Advertisement

“ಸರಕಾರದಿಂದ ಕಲಾಸಕ್ತ‌ರನ್ನು ಸೃಷ್ಟಿಸುವ ಕಾರ್ಯಕ್ರಮ’

12:51 PM Mar 14, 2017 | Harsha Rao |

ಮಲ್ಪೆ: ನಮ್ಮ ಮೂಲ ಸಂಸ್ಕೃತಿ, ಆಚಾರ – ವಿಚಾರಗಳನ್ನು ವ್ಯಕ್ತಪಡಿಸುವ ಜಾನಪದ ಕಲಾ ಪ್ರಕಾರಗಳನ್ನು ಉಳಿಸಿ, ಬೆಳೆಸ ಬೇಕಾಗಿರು ವುದು ಇಂದಿನ ಆತೀ ಅಗತ್ಯಗಳಲ್ಲೊಂದು. ಈ ನಿಟ್ಟಿನಲ್ಲಿ ಸರಕಾರ ಕಲಾವಿದರನ್ನು ಪೋತ್ಸಾಹಿಸುವ ಹಾಗೂ ಕಲಾಸಕ್ತರನ್ನು ಸƒಷ್ಟಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿರುವುದಾಗಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಹೇಳಿದರು.

Advertisement

ಅವರು ರವಿವಾರ ಮಲ್ಪೆ ಸಮುದ್ರ ಕಿನಾರೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ, ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿಯ ಸಹಯೋಗದೊಂದಿಗೆ ಹಮ್ಮಿಕೊಂಡ ಸುಗ್ಗಿ ಹುಗ್ಗಿ ವಿಶೇಷ ಜಾನಪದ ಕಲಾ ಪ್ರದರ್ಶನವನ್ನು ಉದ್ಘಾಟಿಸಿ 
ಮಾತನಾಡಿ ಮಲ್ಪೆ ಬೀಚ್‌ನಲ್ಲಿ ಈಗಾಗಲೇ ಸಚಿವರ ನೇತƒತ್ವದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಂಡಿದ್ದು, ಸ್ವತ್ಛ ಬೀಚ್‌ ಆಗಿ ಮಲ್ಪೆ ರೂಪುಗೊಂಡಿದೆ. ಇಲ್ಲಿ ನಿರಂತರವಾಗಿ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯು ತ್ತಿರುವುದರಿಂದ ಪ್ರವಾಸೋದ್ಯಮಕ್ಕೂ ಒತ್ತು ನೀಡಿದಂತಾಗುತ್ತದೆ ಹಾಗೂ ಕಲೆಯ ಉಳಿವಿಗೆ ಸಹಕಾರಿಯಾಗುತ್ತದೆಂದರು.

ಮುಖ್ಯಅತಿಥಿಯಾಗಿ ಉಪಸ್ಥಿತರಿದ್ದ ನಗರಸಭಾ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್‌ ಮಾತನಾಡಿ ಅಧುನಿಕ ಕಾಲಘಟ್ಟದಲ್ಲೂ ಜನಪದ ಕಲಾ ಪ್ರಕಾರಗಳನ್ನು ಪ್ರದರ್ಶಿಸಿ, ಕಲೆ ಯನ್ನು ಉಳಿಸುತ್ತಿರುವ ಕಲಾ ತಂಡಗಳಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಬೀಚ್‌ ಅಭಿವೃದ್ಧಿ ಸಮಿತಿ ಸದಸ್ಯರಾದ ಶೇಖರ್‌ ಜಿ.ಕೋಟ್ಯಾನ್‌, ಸುದೇಶ್‌ ಶೆಟ್ಟಿ, ಕನ್ನಡ ಸಂಸ್ಕೃತಿ ಇಲಾಖಾ ಸಹಾಯಕ ನಿರ್ದೇಶಕ ಡಿ.ಎಂ.ರವಿ ಕುಮಾರ್‌ ಉಪಸ್ಥಿತರಿದ್ದರು.

ಜನಪದ ಕಲಾವಿದ ಗಣೇಶ್‌ ಗಂಗೋಳ್ಳಿ ಕಾರ್ಯಕ್ರಮ ನಿರೂಪಿಸಿದರು. ಡಿ. ಎಂ.ರವಿಕುಮಾರ್‌ ಸ್ವಾಗತಿಸಿದರು. ಇಲಾಖಾಧಿಕಾರಿ ಪೂರ್ಣಿಮಾ ವಂದಿಸಿ ದರು. ರಾಜ್ಯದಾದ್ಯಂತ ಹಲವು ಜನಪದ ಕಲಾ ತಂಡಗಳು ಪ್ರದರ್ಶನ ನೀಡಿದವು.

Advertisement

Udayavani is now on Telegram. Click here to join our channel and stay updated with the latest news.

Next