಾಯರ ಮನೆಯಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ವಿದ್ಯಾರ್ಥಿ ವೇತನ
ಕೇರಳ ಉಡುಪಿ ಮಾಧ್ವ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ರಾಜ್ಯ ಮಟ್ಟದಲ್ಲಿ ನೀಡುವ ವಿವಿಧ ಶೈಕ್ಷಣಿಕ ವಿದ್ಯಾರ್ಥಿ ವೇತನಗಳನ್ನು ಘೋಷಿಸಲಾಗಿದ್ದು, ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಸದಸ್ಯ ವಿದ್ಯಾರ್ಥಿಗಳು ನಿಗದಿತ ಅರ್ಜಿ ಸಮೂನೆಯನ್ನು ಪಡೆದು, ಭರ್ತಿಗೊಳಿಸಿ, ಅ. 12ರ ಮೊದಲು ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬೇಕು.
ವಿದ್ಯಾರ್ಥಿ ವೇತನಗಳ ವಿವರಗಳನ್ನು ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ವಾಟ್ಯಾಪ್‌ ಗ್ರೂಪ್‌ನಲ್ಲಿ ಪ್ರಕಟಿಸಲಾಗಿದೆ.

ಸಮುದಾಯ ಬಾಂಧವರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಘವನ್ನು ಸಂಪರ್ಕಿಸಲು ತಿಳಿಸಲಾಯಿತು. ಪ್ರಶಾಂತ ರಾಜ ವಿ. ತಂತ್ರಿ ಅವರು ಸ್ವಾಗತಿಸಿದರು.ಅನಂತರಾಮ ಎಂ.ಅವರು ವಂದಿಸಿದರು.

ಮಹಿಳೆಯರಿಂದ ಭಜನೆ
ಅಡೂರಿನ ಶ್ರೀ ಪ್ರಿಯಾ ಮಹಿಳಾ ಭಜನೆ ಮಂಡಳಿಯ ಸದಸ್ಯರಿಂದ ಭಜನೆ ನಡೆಯಿತು. ಭಜನೆಯ‌ಲ್ಲಿ ಸತ್ಯಪ್ರೇಮಾ ಭಾರಿತ್ತಾಯ, ಜಯಲಕ್ಷಿ$¾à ಪಿ.ತಂತ್ರಿ, ಚಂಚಲಾ ಸರಳಾಯ, ನಳಿನಾಕ್ಷಿ ಸರಳಾಯ, ಕಮಲಾಕ್ಷಿ, ಶೋಭಾ ಶ್ರೀ ಪ್ರಕಾಶ್‌, ಲತಾ ಆರ್‌.ಕೆ, ಪದ್ಮಾ ಆರ್‌, ಅನನ್ಯಾ ಬಾರಿತ್ತಾಯ, ಪ್ರಮಿತಾ ಭಾರಿತ್ತಾಯ, ಪ್ರತಿಮಾಬಾರಿತ್ತಾಯ ಭಾಗವಹಿಸಿದ್ದರು. ಹಿಮ್ಮೇಳದಲ್ಲಿ ತಬಲಾ ವಾದನಲ್ಲಿ ಆದ್ಯಂತ್‌ ಅಡೂರು ಸಹಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next