Advertisement

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

05:07 PM Apr 16, 2024 | Team Udayavani |

ವಿಜಯಪುರ : ಕಾಂಗ್ರೆಸ್ ಪಕ್ಷದಲ್ಲಿ ಭಾರತ ಮಾತಾಕಿ ಜೈ ಎನ್ನಲು ಶಾಸಕ ಲಕ್ಷ್ಮಣ ಸವದಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪರವಾನಿಗೆ ಕೇಳುತ್ತಾರೆ. ಪಾಕಿಸ್ಥಾನ ಜಿಂದಾಬಾದ್ ಎನ್ನಲು ಇವರಿಗೆ ಯಾರ ಪರವಾನಿಗೆ ಬೇಕಿಲ್ಲ. ಪಂಚಾಯತ್‍ನಿಂದ ಪಾರ್ಲಿಮೆಂಟ್ ವರೆಗೆ ಅವರು ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ ಮಾಜಿ ಸಚಿವ ಸಿ.ಟಿ.ರವಿ ಕುಟುಕಿದ್ದಾರೆ.

Advertisement

ಮಂಗಳವಾರ ವಿಜಯಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ರಮೇಶ ಜಿಗಜಿಣಗಿ ಪರ ಬಹಿರಂಗ ನಗರದ ದರ್ಬಾರ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಆದರೆ ಬಿಜೆಪಿ ಪಕ್ಷದಲ್ಲಿ ಭಾರತ ಮಾತಾ ಕಿ ಜೈ ಎನ್ನಲು ಯಾರ ಅನುಮತಿ ಬೇಕಿಲ್ಲ. ಎಲ್ಲೆಡೆ ಭಾರತ ಮಾತಾ ಕಿ ಜೈ ಎಂಬ ಘೋಷಣೆ ಕೇಳಿ ಬರಬೇಕು ಎಂದರು.

ದೇಶದಲ್ಲಿ ಬಿಜೆಪಿ ಗೆದ್ದರೆ ಭಾರತ ಮಾತಾಕಿ ಜೈ, ಕಾಂಗ್ರೆಸ್ ಗೆದ್ದರೆ ಪಾಕಿಸ್ತಾನಕ್ಕೆ ಹುಟ್ಟಿದ ಡ್ಯಾಶ್ ಡ್ಯಾಶ್ ಅವರು ಹೇಳುತ್ತಾರೆ. ಇದನ್ನು ಶಾಸಕ ಯತ್ನಾಳ ಬಹಳ ಚನ್ನಾಗಿ ಹೇಳುತ್ತಾರೆ ಎಂದ ರವಿ, ನೆರೆದ ಜನರ ಎರಡೂ ಕೈಮುಷ್ಟಿ ಕಟ್ಟಿಸಿ ಮೇಲೆತ್ತಿ ಭಾರತ ಮಾತಾಕಿ, ಹರ ಹರ ಮಹಾದೇವ, ಬಸವಣ್ಣ, ಕನಕದಾಸ, ವಾಲ್ಮೀಕಿ, ಅಂಬೇಡ್ಕರ್ ಪರ ಜಯ ಘೋಷಣೆ ಹಾಕಿಸಿದರು.

ಈ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಮನೆಗೆ ಹೋಗಿ ಬಾಂಬ್ ಹಾಕಬೇಡಿ, ಬದಲಾಗಿ ದೇಶದ ಕುರಿತು ಮನವರಿಕೆ ಮಾಡಿಕೊಡಿ. ದೇಶ ಉಳಿಸಲು ಬಿಜೆಪಿಗೆ ಮತ ಹಾಕಿ ಎಂದು ಮನವೋಲಿಸಿ ಎಂದು ಮನವಿ ಮಾಡಿದರು.

ಕೇಂದ್ರದಲ್ಲಿ 2004 ರಿಂದ 2014 ರವರೆಗೆ ಆಡಳಿತ ನಡೆಸಿದ ಕಾಂಗ್ರೆಸ್‍ನವರು ಆಕಾಶ, ಭೂಮಿ, ಪಾತಾಳದಲ್ಲೂ ಲೂಟಿ ಹೊಡೆದರು. ಆದರೆ ಮೋದಿ ನೇತೃತ್ವದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಹಗರಣ ರಹಿತ ಆಡಳಿತದ ಮೂಲಕ ಮಾಡಿದ ಸಾಧನೆ ಜನತೆಯ ಮುಂದಿದೆ. ಭವಿಷ್ಯದಲ್ಲೂ ದೇಶಕ್ಕೆ ಮೋದಿ ಗ್ಯಾರಂಟಿ ಎಂದರು.

Advertisement

ಗಂಡನಿಂದ ಕಿತ್ತು ಹೆಂಡತಿಗೆ ಗ್ಯಾರಂಟಿ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಟಿ.ರವಿ, ಕ್ವಾಟರ್ ಮದ್ಯದ ಬೆಲೆ 50 ಏರಿಕೆ ಮಾಡಿ, ಅದೇ ಹಣವನ್ನು ಮಹಿಳೆಯರಿಗೆ ನೀಡಲಾಗುತ್ತಿದೆ. ಪಹಣಿ ದರ ಏರಿಕೆ, ವಿದ್ಯುತ್ ಸಂರ್ಪಕ, ಬಸ್ ದರ ಹೀಗೆ ಎಲ್ಲವನ್ನೂ ಏರಿಕೆ ಮಾಡಿದ್ದಾರೆ. ಗಂಡನಿಂದ ಕಿತ್ತು ಹೆಂಡತಿಗೆ ನೀಡುವುದೇ ಸಿದ್ಧರಾಮಯ್ಯ ಕಾಂಗ್ರೆಸ್ ಗ್ಯಾರಂಟಿ ಎಂದು ಟೀಕಿಸಿದರು.

10 ಕೆಜಿ ಅಕ್ಕಿ ಎಲ್ಲಿ : ಕೇಂದ್ರದಿಂದ ಪ್ರಧಾನಿ ನರೇಂದ್ರ ಮೊದಿ ಅವರು ಕೊಡುವ ಅಕ್ಕಿ ಬಿಟ್ಟು ರಾಜ್ಯದ ಕಾಂಗ್ರೆಸ್ ಹೇಳಿದ್ದ ಅವರ ಸರ್ಕಾರದ 10 ಕೆ.ಜಿ. ಅಕ್ಕಿ ಎಲ್ಲಿದೆ ಎಂದು ಸಿದ್ಧರಾಮಯ್ಯ ಶೈಲಿಯಲ್ಲೇ ಕೆಣಕಿದ ರವಿ, ನುಡಿದಂತೆ ನಡೆದಿದ್ದೇವೆ ಎಂದರೆ ಏನು ಎಂದು ಪ್ರಶ್ನಿಸಿದರು.

ದಳ-ಬಿಜೆಪಿ ಹಳೆಯ ಸಂಬಂಧ : ಬಿಜೆಪಿ ಹಾಗೂ ಜನತಾ ದಳದ ಸಂಬಂಧ ಹೊಸದಲ್ಲ, ಹಳೆಯ ಸಂಬಂಧ. 1977 ರ ತುರ್ತು ಪರಸ್ಥಿತಿಯಲ್ಲಿ ಹಾಗೂ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ಬಿಜೆಪಿ ಪಕ್ಷದಿಂದ ನಾವು ಬೆಂಬಲ ನೀಡಿದ್ದೇವು ಎಂದರು.

ಈ ಹಿಂದೆ ಕೂಡ 20-20 ಮ್ಯಾಚ್ ಇದ್ದಾಗ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಮಾಜಿ ಪ್ರಧಾನಿ ದೇವೇಗೌಡರು ನಮಗೆ ಮಂಡಿ ನೋವಿದೆ ಆದರೆ ಬುದ್ದಿ ಇದೆ ಹಾಗಾಗಿ ಮೋದಿ ಅವರಿಗೆ ಬೆಂಬಲ ನೀಡಿದ್ದೇವೆ ಎಂದಿದ್ದಾರೆ ಎಂದ ಸಿ.ಟಿ.ರವಿ.

ಕಾಂಗ್ರೆಸ್ ಗಂಡೇ ಇಲ್ಲ : ಕಾಂಗ್ರೆಸ್ ನಲ್ಲಿ ಮದುವೆ ಗಂಡೇ ಇಲ್ಲ. ಗಂಡು ಯಾರೆಂದು ಗೊತ್ತಿಲ್ಲದೇ ಮದುವೆ ಆಗೋದು ಹೇಗೆ ಎಂದು ಛೇಡಿಸಿದ ಅವರು, ರಾಹುಲ್ ಗಾಂಧಿ ಮದುವೆ ಗಂಡು ಎಂದರೆ ಓಡಿ ಹೋಗುತ್ತಾರೆ, ನಮ್ಮ ಗಂಡು ನರೇಂದ್ರ ಮೋದಿ ಹತ್ತಾರು ಯೋಜನೆ ಮಾಡಿರೋ ಗಂಡು ಮೋದಿ ಎಂದು ಶ್ಲಾಘಿಸಿದರು.

ಡಿಕೆಶಿ `ಬ್ರದರ್ಸ್’ ವಿಚಾರಣೆ : ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶದಲ್ಲಿ ಬಾಂಬ್ ಸ್ಫೋಟಗಳದ್ಧೇ ಸುದ್ದಿ ಇರುತ್ತಿತ್ತು. ಮಂಗಳೂರಿನ ಶಾಲೆಯಲ್ಲಿ ಬಾಂಬ್ ಇಡುವ ಮುನ್ನವೇ ಸ್ಫೋಟಗೊಂಡ ಪ್ರಕರಣದ ಆರೋಪಿಗಳನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ನಮ್ಮ ಬ್ರದರ್ಸ್ ಎಂದಿದ್ದರು. ಇದೀಗ ಶಿವಕುಮಾರ ಅವರ 41 ಬ್ರದರ್ಸ್‍ಗಳನ್ನು ಎನ್‍ಐಎ ವಿಚಾರಣೆ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ರಾಜ್ಯದಲ್ಲಿ ಬಾಂಬ್ ತಯಾರಿಕೆ, ಸ್ಫೋಟ ಆರಂಭಗೊಂಡಿದೆ. ಉತ್ತರ ಪ್ರದೇಶದ ಯೋಗಿ ರೀತಿಯಲ್ಲಿ ಬುಲ್ಡೋಜರ್ ಆರಂಭಿಸಿದರೆ ಇಂಥವರನ್ನು ಮಟ್ಟ ಹಾಕಲು ಸಾಧ್ಯವಿದೆ ಎಂದರು.

ಜಾತಿಯಲ್ಲ ನೀತಿ ಚುನಾವಣೆ : ಪ್ರಸಕ್ತ ಚುನಾವಣೆ ಜಾತಿ ಆಧಾರಿತವಾಗಿ ನಡೆಯುತ್ತಿಲ್ಲ, ಬದಲಾಗಿ ನೀತಿ ಮೇಲೆ ಚುನಾವಣೆ ನಡೆಯುತ್ತಿದೆ. ದೇಶ ಉಳಿಸುವ ನಾಯಕ ಯಾರೆಂದು ಅರಿತು ದೇಶದ ಭವಿಷ್ಯಕ್ಕಾಗಿ ಜನರು ಬಿಜೆಪಿ ಪಕ್ಷಕ್ಕೆ ಮಹ ಹಾಕಲಿದ್ದಾರೆ ಎಂದರು.

ಕಾಂಗ್ರೆಸ್ ಉರಿಯೋ ಮನೆ : ಡಾ.ಬಿ.ಆರ್,ಅಂಬೇಡ್ಕರ್ ಅವರೇ ಹೇಳಿದಂತೆ ಕಾಂಗ್ರೆಸ್ ಹೊತ್ತಿ ಉಇರಿಯುವ ಮನೆ, ಹತ್ತಿರ ಹೋದರೆ ಭಸ್ಮವಾಗುತ್ತೀರಿ ಎಂದಿದ್ದರು. ಇದೇ ಕಾಂಗ್ರೆಸ್ ಡಾ.ಅಂಬೇಡ್ಕರ್ ಅವರನ್ನು ಸೋಲಿಸಿತ್ತು ಎಂಬುದನ್ನು ಮರೆಯಬಾರದು ಎಂದರು.

ಸಂವಿಧಾನ ಬದಲಾವಣೆ ಇಲ್ಲ : ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತದೆ ಎಂಬ ಸುಳ್ಳು ಸುದ್ದಿ ಹರಡಿಸಲಾಗಿದೆ. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂಬುದು ಸುಳ್ಳು. ಬದಲಾಗಿ ವಿಬಿಜೆಪಿ ಅಧಿಕಾರದಲ್ಲಿದ್ದಾಗ ುೀಸಲಾತಿ ಹೆಚ್ಚಿಸಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದೆ.

ಇದನ್ನೂ ಓದಿ: Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Advertisement

Udayavani is now on Telegram. Click here to join our channel and stay updated with the latest news.

Next