Advertisement

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

11:11 PM May 08, 2021 | Team Udayavani |

ಬೆಂಗಳೂರು: ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ. ಸ್ಕ್ಯಾನ್‌ಗೆ 1,500 ರೂ. ದರ ನಿಗದಿಪಡಿಸಿ ಆದೇಶ ಹೊರಡಿಸಿದ್ದ ರಾಜ್ಯ ಸರಕಾರ ಅದನ್ನು ಬಿಪಿಎಲ್‌ ಕಾರ್ಡ್‌ ಹೊಂದಿದವರಿಗೆ ಸೀಮಿತಗೊಳಿಸಿ ಬಾಕಿ ಉಳಿದವರಿಗೆ 2,500 ರೂ.ಗೆ ಹೆಚ್ಚಿಸಿದೆ.

Advertisement

ಕೆಲವು ಪ್ರಕರಣಗಳಲ್ಲಿ ಕೊರೊನಾ ರೂಪಾಂತರಿ ವೈರಾಣು ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲೂ ಪತ್ತೆಯಾಗುತ್ತಿಲ್ಲ. ಹೀಗಾಗಿ, ಸಿ.ಟಿ. ಸ್ಕ್ಯಾನ್‌ಗೆ ಬೇಡಿಕೆ ಹೆಚ್ಚಿತ್ತು.

ಖಾಸಗಿ ಪ್ರಯೋಗಾಲಯ ಮತ್ತು ಆಸ್ಪತ್ರೆಗಳು 5ರಿಂದ 8 ಸಾ. ರೂ. ವರೆಗೆ ಶುಲ್ಕ ಪಡೆಯುತ್ತಿವೆ ಎಂಬ ದೂರು ಕೇಳಿ ಬಂದಿದ್ದವು. ಇದಕ್ಕೆ ಕಡಿವಾಣ ಹಾಕಲು ಸರಕಾರ ಶುಕ್ರವಾರವಷ್ಟೇ 1,500 ರೂ. ದರ ನಿಗದಿ ಮಾಡಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಖಾಸಗಿ ವೈದ್ಯಕೀಯ ಸಂಸ್ಥೆಗಳು ಹಾಗೂ ಸ್ಕ್ಯಾನಿಂಗ್‌ ಕೇಂದ್ರಗಳು ಶುಲ್ಕ ಹೆಚ್ಚಿಸುವಂತೆ ಆಗ್ರಹಿಸಿದ್ದವು. ಪರಿಣಾಮ ಈಗ ಶುಲ್ಕವನ್ನು ಪರಿಷ್ಕರಿಸಲಾಗಿದೆ.

ಇದನ್ನೂ ಓದಿ :ಯಾವ ಶಿಕ್ಷೆ ಎದುರಿಸಲೂ ಸಿದ್ಧ : ಚು.ಆಯೋಗದ ಮುಖ್ಯಸ್ಥ ರಾಜೀವ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next