Advertisement

ಸಿದ್ದರಾಮಯ್ಯರದ್ದು ಗರತಿ ರಾಜಕಾರಣನಾ ? : ಸಿ.ಟಿ.ರವಿ

09:52 AM Nov 05, 2019 | sudhir |

ಕೊಪ್ಪಳ: ಅಮಿತ್ ಶಾ ಹಾಗೂ ಬಿಎಸ್‌ವೈ ಅವರನ್ನು ನಾಲಾಯಕ್ ಎನ್ನುವ ಸಿದ್ದರಾಮಯ್ಯ ಈ ಹಿಂದೆ ಜೆಡಿಎಸ್‌ನಿಂದ ಕೆಲವು ಶಾಸಕರನ್ನು ಆಪರೇಷನ್ ಮಾಡಿದ್ರಲ್ಲ. ಇವರದ್ದೇನು ಗರತಿ ರಾಜಕಾರಣನಾ ? ಎಂದು ಪ್ರವಾಸೋಧ್ಯಮ ಸಚಿವ ಸಿ.ಟಿ. ರವಿ ಅವರು ಸಿದ್ದು ವಿರುದ್ದ ವಾಗ್ಧಾಳಿ ನಡೆಸಿದರು.

Advertisement

ಕೊಪ್ಫಳದ ಗವಿಮಠಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿ, ಜೆಡಿಎಸ್‌ನಿಂದ ನಾರಾಯಣಸ್ವಾಮಿ, ಇಕ್ಬಾಲ್ ಅನ್ಸಾರಿ ಸೇರಿ ಇತರರನ್ನು ಏನನ್ನು ಹೇಳಿ ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಕರೆಸಿಕೊಂಡ್ರು. ಭೂತದ ಬಾಯಿಯಿಂದ ಭಗವದ್ಗೀತೆ ಬಂದಂತಾಗಿದೆ. ಅವರನ್ನು ಪಕ್ಷಾಂತರ ಮಾಡಿಸಿದ್ರಲ್ಲ. ಇವರದ್ದೇನು ಗರತಿ ರಾಜಕಾರಣನಾ ? ಗರತಿ ರಾಜಕಾರಣ ಆಗಿದ್ರೆ ಇವರು ಆ ಕೆಲಸ ಮಾಡ್ತಿದ್ರಾ ಎಂದರು.

ರಾಜಕಾರಣದಲ್ಲಿ ಮುಳ್ಳು ಮುಳ್ಳಿನಿಂದಲೇ ತೆಗೆಯಬೇಕಿದೆ. ಅದು ನಮಗೆ ಗೊತ್ತಿದೆ. ಯಾವ ಮುಳ್ಳನ್ನು ಹೇಗೆ ತೆಗೆಯಬೇಕು ಎಂಬುದು ಗೊತ್ತಿದೆ. ಕಾಂಗ್ರೆಸ್ ಈ ದೇಶಕ್ಕೆ ಅಂಟಿದ ಒಂದು ಮುಳ್ಳು. ಮಹಾತ್ಮ ಗಾಂಧೀಜಿ ಕಾಲದಲ್ಲಿದ್ದ ಕಾಂಗ್ರೆಸ್ ಸತ್ತೋಗಿದೆ. ಗಾಂಧಿ ಕಾಲದ ಕಾಂಗ್ರೆಸ್ ಏನು ಗೊತ್ತಾ, ಸರಳತೆ ತೋರಿಸುವ, ಸತ್ಯ ಹೇಳುವ, ಭ್ರಷ್ಟಾಚಾರ ಸಹಿಸದ, ಕುಟುಂಬ, ಸ್ವಜನ ಪಕ್ಷಪಾತ ಸಹಿಸದ ಕಾಂಗ್ರೆಸ್ ಆಗಿತ್ತು. ಈಗಿನ ಕಾಂಗ್ರೆಸ್ ಗೋಹತ್ಯೆ ಬೆಂಬಲಿಸುವ, ಕುಟುಂಬಕ್ಕೆ ಎಲ್ಲವೂ ಬೇಕೆನ್ನುವ, ಮಕ್ಕಳು, ಮರಿ ಮೊಮ್ಮಕ್ಕಳಿಗೆ ಬೇಕು. ಜಾತಿ ರಾಜಕಾರಣದ ಕಾಂಗ್ರೆಸ್ ಆಗಿದೆ. ಹಾಗಾಗಿ ಈ ಮುಳ್ಳನ್ನು ತೆಗೆಯಬೇಕಿದೆ ಎಂದರು.

ಇನ್ನೂ ಆಡಿಯೋ ವೈರಲ್ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅದರ ಸತ್ಯಾ ಸತ್ಯತೆಯೇ ಗೊತ್ತಿಲ್ಲ. ಅದೇ ಒಂದು ಸೃಷ್ಟಿ ಎಂದೆನ್ನಲಾಗುತ್ತಿದೆ. ಈಗ ಅನರ್ಹ ಶಾಸಕರ ಕೇಸ್ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಅದನ್ನು ಹೆಚ್ಚು ಚರ್ಚೆ ಮಾಡಲು ಹೋಗುವುದಿಲ್ಲ ಎಂದರು.

ಇನ್ನೂ ಯಡಿಯೂರಪ್ಪ ಅವರದ್ದು ಸರ್ವಾನುಮತದ ಆಯ್ಕೆ, ಆದರೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯದ್ದು ಸರ್ವಾನುಮತದ ಆಯ್ಕೆನಾ ? ವಿಪಕ್ಷ ನಾಯಕ ಸ್ಥಾನಕ್ಕೆ ಯಾರ‍್ಯಾರು ವಿರೋಧ ಮಾಡಿದ್ರು ಅಂತಾ ಪಟ್ಟಿ ಕೊಡ್ಲಾ ಎಂದರಲ್ಲದೇ, ಡಿ.ಕೆ.ಶಿವಕುಮಾರ, ಪರಮೇಶ್ವರ, ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯರನ್ನ ಸರ್ವಾನುಮತದಿಂದ ಆಯ್ಕೆ ಮಾಡಿದ್ರಾ ? ಇವರ‍್ಯಾರು ಸರ್ವಾನುಮತದಿಂದ ಆಯ್ಕೆ ಮಾಡಿಲ್ಲ. ಅವರದ್ದು ವಿವಾದದ ಆಯ್ಕೆ ಎಂದು ಟೀಕೆ ಮಾಡಿದರು.

Advertisement

ಟಿಪ್ಪು ಒಂದು ಮುಖ ಮಾತ್ರ ಎಲ್ಲರಿಗೂ ಗೊತ್ತಿದೆ. ಮೊದಲು ಕ್ರೌರ‍್ಯ ಮೆರೆದಿದ್ದ ತನ್ನ ಅಳಿವಿನ ಪ್ರಶ್ನೆ ಬಂದಾಗ ಉದಾರತೆ ತೋರಿದ್ದನು. ಆತನ ಅವಧಿಯಲ್ಲಿ ಹಿಂದುಗಳ ರಕ್ತದ ಕೋಡಿ ಹರಿದಿದೆ. ಇಂದಿಗೂ ಕೆಲವೊಂದು ಕುಟುಂಬ ನರಕ ಚತುರ್ಥಿ ಆಚರಣೆ ಮಾಡಲ್ಲ. ಟಿಪ್ಪವನ್ನು ನಾವು ಪರಕೀಯ ಎನ್ನಬಹುದು. ಟಿಪ್ಪು ಪಾರ್ಸಿ ಭಾಷೆಯನ್ನು ಆಳ್ವಿಕೆಗೆ ತಂದನು.

Advertisement

Udayavani is now on Telegram. Click here to join our channel and stay updated with the latest news.

Next