ಉದಯವಾಣಿ ಸಮಾಚಾರ
ಚನ್ನಮ್ಮನ ಕಿತ್ತೂರು: ಕನ್ನಡ ಪುಸ್ತಕ ಹಾಗೂ ಗ್ರಂಥಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಾಗ ಮಾತ್ರ ಕನ್ನಡ ಸಾಹಿತ್ಯ ಮತ್ತು ಭಾಷೆ ಉಳಿಸಿ, ಬೆಳಸಲು ಸಾಧ್ಯವೆಂದು ಕಿತ್ತೂರಿನ ಸಂಕಲ್ಪ ನೃತ್ಯಾಲಯದ ಸಂಚಾಲಕಿ ಸವಿತಾ ಹಿರೇಮಠ ನುಡಿದರು.
ಕಿತ್ತೂರು ಕಲ್ಮಠದ ಶ್ರೀ ಚಂದರಗಿ ಸಭಾ ಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 110 ನೆಯ ಸಂಸ್ಥಾಪನಾ ದಿನಾಚರಣೆ
ಕಾರ್ಯಕ್ರಮದಲ್ಲಿ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ಇಂದು ಪಾಲಕರು ಮತ್ತು ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ನಮ್ಮ ಮಾತƒಭಾಷೆ ಕನ್ನಡವನ್ನು ಕಡೆಗಣಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಸ್. ಬಿ. ದಳವಾಯಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ, ಕಲೆ, ಜನಪದ, ಸಂಸ್ಕೃತಿ ಸಂವರ್ಧನೆ ಮತ್ತು ಸಂರಕ್ಷಣೆಯ ಮಹದಾಶೆಯೊಂದಿಗೆ 5 ಮೇ 1915 ರಲ್ಲಿ ಅಂದಿನ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಇಂದು ಹೆಮ್ಮರವಾಗಿ ಬೆಳೆದು ನಾಡೋಜ ಡಾ.ಮಹೇಶ ಜೋಶಿ ನೇತೃತ್ವದಲ್ಲಿ ಕನ್ನಡ ಭಾಷೆಯ ಬಲವರ್ಧನೆಗೆ ಕ್ರಿಯಾಶೀಲವಾಗಿರುವದು ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮುಖ್ಯ ಅತಿಥಿ ರಾಜಗುರು ಶಿಕ್ಷಣ ಸಂಸ್ಥೆಯ ಮುಖ್ಯಾಧ್ಯಾಪಕಿ ರಾಜೇಶ್ವರಿ ಕಳಸಣ್ಣವರ ಮಾತನಾಡಿ, ಅಂದಿನ ಮೈಸೂರು ರಾಜ್ಯವು ಕರ್ನಾಟಕ ರಾಜ್ಯವೆಂದು ನಾಮಕರಣವಾಗಿ ಸುವರ್ಣ ಸಂಭ್ರಮ ಆಚರಿಸುತ್ತಿರುವ ಸಂದರ್ಭದಲ್ಲಿ ಕಿತ್ತೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿ ಕಾರಿಗಳು ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸುವುದರ ಜೊತೆಗೆ ಮಕ್ಕಳಿಗಾಗಿ ಕನ್ನಡ ಗೀತೆಗಳ, ಶರಣರ ವಚನಗಳು ಮತ್ತು ನೃತ್ಯಗಳನ್ನು
ಹಮ್ಮಿಕೊಂಡಿರುವುದನ್ನು ಸ್ವಾಗತಿಸಿ, ಕನ್ನಡ ತೇರನ್ನು ಮುನ್ನಡೆಸುವಲ್ಲಿ ಯಶ ಕಾಣಲಿ ಎಂದು ಶುಭ ರಿದರು.
ಸುವರ್ಣ ಕರ್ನಾಟಕ ಸಂಭ್ರಮ 50 ರ ಸವಿ ನೆನಪಿಗಾಗಿ 2024 ರ ಪಿ.ಯು.ಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದ ತಾಲೂಕಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಿತ್ತೂರಿನ ರಾಜಗುರು ಶಿಕ್ಷಣ ಸಂಸ್ಥೆಯ ಮತ್ತು ಸಂಕಲ್ಪ ನೃತ್ಯಾಲಯದ ಮಕ್ಕಳಿಂದ ನಡೆದ ಕನ್ನಡ ಗೀತೆಗಳ ಗಾಯನ , ನೃತ್ಯಗಳು , ವಚನಗಳು ಎಲ್ಲರ ಮನಸೆಳೆದವು. ತಾಯಿ ಭುವನೇಶ್ವರಿ ದೇವಿಗೆ ಪುಷ್ಪ³ ನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈಶ್ವರ ಗಡಿಬಿಡಿ ಪ್ರಾರ್ಥಿಸಿದರು. ಪ್ರಭಾವತಿ ಲದ್ದಿಮಠ.ಸ್ವಾಗತಿಸಿದರು. ವಿ.ಎಸ್ .ನಂದಿಹಳ್ಳಿ ಪರಿಚಯಿಸಿದರು. ಸ್ಮಾರ್ಟ ಕ್ಲಾಸ್ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಹಿರೇನಂದಿಹಳ್ಳಿ ಸರಕಾರಿ ಪೌಢ ಶಾಲೆಯ ಮುಖ್ಯಾಧ್ಯಾಪಕ ಬಸವರಾಜ ಬಿದರಿ. ಮಹೇಶ್ವರ ಹೊಂಗಲ . ರಾಜಶೇಖರ ರಗಟಿ. ಮಹಾದೇವಿ ಬೆಳವಡಿ ಸೇರಿದಂತೆ ಇತರರಿದ್ದರು.