Advertisement

CUET: ಅಂಕ ಸಾಮಾನ್ಯೀಕರಣ ರದ್ದು

12:04 AM Feb 23, 2024 | Team Udayavani |

ಹೊಸದಿಲ್ಲಿ: ವಿಶ್ವವಿದ್ಯಾನಿಲಯಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ-ಯುಜಿ (ಸಿಯುಇಟಿ) ಯಲ್ಲಿ ಪ್ರಸಕ್ತ ವರ್ಷ ದಿಂದ ಅಂಕಗಳ ಸಾಮಾನ್ಯೀಕರಣ (ನಾರ್ಮಲೈ ಸೇಶನ್‌ ಆಫ್ ಸ್ಕೋರ್‌) ತೆಗೆದು ಹಾಕಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಿರ್ಧರಿಸಿದೆ.

Advertisement

ಈ ಹಿಂದೆ ಒಂದು ತಿಂಗಳ ವರೆಗೆ ನಡೆಯುತ್ತಿದ್ದ ಪರೀಕ್ಷೆಯನ್ನು ಕಡಿಮೆ ಅವಧಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅಲ್ಲದೆ ಒಎಂಆರ್‌ ಶೀಟ್‌, ಕಂಪ್ಯೂಟರ್‌ ಆಧಾರಿತ ಪರೀಕ್ಷೆ ಒಳಗೊಂಡ ಹೈಬ್ರಿಡ್‌ ಮಾದರಿಯಲ್ಲಿ ಪರೀಕ್ಷೆ ನಡೆಯ ಲಿದೆ. ವಿದ್ಯಾರ್ಥಿಗಳು ಇನ್ನು ತಮ್ಮ ನಗರಗಳ ಪರೀಕ್ಷಾ ಕೇಂದ್ರಗಳಲ್ಲೇ ಪರೀಕ್ಷೆ ಬರೆಯ ಬಹುದಾಗಿದ್ದು, ಪರೀಕ್ಷೆಗಾಗಿ ದೂರದ ನಗರ ಗಳಿಗೆ ಪ್ರಯಾಣಿಸುವುದು ತಪ್ಪಲಿದೆ. ಹೆಚ್ಚಿನ ಶಾಲಾ- ಕಾಲೇಜು ಗಳನ್ನು ಪರೀಕ್ಷಾ ಕೇಂದ್ರಗಳನ್ನಾಗಿ ಪರಿ ಗಣಿಸಲಾಗುತ್ತದೆ ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೀಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next