Advertisement

Hubballi: ಸಿಎಂ ಸಂವಿಧಾನ ಪರವೋ… ಶರಿಯತ್ ಕಾನೂನು ಪರವೋ ಸ್ಪಷ್ಟಪಡಿಸಬೇಕು: ಸಿ.ಟಿ.ರವಿ

04:42 PM Dec 04, 2024 | Team Udayavani |

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಂವಿಧಾನ ಪರವೋ ಅಥವಾ ಶರಿಯತ್ ಕಾನೂನು ಪರವೋ ಎಂಬುವುದನ್ನು ಸ್ಪಷ್ಟಪಡಿಸಬೇಕು. ಆಸ್ತಿ ಕಬಳಿಸುವ ವಕ್ಫ್ ಮಂಡಳಿಯ ವಕ್ಫ್ ನ್ಯಾಯಾಧಿಕರಣದಿಂದ ನ್ಯಾಯ ಸಿಗಲು ಸಾಧ್ಯವೇ ಎಂದು ವಿಧಾನಪರಿಷತ್ತು ಸದಸ್ಯ ಸಿ.ಟಿ.ರವಿ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 90 ಸಾವಿರ ಏಕರೆ ಕಬಳಿಸಲು ಹುನ್ನಾರ ಮಾಡಿದೆ ಇದು ಲ್ಯಾಂಡ್ ಜಿಹಾದ್. ಸ್ವತಃ ಸಿದ್ದರಾಮಯ್ಯ ಅವರ ಮನೆ ದೇವರು ಬೀರಲಿಂಗೇಶ್ವರ ದೇವಸ್ಥಾನ ಕೂಡ ವಕ್ಫ್ ಆಸ್ತಿ ಎಂದು ಹೇಳಲಾಗುತ್ತಿದೆ. ವಿಶ್ವೇಶ್ವರಯ್ಯ ಓದಿದ ಶಾಲೆ ಕೂಡ ವಕ್ಪ್ ಅಂತ ನಮೂದು ಮಾಡಿದ್ದಾರೆ.‌ಕಂಡಕಂಡವರ ಆಸ್ತಿ ಕಬಳಿಸಿ ಬೇಲಿ ಹಾಕಲು ವಕ್ಪ್ ಗೆ ಅಧಿಕಾರವಿಲ್ಲ ಎಂದರು.

ಧಾರವಾಡ ಜಿಲ್ಲೆ ಒಂದರಲ್ಲಿಯೇ 3000 ಎಕರೆ ವಕ್ಫ್ ಹೆಸರು ನಮೂದು ಮಾಡಲಾಗಿದೆ. 1500 ವರ್ಷದ ಹಿಂದಿನ ಸೋಮೇಶ್ವರ ದೇವಸ್ಥಾನವನ್ನು ಕೂಡ ಬಿಟ್ಟಿಲ್ಲ. ಇಸ್ಲಾಂ ಮತಗಳಿಗಾಗಿ ಅಸಂವಿಧಾನಿಕ ಕೆಲಸಗಳನ್ನು ಮಾಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರು ಶರಿಯತ್ ಕಾನೂನಿನಲ್ಲಿ ಇಲ್ಲವೆಂದರೆ ಕೂಡಲೇ ಅಧಿಸೂಚನೆ ರದ್ದುಪಡಿಸಲಿ. ವಕ್ಪ್ ಕಾನೂನು ದಲಿತರ ಹಾಗೂ ಶೋಷಿತರಿಗೆ ಮರಣ ಶಾಸನ ರೀತಿಯಲ್ಲಿದೆ. ಕಾಯಿದೆ ಎಲ್ಲಿಯವರೆಗೆ ಇರುತ್ತೇ ಅಲ್ಲಿಯವರೆಗೆ ಇದು ತೂಗುಗತ್ತಿ. ದಾನ ಕೊಟ್ಟ ಆಸ್ತಿ ಮಾತ್ರವೇ ವಕ್ಪ್ ನಿರ್ವಹಣೆ ಜವಾಬ್ದಾರಿ.

ಸಚಿವ ಜಮೀರ್ ಅಹ್ಮದ್ ಖಾನ್ ವಕ್ಫ್ ಅದಾಲತ್ ನಡೆಸಲು ಸಂವಿಧಾನದಲ್ಲಿ ಅವಕಾಶವಿಲ್ಲ. ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಬೇಕು. ವಕ್ಪ್ ಆಸ್ತಿಯ ಬಗ್ಗೆ ಸಂಪೂರ್ಣ ಪರಿಶೀಲನೆ ಆಗಬೇಕು. ಮುಖ್ಯಮಂತ್ರಿಗಳೇ ಜಮೀರ್ ಅಹ್ಮದ್ ಖಾನ್ ಗೆ ಸರ್ವಾಧಿಕಾರಿ ಕೊಟ್ಟಿದ್ದೀರಾ..? ಹೀಗಾಗಿಯೇ ಕಂಡವರ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಹೆಸರು ನಮೂದು ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: Malpe: ದಡ ಸೇರಿದ ದೋಣಿಗಳು; ಮತ್ಸ್ಯ ಕ್ಷಾಮದ ಜತೆಗೆ ಮತ್ತಷ್ಟು ಹೊಡೆತ

Advertisement
Advertisement

Udayavani is now on Telegram. Click here to join our channel and stay updated with the latest news.

Next