Advertisement

CUET: ಕನ್ನಡದಲ್ಲಿ ಬರೆದ 9 ಮಂದಿಗೆ 100 ಪರ್ಸೆಂಟೈಲ್‌

11:53 PM Jul 15, 2023 | Shreeram Nayak |

ಹೊಸದಿಲ್ಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯು ಶನಿವಾರ ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಯುಜಿ 2023ರ ಫ‌ಲಿತಾಂಶ ವನ್ನು ಪ್ರಕಟಿಸಿದೆ. ಕನ್ನಡದಲ್ಲಿ ಪರೀಕ್ಷೆ ಬರೆದವರ ಪೈಕಿ 9 ಮಂದಿ ವಿದ್ಯಾರ್ಥಿಗಳು 100ಕ್ಕೆ 100 ಪರ್ಸೆಂಟೈಲ್‌ ಪಡೆದಿದ್ದಾರೆ.

Advertisement

ದೇಶಾದ್ಯಂತ ಮೇ 21ರಿಂದ ಜು. 23ರ ವರೆಗೆ ಒಂಬತ್ತು ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಒಟ್ಟು 14.99 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ಈ ಪೈಕಿ 8.03 ಲಕ್ಷ ಪುರುಷ ವಿದ್ಯಾರ್ಥಿಗಳು, 6.96 ಲಕ್ಷ ಮಹಿಳಾ ವಿದ್ಯಾರ್ಥಿಗಳು ಮತ್ತು 16 ತೃತೀಯ ಲಿಂಗಿ ವಿದ್ಯಾರ್ಥಿಗಳು ನೋಂದಣಿಯಾಗಿದ್ದರು.

ದೇಶದ 13 ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸ ಲಾಗಿತ್ತು. 2,200 ವಿಷಯ ಪರಿಣತರು ಮತ್ತು 800 ಅನುವಾದಕರು ಪ್ರಶ್ನೆಪತ್ರಿಕೆ ತಯಾರಿಕೆಯಲ್ಲಿ ಪಾಲ್ಗೊಂಡಿದ್ದರು. ಪರೀಕ್ಷೆಯಲ್ಲಿ 22,000ಕ್ಕೂ ಹೆಚ್ಚು ವಿದ್ಯಾರ್ಥಿಗಳು 100ಕ್ಕೆ 100 ಪರ್ಸೆಂಟೈಲ್‌ ಪಡೆದುಕೊಂಡಿದ್ದಾರೆ ಎಂದು ಯುಜಿಸಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next