Advertisement

CTO Soroco: ಉದ್ದಿಮೆಯಲ್ಲಿ ಗೆದ್ದ ರೋಹನ್‌ ಮೂರ್ತಿ

10:33 PM Nov 02, 2023 | Team Udayavani |

ನವದೆಹಲಿ: ಇನ್ಫೋಸಿಸ್‌ ಸಂಸ್ಥಾಪಕ ಡಾ.ಎನ್‌.ಆರ್‌.ನಾರಾಯಣಮೂರ್ತಿ ಪುತ್ರ ರೋಹನ್‌ಮೂರ್ತಿ ಅವರು ಸಿಟಿಒ ಸೊರೊಕೊ ಎಂಬ ಕಂಪನಿ ಸ್ಥಾಪಿಸಿ ಯಶಸ್ಸು ಕಂಡಿದ್ದಾರೆ. ಇನ್ಫೋಸಿಸ್‌ ಸಹ ಅಧ್ಯಕ್ಷ ಸ್ಥಾನ ತ್ಯಾಗ ಮಾಡಿದ್ದ ಅವರು, ತಂದೆಯಂತೆಯೇ ಹೊಸ ಕಂಪನಿ ಸ್ಥಾಪನೆ ಮಾಡಿದ್ದಾರೆ. ಆಟೋಮೆಷನ್‌ನಲ್ಲಿ ಪ್ರಖ್ಯಾತವಾಗಿರುವ ಈ ಡಿಜಿಟಲ್‌ ಟ್ರಾನ್ಸ್‌ಫ‌ರ್ಮೇಶನ್‌ ಸಂಸ್ಥೆ 2022ರಲ್ಲಿ 150 ಕೋಟಿ ರೂ.ಗಳ ಆದಾಯಗಳಿಸಿದೆ.

Advertisement

ವಾರಕ್ಕೆ 70 ಗಂಟೆ ಕೆಲಸ ಮಾಡುವ ಬಗ್ಗೆ ಮಾತನಾಡಿದ ನಾರಾಯಣಮೂರ್ತಿಯವರ ಹೇಳಿಕೆ ಬಗ್ಗೆ ಚರ್ಚೆಯಾಗುತ್ತಿರುವಂತೆಯೇ ಅವರ ಪುತ್ರ ಹೊಸ ಉದ್ದಿಮೆ ಸ್ಥಾಪಿಸಿ ಸಾಧನೆ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ತಂದೆಯಂತೆಯೇ ಪುತ್ರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ಉದ್ದಿಮೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next