Advertisement

ಉನ್ನತ ವ್ಯಾಸಂಗಕ್ಕೆ ಸಿಯು ಸಿಇಟಿ

11:49 PM Apr 16, 2019 | Team Udayavani |

ದೇಶದ ಎಲ್ಲ ವಿಶ್ವ ವಿದ್ಯಾಲಯಗಳ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳ ತರಗತಿಗಳು ಅಂತಿಮದಲ್ಲಿದ್ದು, ಸದ್ಯದಲ್ಲಿ ಪರೀಕ್ಷೆಗಳು ಕೂಡ ಆರಂಭವಾಗಲಿವೆ. ಪರೀಕ್ಷೆ ಅನಂತರ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸದ ಕನಸು ಕಾಣುತ್ತಿರುತ್ತಾರೆ. ಏತನ್ಯಧ್ಯೆ ದೇಶದ ಪ್ರತಿಷ್ಠಿತ ಕೇಂದ್ರೀಯ ವಿಶ್ವ ವಿದ್ಯಾಲಯಗಳು ವಿವಿಧ ಕೋರ್ಸ್‌ ಗಳ ಪ್ರವೇಶಕ್ಕೆ ಆನ್‌ಲೈನ್‌ನಲ್ಲಿ ಮುಖಾಂತರ ಅರ್ಜಿ ಕರೆಯಲಾಗಿದ್ದು, ಅರ್ಜಿ ಸಲ್ಲಿಸಲು ಎ. 20 ಕೊನೆಯ ದಿನವಾಗಿದೆ. ಸಿಯುಕೆ ಕೋರ್ಸ್‌ ಗಳು ಸೇರಬೇಕಾದರೆ ಮೊದಲು ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯ ಬೇಕಿದ್ದು, ಮೇ 25, 26ರಂದು (ಸಿಇಟಿ) ನಡೆಯಲಿವೆ. ಕೇಂದ್ರಿಯ ವಿವಿ ಕರ್ನಾಟಕದಲ್ಲಿ ಸುಮಾರು 25 ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿವೆ. ಈ ಬಾರಿ ಆರು ನೂತನ ಕೋರ್ಸ್‌ಗಳಿಗೆ ಅನುಮತಿ ದೊರೆತಿದೆ.

Advertisement

ಅರ್ಹತೆ
ದೇಶದ ಕೇಂದ್ರೀಯ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಬೇಕಾದರೆ, ಮೊದಲು ಅರ್ಜಿ ಸಲ್ಲಿಸಿ, ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯುವುದು ಕಡ್ಡಾಯ. ಪರೀಕ್ಷೆಗೆ ಪ್ರವೇಶ ಪಡೆಯಲು ಕೂಡ ಕೆಲವೊಂದು ಅರ್ಹತೆ ಹಾಗೂ ಮಾನದಂಡಗಳನ್ನು ಕೂಡ ಪರಿಗಣಿಸಲಾಗುತ್ತದೆ. ಸ್ನಾತಕೋತ್ತರ ಅಧ್ಯಯನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಯಾವುದೇ ಯುಜಿಸಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.

ಸಂಶೋಧನೆಯ ವಿಷಯಗಳು (ಪಿಎಚ್‌.ಡಿ.) ಅಧ್ಯಯನಕ್ಕೆ ಸಾಮಾನ್ಯ ಪ್ರವೇಶ ಪಡಯಲು ವಿದ್ಯಾರ್ಥಿಗಳು ಯುಜಿಸಿ ಮಾನ್ಯತೆಯ ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯಲ್ಲಿ ಸುಮಾರು ಶೇ. 55 ರಷ್ಟು, ಒಬಿಸಿ ಶೇ 50 ರಷ್ಟು, ಪರಿಶಿಷ್ಟ ಪಂ/ ಪ.ಜಾತಿ ವರ್ಗದ ವಿದ್ಯಾರ್ಥಿಗಳಿಗೆ ಶೇ. 45 ರಷ್ಟು ಅಂಕಗಳಿಂದ ಉತ್ತಿರ್ಣರಾಗಿದ್ದಾರೆ ಮಾತ್ರ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಹರು.

ಅರ್ಜಿ ಸಲ್ಲಿಸುವುದು ಹೇಗೆ?
ಸಿಯುಕೆ ವಿಶ್ವ ವಿದ್ಯಾಲಯದ ಪ್ರವೇಶಾತಿಗೆ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಯ ಪೂರ್ಣ ವಿಳಾಸ, ಅಂಕಪಟ್ಟಿಗಳು, ಫೋಟೋ ಸಹಿತ ಅರ್ಜಿಯನ್ನು ವೆಬ್‌ಸೈಟ್‌ ವಿಳಾಸಕ್ಕೆ ಅಪ್‌ಲೋಡ್‌ ಮಾಡಬೇಕಾಗುತ್ತದೆ. ಅನಂತರ ಶುಲ್ಕ ವನ್ನು ಕೂಡ ಆನ್‌ಲೈನ್‌ ಅಥವಾ ಬ್ಯಾಂಕ್‌ ಚಲನ್‌ ಮೂಲಕ ಕಟ್ಟಬಹುದು.

ಪರೀಕ್ಷೆ ಮಾದರಿ
ಕೇಂದ್ರಿಯ ವಿಶ್ವವಿದ್ಯಾಲಯದ ಪ್ರವೇಶಾತಿಗೆ ಬರೆಯುವ ಸಾಮಾನ್ಯ ಪರೀಕ್ಷೆ ಪ್ರಶ್ನೆಪತ್ರಿಕೆಯೂ ಪಾರ್ಟ್‌ ಎ-ಬಿ ಎರಡೂ ಭಾಗಗಳಲ್ಲಿ ಇರುತ್ತದೆ. ಪ್ರಶ್ನೆ ಪತ್ರಿಕೆಯೂ ಎಲ್ಲ ಪಶ್ನೆಗಳೂ ಬಹುಆಯ್ಕೆ ಮಾದರಿಯಲ್ಲಿರುತ್ತವೆ. ಎರಡು ಗಂಟೆಯ ಅವಧಿಯಾಗಿರುತ್ತದೆ. ಭಾಗ ಎ ದಲ್ಲಿ ಇಂಗ್ಲಿಷ್‌ ಭಾಷೆ ಹಾಗೂ ಅಪ್ಟಿಸಟ್ಯೂಡ್‌ ಆಧಾರಿಸಿ ಪ್ರಶ್ನೆಗಳಿರುತ್ತವೆ. ಬಿ ಭಾಗದಲ್ಲಿ ನಮ್ಮ ಆಯ್ಕೆಯ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಒಂದು ಉತ್ತರ ಸರಿಯಾದರೆ ಮೂರು ಅಂಕಗಳನ್ನು ನಿಗಧಿಪಡಿಸಲಾಗಿದ್ದು, ಆಕಸ್ಮಾತ್‌ಗೆ ಉತ್ತರ ತಪ್ಪಾದರೆ ಒಂದು ಅಂಕವನ್ನು ಕಡಿತಗೊಳಿಸಲಾಗುವುದು.

Advertisement

 ಶಿವ ಸ್ಥಾವರಮಠ

Advertisement

Udayavani is now on Telegram. Click here to join our channel and stay updated with the latest news.

Next