Advertisement

ಮೋದಿ ಬಂದ ಮೇಲೆ ಪದ್ಮಶ್ರೀ ಪ್ರಶಸ್ತಿ ಹಿರಿಮೆ-ಗರಿಮೆ ಹೆಚ್ಚಾಗಿದೆ: ಸಿಟಿ ರವಿ

12:45 PM Jan 26, 2023 | Team Udayavani |

ಚಿಕ್ಕಮಗಳೂರು :  ಮೋದಿ ಬಂದ ಮೇಲೆ ಪದ್ಮಶ್ರೀ ಪ್ರಶಸ್ತಿ ಹಿರಿಮೆ-ಗರಿಮೆ ಹೆಚ್ಚಾಗಿದೆ. ಈಗ ಪದ್ಮಶ್ರೀ ಪ್ರಶಸ್ತಿ ಪೀಪಲ್ ಪ್ರಶಸ್ತಿಯಾಗಿದೆ. ಈ ಹಿಂದೆ ಪದ್ಮಶ್ರೀ ಪ್ರಶಸ್ತಿಗೆ ದೊಡ್ಡ ಲಾಭಿ ನಡೆಯುತ್ತಿತ್ತು  ಈಗ ಜನರ ಭಾವನೆಯಿಂದ ಹೆಸರುವಾಸಿಯಾಗಿರುವವರಿಗೆ ಪ್ರಶಸ್ತಿ ಸಿಕ್ಕಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

Advertisement

ನಗರದಲ್ಲಿ ಮಾತನಾಡಿದ ಅವರು, ಎಲೆಮರೆಕಾಯಿಯಾಗಿ ಕೆಲಸ ಮಾಡುತ್ತಿರುವವರಿಗೆ ಪ್ರಶಸ್ತಿ ಹುಡುಕಿಕೊಂಡು ಬರ್ತಿವೆ. ಕರ್ನಾಟಕದ ಎಂಟು ಗಣ್ಯರಿಗೆ ಪದ್ಮಶ್ರೀ ಲಭಿಸಿದೆ, ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.

ಮುತ್ಸದ್ದಿ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದ ಎಸ್.ಎಂ.ಕೃಷ್ಣ ಗೆ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಹಂಕಾರದ ಅವಶೇಷವೂ ಇಲ್ಲದೆ, ಶ್ರೀಮಂತಿಕೆಯನ್ನ ಸೇವೆಗೆ ಉಪಯೋಗಿಸಿದವರು ಸುಧಾಮೂರ್ತಿಯವರು. ಸಾಹಿತ್ಯ ಕ್ಷೇತ್ರದಲ್ಲಿ ತನ್ನದೆ ಆದ ಚಾಪು‌ಮೂಡಿಸಿದವರು ಎಸ್.ಎಲ್.ಭೈರಪ್ಪ ಎಂದರು.

ಕಾಂಗ್ರೆಸ್ ಹತಾಶೆಯಾಗಿ ಉಚಿತ ಗಳ ಮಹಾಪೂರವನ್ನೇ ಹರಿಸುತ್ತಿದೆ. ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಅನ್ನೋದಕ್ಕೆ ಇತಿಹಾಸವೇ ಸಾಕ್ಷಿ. ರಾಜ್ಯದ ಜನರಿಗೆ ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ರಾಜಸ್ಥಾನದ ಚುನಾವಣೆ ಪ್ರಚಾರದ ವೇಳೆ ಕೊಟ್ಟ ಭರವಸೆಯನ್ನೇ ಈಡೇರಿಸಿಲ್ಲ. ರಾಜಸ್ಥಾನದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಹತ್ತು ದಿನದಲ್ಲಿ  ಸಾಲ ಮನ್ನಾ ಭರವಸೆ ನೀಡಿತ್ತು. ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ ನೀಡಿದ ಭರವಸೆಯನ್ನೇ ಈಡೇರಿಸಿಲ್ಲ ಎಂದರು.

ಇದನ್ನೂ ಓದಿ: ಇದು ಅಹಿಂಸೆ ಸಾರಿದ ಗಾಂಧಿ ಬೇಕಾ ಅವರನ್ನು ಕೊಂದ ಗೋಡ್ಸೆ ಬೇಕಾ ನಿರ್ಧರಿಸುವ ಚುನಾವಣೆ: ಬಿ.ಕೆ ಹರಿಪ್ರಸಾದ್

Advertisement

ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ.ರಾಜ್ಯದಲ್ಲಿ ಬಿಜೆಪಿಗೆ ನಿಶ್ಚಳವಾದ ಬಹುಮತ ಬರುವ ವಿಶ್ವಾಸವಿದೆ. ಕಾಂಗ್ರೆಸ್ ರಾಜ್ಯದಲ್ಲೂ ಮುಂಬರೋ ಚುನಾವಣೆಗಾಗಿ ಸುಳ್ಳು ಭರವಸೆ ನೀಡುತ್ತಿದೆ. ಹೆಸರು ಪ್ರಜಾಧ್ವನಿ ಯಾತ್ರೆ, ಆದ್ರೆ ಮಾಡುತ್ತಿರುವುದು ಪ್ರಜಾದ್ರೋಹದ ಕೆಲಸ ಎಂದು ವಾಗ್ದಾಳಿ ನಡೆಸಿದರು.

ಹಾಸನದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರ ಕುಟುಂಬದ ಒಳಗಿನ ಜಗಳದಲ್ಲಿ ನಮ್ಮ ಪಾತ್ರ ಏನಿಲ್ಲ. ಆ ಕುಟುಂಬದೊಳಗಿನ ಜಗಳದ ಒಳಗೆ ನಾವೇಕೆ ಕೈ ಹಾಕಬೇಕು. ಆ ಕುಟುಂಬದ ಜಗಳ ಅವರಿಗೆ ಬಿಡ್ತೀವಿ. ದೊಡ್ಡಗೌಡ್ರು ಕುಟುಂಬದ ಜಗಳದಲ್ಲಿ ನಾವು ತಲೆ ಹಾಕುವುದಕ್ಕೆ ಬಯಸುವುದಿಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next